ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ RJD ಮುಖಂಡ ರಘುವಂಶ ಪ್ರಸಾದ್ ಸಿಂಗ್ ಇನ್ನಿಲ್ಲ
ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ RJD ಮುಖಂಡ ರಘುವಂಶ ಪ್ರಸಾದ್ ಸಿಂಗ್ ದೆಹಲಿಯ AIIMS ನಲ್ಲಿ ಇಂದು ನಿಧನರಾಗಿದ್ದಾರೆ.
ನವದೆಹಲಿ: ಮಾಜಿ ಕೇಂದ್ರ ಸಚಿವ ರಘುವಂಶ ಪ್ರಸಾದ್ ಸಿಂಗ್ (Raghuvansha Prasad Singh) ಅವರು ದೆಹಲಿ ಏಮ್ಸ್ ನಲ್ಲಿ ಇಂದು ನಿಧನರಾಗಿದ್ದಾರೆ. ಕೊರೊನಾ ಸೋಂಕಿ (Coronavirus)ಗೆ ಗುರಿಯಾಗಿ ಗುಣಮುಖರಾಗಿದ್ದ ಅವರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾದ ಕಾರಣ ಅವರನ್ನು ಮತ್ತೆ ಏಮ್ಸ್ ಗೆ ದಾಖಲಿಸಲಾಗಿತ್ತು. ರಘುವಂಶ ಪ್ರಸಾದ್ ಸಿಂಗ್ ಅವರನ್ನು ಏಮ್ಸ್ ನ ಐಸಿಯು ವಾರ್ಡ್‌ಗೆ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದೆ ಅವರ ಸ್ಥಿತಿ ಹದಗೆಟ್ಟಿತ್ತು. ಉಸಿರಾಟದ ತೊಂದರೆಯ ನಂತರ ಆತನನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕೇಂದ್ರದ ಮಾಜಿ ಸಚಿವ ರಘುವಂಶ ಪ್ರಸಾದ್ ಸಿಂಗ್ ಅವರು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿಧನರಾಗಿದ್ದಾರೆ. ಅವರು ವೆಂಟಿಲೇಟರ್‌ನಲ್ಲಿದ್ದರು. ಅವರ ಸಾವಿನ ಬಗ್ಗೆ ರಾಜಕೀಯ ಕಾರಿಡಾರ್‌ನಲ್ಲಿ ಶೋಕದ ಅಲೆ ಇದೆ. ಈ ಮೊದಲು ಐಸಿಯುನಿಂದಲೇ ಅವರು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಗೆ ರಾಜೀನಾಮೆ ಪತ್ರವನ್ನು ನೀಡಿದ್ದರು. ಈ ಕುರಿತು RJD ವರಿಷ್ಠ ಲಾಲು ಪ್ರಸಾದ್ ಯಾದವ್ ಅವರಿಗೂ ಕೂಡ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿದ್ದ ಲಾಲು ಯಾದವ್, ನೀವು ಎಲ್ಲಿಗೂ ಹೋಗುವುದಿಲ್ಲ ನೀವು ಪಕ್ಷದಲ್ಲಿಯೇ ಮುಂದುವರೆಯಲಿರುವಿರಿ ಎಂದಿದ್ದರು.
ರಘುವಂಶ ಪ್ರಸಾದ್ ಸಿಂಗ್ ಅವರ ನಿಧಾನಕ್ಕೆ ಶೋಕ ವ್ಯಕ್ತ ಪಡಿಸಿರುವ RJD ವರಿಷ್ಠ ಲಾಲು ಯಾದವ, " ಆತ್ಮೀಯ ರಘುವಂಶ ಬಾಬು, ಇದೇನು ಮಾಡಿದಿರಿ... ಎರಡು ದಿನಗಳ ಹಿಂದೆಯಷ್ಟೇ ನೀವು ಎಲ್ಲಿಗೂ ಹೋಗುವುದಿಲ್ಲ ಎಂದು ಹೇಳಿದ್ದೆ. ಆದರೆ, ನೀವು ಇಷ್ಟೊಂದು ದೂರ ಹೊರತು ಹೋಗಿದ್ದೀರಿ.. ನಿಶಬ್ದನಾಗಿದ್ದೇನೆ... ದುಃಖಿತನಾಗಿದ್ದೇನೆ, ನಿಮ್ಮ ನೆನಪು ಕಾಡಲಿದೆ" ಎಂದಿದ್ದಾರೆ.