ನವದೆಹಲಿ: ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ  ಔಷಧೀಯ ಪ್ರಯೋಜನಕ್ಕಾಗಿ ಗೋ ಮೂತ್ರವನ್ನು ಸೇವಿಸುತ್ತಿದ್ದರು ಎಂದು ಕೇಂದ್ರ ಸಚಿವ ಅಶ್ವಿನಿ ಚೌಬೆ ಭಾನುವಾರ ಹೇಳಿದ್ದಾರೆ. ಈಗ ಆಯುಷ್ ಸಚಿವಾಲಯವು ಹಸುವಿನ ಮೂತ್ರವನ್ನು ಔಷಧಿಗಳ ತಯಾರಿಕೆಗೆ ಮತ್ತು ಕ್ಯಾನ್ಸರ್ ಗುಣಪಡಿಸಲು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.


COMMERCIAL BREAK
SCROLL TO CONTINUE READING

"ಗೋಮೂತ್ರವು ತನ್ನದೇ ಆದ ಶಕ್ತಿಯನ್ನು ಹೊಂದಿದೆ. ಇದನ್ನು ವಿಶಿಷ್ಟವೆಂದು ಪರಿಗಣಿಸಲಾಗಿದೆ ಮತ್ತು ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಗುಣವನ್ನು ಹೊಂದಿದೆ. ಆಯುಷ್ ಸಚಿವಾಲಯವು ಗೋವಿನ ಮೂತ್ರವನ್ನು ಔಷಧಿಗಳನ್ನು ತಯಾರಿಸಲು ಮತ್ತು ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸಿಕೊಳ್ಳುವ ವಿಚಾರವಾಗಿ ಕಾರ್ಯನಿರ್ವಹಿಸುತ್ತದೆ ಮಾಡುತ್ತಿದೆ' ಎಂದು ಚೌಬೆ ಹೇಳಿದರು.


ಗೋಮೂತ್ರದ ಮಹತ್ವವನ್ನು ವಿವರಿಸುತ್ತಾ ಸಚಿವರು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಗೋಮೂತ್ರವನ್ನು ಸೇವಿಸುತ್ತಿದ್ದರು ಎಂದು ಹೇಳಿದರು. 'ಜನರು ತಮ್ಮ ರೋಗವನ್ನು ಗುಣಪಡಿಸಲು ಅನೇಕ ಬಾರಿ ಮೂತ್ರವನ್ನು ಕುಡಿಯುವುದನ್ನು ನಾವು ನೋಡುತ್ತೇವೆ. ನಮ್ಮ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಜಿ ಅವರೇ ಗೋ ಮೂತ್ರವನ್ನು ಸೇವಿಸುತ್ತಿದ್ದರು.  ಆದ್ದರಿಂದ ಗೋಮೂತ್ರದ ಮೇಲೆ ಸಂಶೋಧನೆ ಮಾಡುವ ಅವಶ್ಯಕತೆಯಿದೆ' ಎಂದು ತಿಳಿಸಿದರು.