ನವದೆಹಲಿ: ನಾಗಾಲ್ಯಾಂಡಿನ ಲಾಂಗ್ಲೆಂಗ್ ಜಿಲ್ಲೆಯಲ್ಲಿ ಭಾನುವಾರದಂದು ಇಲಿ-ರಂಧ್ರ ಕಲ್ಲಿದ್ದಲು ಗಣಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಆದರೆ ಇನ್ನು ಅವರು ಗಣಿಯಲ್ಲಿ ಇಳಿದಿರುವ ಕಾರಣ ತಿಳಿದುಬಂದಿಲ್ಲ ಎನ್ನಲಾಗಿದೆ.ಇನ್ನೊಂದೆಡೆ ಅವರ ಕುಟುಂಬದ ಸದಸ್ಯರು ಪೋಸ್ಟ್ ಮಾರ್ಟಂ ಮಾಡಲು ನಿರಾಕರಿಸಿದ್ದರಿಂದ ಸಾವಿನ ಕಾರಣವನ್ನು ಕಂಡು ಹಿಡಿಯಲಾಗಿಲ್ಲ ಎಂದು  ಅಧಿಕಾರಿಗಳು ತಿಳಿಸಿದ್ದಾರೆ. 


ಮೃತಪಟ್ಟಿರುವ ನಾಲ್ವರು ಅಸ್ಸಾಂ ಮೂಲದವರಾಗಿದ್ದು ,ಸ್ಥಗಿತಗೊಂಡಿರುವ ಗಣಿಯಲ್ಲಿ ಅವರು ಸಾವನ್ನಪ್ಪಿದ್ದಾರೆ.ತಮಗೆ ಸಂಬಂಧಿಸಿದೆ ಸಾಮಗ್ರಿ ಹಾಗೂ ಸಾಮಾನುಗಳನ್ನು ಹಿಂಪಡೆಯಲು ಗಣಿಯ ಒಳಗೆ ಹೋಗಿರುವ ಸಾಧ್ಯತೆ ಇದೇ  ಇಂತಹ ಸಂದರ್ಭದಲ್ಲಿ ಅಲ್ಲಿನ ವಿಷ ಅನಿಲವನ್ನು ಸೇವಿಸಿ ಮೃತಪಟ್ಟಿರುವ ಸಾಧ್ಯತೆ ಇದೇ ಎಂದು ಲಾಂಗ್ಲೆಂಗ್ ಜಿಲ್ಲೆಯ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.


ಕಲ್ಲಿದ್ದಲು ಗಣಿಯಲ್ಲಿ ಮೃತಪಟ್ಟವರನ್ನು ಕೃಷ್ಣ ಗೊಗೊಯ್ (32), ಟುಟು ಡಿಕಾ (28), ಜಿತನ್ ತಂತಿ (40) ಮತ್ತು ಸುಶಾನ್ ಫುಟಾನ್ (37) ಎಂದು ಗುರುತಿಸಲಾಗಿದೆ