ನವದೆಹಲಿ: ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಅವರು ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಸೋಮವಾರ ಗಾಜಿಯಾಬಾದ್‌ನ ದಾಸ್ನಾದಲ್ಲಿರುವ ದೇವಿ ದೇವಾಲಯದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಹಿಂದೂ ಧರ್ಮಕ್ಕೆ ಸೇರ್ಪಡೆಯಾದರು.


COMMERCIAL BREAK
SCROLL TO CONTINUE READING

ರಿಜ್ವಿ ತನ್ನ ಹೆಸರನ್ನು ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ ಎಂದು ಬದಲಾಯಿಸಲು ನಿರ್ಧರಿಸಿದ್ದಾರೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ದೇಗುಲದ ಪ್ರಧಾನ ಅರ್ಚಕ ಯತಿ ನರಸಿಂಹಾನಂದ ಸರಸ್ವತಿ ಅವರ ಸಮ್ಮುಖದಲ್ಲಿ ಮತಾಂತರ ಕಾರ್ಯಕ್ರಮ ನಡೆಯಿತು.'


"ನಾನು 'ಸನಾತನ ಧರ್ಮ'ವನ್ನು ಅಳವಡಿಸಿಕೊಂಡಿದ್ದೇನೆ. ಏಕೆಂದರೆ ಅದು ಹಳೆಯ ಧರ್ಮಗಳಲ್ಲಿ ಒಂದಾಗಿದೆ" ಎಂದು ರಿಜ್ವಿ ಹೇಳಿದರು.


ಕಳೆದ ತಿಂಗಳು, ಅವರು "ಮುಹಮ್ಮದ್" ಎಂಬ ಶೀರ್ಷಿಕೆಯ ಪುಸ್ತಕವನ್ನು ಬಿಡುಗಡೆ ಮಾಡಿದ ನಂತರ ಟೀಕೆಗೆ ಗುರಿಯಾಗಿದ್ದರು. ಅದರಲ್ಲಿ ಅವರು ಆಕ್ಷೇಪಾರ್ಹ ಹೇಳಿಕೆಗಳನ್ನು ಮಾಡಿದ್ದಾರೆ ಎಂದು ವರದಿಯಾಗಿದೆ. ಪ್ರವಾದಿ ಮುಹಮ್ಮದ್ ರ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿದ್ದ ವಾಸಿಂ ರಿಜ್ವಿ ಅವರಿಗೆ ಮುಸ್ಲಿಂ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. 


ಇದನ್ನೂ ಓದಿ: ಸಿದ್ದರಾಮಯ್ಯ ಬಣದ ಹಿಂಸೆ ತಡೆಯದೆ ಡಿಕೆಶಿ ಈ ಮಾತು ಹೇಳುತ್ತಿರಬಹುದು: ಬಿಜೆಪಿ ವ್ಯಂಗ್ಯ


ಅಲ್ಲದೆ ಅವರಿಗೆ ಸಾಕಷ್ಟು ಬೆದರಿಕೆಗಳೂ ಬರುತ್ತಿದ್ದವು. ಈ ಕುರಿತು ಸ್ವತಃ ರಿಜ್ವಿ ಅವರೇ ಸಾಕಷ್ಟು ಬಾರಿ ಹೇಳಿಕೊಂಡಿದ್ದರು. ಇದೀಗ ಮತ್ತೊಮ್ಮೆ ಈ ಕುರಿತು ಮಾತನಾಡಿರುವ ಅವರು, "ನನ್ನನ್ನು ಇಸ್ಲಾಂನಿಂದ ಹೊರಹಾಕಲಾಗಿದೆ. ಪ್ರತಿ ಶುಕ್ರವಾರ ನನ್ನ ತಲೆಯ ಮೇಲೆ ಬಹುಮಾನವನ್ನು ಹೆಚ್ಚಿಸಲಾಗುತ್ತಿದೆ. ಹಾಗಾಗಿ ಇಂದು ನಾನು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುತ್ತಿದ್ದೇನೆ" ಎಂದು ಹೇಳಿದ್ದಾರೆ.


"ಇಂದು, ನಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ. ಸನಾತನ ಧರ್ಮವು ಪ್ರಪಂಚದ ಮೊದಲ ಧರ್ಮವಾಗಿದೆ. ನಾನು ಸನಾತನ ಧರ್ಮವನ್ನು ಗೌರವಿಸುತ್ತೇನೆ. ಇದು ಮಾನವೀಯತೆಯ ನಂಬಿಕೆಯಿಂದ ತುಂಬಿದೆ" ಎಂದು ವಾಸಿಂ ರಿಜ್ವಿ ಹೇಳಿದರು.