ನವದೆಹಲಿ: ರಿಕ್ಟರ್ ಮಾಪಕದಲ್ಲಿ 5.5 ರಷ್ಟಿರುವ ಭೂಕಂಪನವು ಅರುಣಾಚಲ ಪ್ರದೇಶದ ಪೂರ್ವ ಕಾಮೆಂಗ್‌ನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಆದರೆ, ಈವರೆಗೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಶುಕ್ರವಾರ ಮತ್ತು ಶನಿವಾರದಂದು ಕ್ರಮವಾಗಿ 5.5, 5.6, 3.8 ಮತ್ತು 4.9 ತೀವ್ರತೆಯ ನಾಲ್ಕು ಭೂಕಂಪಗಳು ಅರುಣಾಚಲಪ್ರದೇಶದಲ್ಲಿ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೊದಲ ಭೂಕಂಪನವು ಮಧ್ಯಾಹ್ನ 2.52 ಕ್ಕೆ ಸಂಭವಿಸಿದೆ ಮತ್ತು ಅರುಣಾಚಲ ಪ್ರದೇಶದ ಪೂರ್ವ ಕಾಮೆಂಗ್ ಜಿಲ್ಲೆ ಇದರ ಕೇಂದ್ರ ಬಿಂದುವಾಗಿದೆ ಎಂದು ಐಎಎನ್‌ಎಸ್ ವರದಿ ಮಾಡಿದೆ.


ಪೂರ್ವ ಕಾಮೆಂಗ್‌ನ ಮತ್ತೊಂದು ಸ್ಥಳದಲ್ಲಿ 10 ಕಿ.ಮೀ ಆಳದಲ್ಲಿ ಎರಡನೇ ಭೂಕಂಪ 3.8  ತೀವ್ರತೆಯಲ್ಲಿ ಶುಕ್ರವಾರ ಮಧ್ಯಾಹ್ನ 3.04 ಕ್ಕೆ ಸಂಭವಿಸಿದೆ ಎನ್ನಲಾಗಿದೆ. ಮೂರನೇ ಭೂಕಂಪವು 4.9 ರ ತೀವ್ರತೆಯಲ್ಲಿ ಮಧ್ಯಾಹ್ನ 3.21 ಕ್ಕೆ ದಾಖಲಾಗಿದೆ. ಅರುಣಾಚಲದ ಕುರುಂಗ್ ಕುಮೆ ಜಿಲ್ಲೆಯಲ್ಲಿ ಇದರ ಕೇಂದ್ರಬಿಂದು 95 ಕಿ.ಮೀ ಆಳದಲ್ಲಿತ್ತು ಎಂದು ಇಲಾಖೆ ತಿಳಿಸಿದೆ.


ಶನಿವಾರ ಮುಂಜಾನೆ 4: 24 ಕ್ಕೆ ರಿಕ್ಟರ್‌ನ ಪ್ರಮಾಣದಲ್ಲಿ 5.5 ರ ತೀವ್ರತೆಯೊಂದಿಗೆ ಪೂರ್ವ ಕಾಮೆಂಗ್‌ನಿಂದ ನಾಲ್ಕನೇ ಭೂಕಂಪವು ಸಂಭವಿಸಿದೆ. ಇದು 7.7 ° N ಅಕ್ಷಾಂಶ ಮತ್ತು 92.7 ° E ನ ರೇಖಾಂಶವನ್ನು ಹೊಂದಿತ್ತು ಎನ್ನಲಾಗಿದೆ. ವರದಿಗಳ ಪ್ರಕಾರ ಅಸ್ಸಾಂನ ಕೆಲವು ಭಾಗಗಳಲ್ಲಿ ಮತ್ತು ಚೀನಾದ ಗಡಿಯಲ್ಲಿ ನಡುಕ ಉಂಟಾಗಿದೆ. ಭೂಕಂಪಶಾಸ್ತ್ರಜ್ಞರ ಪ್ರಕಾರ, ಈಶಾನ್ಯ ಪ್ರದೇಶವು ಭೂಕಂಪನ ನಕ್ಷೆಯಲ್ಲಿ ವಲಯ 5 ರ ಅಡಿಯಲ್ಲಿ ಬರುತ್ತದೆ, ಇದರಿಂದಾಗಿ ರಾಜ್ಯಗಳು ಭೂಕಂಪಗಳಿಗೆ ಒಳಗಾಗುತ್ತವೆ ಎನ್ನಲಾಗಿದೆ.