ಶ್ರೀನಗರ: ಇತ್ತೀಚಿನ ದಿನಗಳಲ್ಲಿ ಕಣಿವೆ ರಾಜ್ಯದಲ್ಲಿ ಎನ್‌ಕೌಂಟರ್‌ಗಳು ಮುಂದುವರೆದಿದ್ದು ಭದ್ರತಾ ಪಡೆಗಳು ಶನಿವಾರ (ಜೂನ್ 13) ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ (Kulgam) ಮತ್ತು ಅನಂತ್‌ನಾಗ್ (Anantnag) ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಕನಿಷ್ಠ ನಾಲ್ಕು ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ.


COMMERCIAL BREAK
SCROLL TO CONTINUE READING

ಇಬ್ಬರು ಅಪರಿಚಿತ ಭಯೋತ್ಪಾದಕರು ಕೊಲ್ಲಲ್ಪಟ್ಟರು. ಶೋಧ ಮುಂದುವರೆದಿದ್ದು ಹೆಚ್ಚಿನ ವಿವರಗಳಿಗಾಗಿ ಕಾಯುತ್ತಿರುವುದಾಗಿ ಕಾಶ್ಮೀರ ವಲಯ ಪೊಲೀಸರು ಇಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ, ಕುಲ್ಗಮ್ನ ನಿಪೊರಾ ಪ್ರದೇಶದಲ್ಲಿ ಎನ್ಕೌಂಟರ್ (Encounter) ಪ್ರಾರಂಭವಾಗಿದೆ ಎಂದು ಈ ಹಿಂದೆ ಟ್ವೀಟ್ ಮಾಡಿದ್ದು, ಪೊಲೀಸ್ ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ಮುಂದುವರೆಸಿರುವುದಾಗಿ ಹೇಳಲಾಗಿದೆ.


ಇದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರ (Jammu and Kashmir) ಪೊಲೀಸರ ಜಂಟಿ ತಂಡ, ಸೇನೆಯ 19 ರಾಷ್ಟ್ರೀಯ ರೈಫಲ್ಸ್ ಮತ್ತು ಕೇಂದ್ರ ಮೀಸಲು ಪೊಲೀಸ್ (CRPF) ಶುಕ್ರವಾರ ರಾತ್ರಿ ಕುಲ್ಗಂ ಜಿಲ್ಲೆಯ ನಿಪೊರಾ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಸಾಧ್ಯತೆಯ ಬಗ್ಗೆ ಒಳಹರಿವು ಸ್ವೀಕರಿಸಿದ ಬಳಿಕ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅವರು ಸ್ಥಳಕ್ಕೆ ಸಮೀಪಿಸುತ್ತಿದ್ದಂತೆ ಮರೆಯಾಗಿದ್ದ ಭಯೋತ್ಪಾದಕರಿಂದ ಅವರ ಮೇಲೆ ಗುಂಡು ಹಾರಿಸಲಾಯಿತು. ಭದ್ರತಾ ಪಡೆಗಳು ಸಹ ಪ್ರತ್ಯುತ್ತರವಾಗಿ ಗುಂಡು ಹಾರಿಸಿದವು, 


ಮತ್ತೊಂದೆಡೆ ಅನಂತ್‌ನಾಗ್‌ನ ಲಾಲನ್ ಪ್ರದೇಶದಲ್ಲಿ ಶನಿವಾರದಂದು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಒಂದು ಕಾರ್ಡನ್ ಹಾಕಲಾಯಿತು ಮತ್ತು ಭಯೋತ್ಪಾದಕರೊಂದಿಗೆ ಸಂಪರ್ಕವನ್ನು ಸ್ಥಾಪಿಸಲಾಯಿತು. ಇದರ ಹೊರತಾಗಿಯೂ, ಗುಂಡಿನ ಚಕಮಕಿ ನಡೆದು ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದರು ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.