ನವದೆಹಲಿ : ಆರ್‌ಜೆಡಿ ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಕೊರೋನಾದಿಂದ ಇಂದು ನಿಧನರಾಗಿದ್ದಾರೆ.


COMMERCIAL BREAK
SCROLL TO CONTINUE READING

ದೆಹಲಿಯ ಆಸ್ಪತ್ರೆಯಲ್ಲಿ ಅವರು ಕೋವಿಡ್ -19 ಚಿಕಿತ್ಸೆ ಪಡೆಯುತ್ತಿದ್ದರು. ಮೊಹಮ್ಮದ್ ಶಹಾಬುದ್ದೀನ್(Mohammad Shahabuddin) ಕೊಲೆಗೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ಅವರು ಇಂದು 53 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶಹಬುದ್ದೀನ್ ಅವರ ಸರಿಯಾದ ವೈದ್ಯಕೀಯ ಮೇಲ್ವಿಚಾರಣೆ ಮತ್ತು ಆರೈಕೆಯನ್ನು ಖಚಿತಪಡಿಸಿಕೊಳ್ಳಲು ದೆಹಲಿ ಹೈಕೋರ್ಟ್ ಆಮ್ ಆದ್ಮಿ ಪಕ್ಷ, ಸರ್ಕಾರ ಮತ್ತು ಜೈಲು ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ ಮೂರು ದಿನಗಳ ನಂತರ ಅವರು ಸಾವನ್ನಪ್ಪಿದ್ದಾರೆ. 


ಇದನ್ನೂ ಓದಿ : Corona Vaccine: ಇಂದಿನಿಂದ ಈ 6 ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕರೋನಾ ಲಸಿಕೆ


ಕೋವಿಡ್ -19(COVID-19) ರೋಗಿಗಳನ್ನು ನೋಡಿಕೊಳ್ಳುವುದಕ್ಕಾಗಿ ಕರ್ತವ್ಯದಲ್ಲಿರುವ ವೈದ್ಯರು ಶಹಾಬುದ್ದೀನ್ ಅವರ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಅಗತ್ಯವಿದ್ದರೆ ಆಸ್ಪತ್ರೆಯ ಹಿರಿಯ ವೈದ್ಯರೊಂದಿಗೆ ಸಮಾಲೋಚಿಸಬೇಕು ಎಂದು ನ್ಯಾಯಮೂರ್ತಿ ಪ್ರತಿಬಾ ಎಂ ಸಿಂಗ್ ಹೇಳಿದ್ದರು.


ಇದನ್ನೂ ಓದಿ : Fire in Hospital: ಕೋವಿಡ್ ಆರೈಕೆ ಕೇಂದ್ರದಲ್ಲಿ ಅಗ್ನಿ ಅನಾಹುತ, 16 ಮಂದಿ ಸಜೀವ ದಹನ


ಶಹಾಬುದ್ದೀನ್ ಗೆ ಕುಟುಂಬದ ಸದಸ್ಯರೊಂದಿಗೆ ದಿನಕ್ಕೆ ಎರಡು ಬಾರಿ ಮಾತನಾಡಲು ಅನುಮತಿ ನೀಡಬೇಕು ಮತ್ತು ಅವರ ಜೀವ ರಕ್ಷಣೆ ಮತ್ತು ಆಸ್ಪತ್ರೆ(Hospital)ಯಲ್ಲಿ ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಮೇಲ್ವಿಚಾರಣೆಗಾಗಿ ಅವರು ಮಾಡಿದ ಮನವಿಯನ್ನು ವಿಲೇವಾರಿ ಮಾಡಬೇಕೆಂದು ನ್ಯಾಯಾಲಯವು ನಿರ್ದೇಶಿಸಿತ್ತು.


ಇದನ್ನೂ ಓದಿ : ಮತ ಎಣಿಕೆಗೂ ಮೊದಲು ಅಭ್ಯರ್ಥಿಗಳಿಗೆ ಮಮತಾ ಬ್ಯಾನರ್ಜೀಯಿಂದ Virtual crash course


ಆದರೆ, ಜೈಲಿನ ನಿಯಮಗಳ ಪ್ರಕಾರ, ಕೈದಿ ಜೈಲಿನ ಹೊರಗೆ ಇರುವಾಗ ಕುಟುಂಬ ಸದಸ್ಯರಿಗೆ ಕರೆ ಮಾಡಲು ಅನುಮತಿ ಇಲ್ಲ ಎಂದು ದೆಹಲಿ ಸರ್ಕಾರ(Delhi Govt)ದ ಹೆಚ್ಚುವರಿ ಸ್ಥಾಯಿ ಸಲಹೆಗಾರ ಸಂತೋಷ್ ಕೆ ತ್ರಿಪಾಠಿ ಹೇಳಿದ್ದಾರೆ.


ಇದನ್ನೂ ಓದಿ : Big Decision: ವೈಯಕ್ತಿಕ ಬಳಕೆಗೆ Oxygen Concentrators ಆಮದು ಮಾಡಿಕೊಳ್ಳಲು ಅನುಮತಿ ನೀಡಿದ ಸರ್ಕಾರ


ಶಹಾಬುದ್ದೀನ್‌ಗೆ ಸರಿಯಾದ ವೈದ್ಯಕೀಯ ಸೇವೆ ನೀಡಲಾಗುತ್ತಿದೆ ಮತ್ತು ಅದು ಮುಂದುವರಿಯುತ್ತದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.


ಇದನ್ನೂ ಓದಿ : India's Covid Crisis: ಸೇನಾ ಪಡೆಗೆ ತುರ್ತು ಆರ್ಥಿಕ ಅಧಿಕಾರ ನೀಡಿದ ಕೇಂದ್ರ


ದೆಹಲಿಯಲ್ಲಿ ಆಮ್ಲಜನಕ ಮತ್ತು ಇತರ ಔಷಧಿಗಳ ಕೊರತೆ ಇರುವುದರಿಂದ ಸರಿಯಾದ ಚಿಕಿತ್ಸೆ ಸಿಗುವುದಿಲ್ಲ ಎಂದು ಬಿಹಾರ್ ನಾಯಕ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.