ಇನ್ಮುಂದೆ ಮಾಜಿ ಪ್ರಧಾನಿಗಳ ಕುಟುಂಬ ಸದಸ್ಯರಿಗಿಲ್ಲ ಎಸ್ಪಿಜಿ ಭದ್ರತೆ
ಎಸ್ಪಿಜಿ ಕಾಯ್ದೆಗೆ ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದ ತಿದ್ದುಪಡಿಗಳ ಪ್ರಕಾರ ಮಾಜಿ ಪ್ರಧಾನ ಮಂತ್ರಿಗಳ ಕುಟುಂಬ ಸದಸ್ಯರನ್ನು ಉನ್ನತ ಮಟ್ಟದ ವಿಶೇಷ ಸಂರಕ್ಷಣಾ ಗುಂಪು ಕಮಾಂಡೋಗಳು ರಕ್ಷಣೆ ನೀಡುವುದಿಲ್ಲ ಎನ್ನಲಾಗಿದೆ.
ನವದೆಹಲಿ: ಎಸ್‌ಪಿಜಿ ಕಾಯ್ದೆಗೆ ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದ ತಿದ್ದುಪಡಿಗಳ ಪ್ರಕಾರ ಮಾಜಿ ಪ್ರಧಾನ ಮಂತ್ರಿಗಳ ಕುಟುಂಬ ಸದಸ್ಯರನ್ನು ಉನ್ನತ ಮಟ್ಟದ ವಿಶೇಷ ಸಂರಕ್ಷಣಾ ಗುಂಪು ಕಮಾಂಡೋಗಳು ರಕ್ಷಣೆ ನೀಡುವುದಿಲ್ಲ ಎನ್ನಲಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಎಸ್‌ಪಿಜಿ ಕವರ್ ರದ್ದುಪಡಿಸಿದ ಎರಡು ವಾರಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಎಸ್‌ಪಿಜಿ ಕಾಯ್ದೆ (ತಿದ್ದುಪಡಿ) ಮಸೂದೆಯನ್ನು ಮುಂದಿನ ವಾರ ಲೋಕಸಭೆಯಲ್ಲಿ ಪರಿಚಯಿಸಲು ಗೃಹ ಸಚಿವಾಲಯ ಸಜ್ಜಾಗಿದೆ.ನೂತನ ಕಾಯಿದೆಯು ಹಾಲಿ ಪ್ರಧಾನಿಗೆ ಮಾತ್ರ ಭದ್ರತೆಯನ್ನು ಒದಗಿಸುತ್ತದೆ" ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
1991ರಲ್ಲಿ ಎಲ್‌ಟಿಟಿಇ ಭಯೋತ್ಪಾದಕರು ರಾಜೀವ್ ಗಾಂಧಿಯವರ ಹತ್ಯೆಯ ನಂತರ ಮಾಜಿ ಪ್ರಧಾನ ಮಂತ್ರಿಗಳು ಮತ್ತು ಅವರ ಕುಟುಂಬ ಸದಸ್ಯರನ್ನು ಎಸ್‌ಪಿಜಿ ಕವರ್ ಗೆ ಸೇರಿಸಲಾಯಿತು. ಅದಕ್ಕೂ ಮೊದಲು ಪ್ರಧಾನಿಗೆ ಮಾತ್ರ ಎಸ್ಪಿಜಿ ರಕ್ಷಣೆಯನ್ನು ನೀಡಲಾಗುತ್ತಿತ್ತು.ಈಗ ಅದನ್ನೇ ನೂತನ ಮಸೂದೆಯಲ್ಲಿ ಪುನಃ ಪರಿಚಯಿಸಲ್ಪಟ್ಟಿದೆ ಎನ್ನಲಾಗಿದೆ.
ಈ ಕ್ರಮದಿಂದಾಗಿ ಈಗ ಪ್ರಧಾನಿ ನರೇಂದ್ರ ಮೋದಿ ಮಾತ್ರ ಎಸ್‌ಪಿಜಿ ರಕ್ಷಣೆಯಲ್ಲಿರುವ ಏಕೈಕ ವ್ಯಕ್ತಿಯಾಗಲಿದ್ದಾರೆ