ಪಣಜಿ: ಗೋವಾದಲ್ಲಿ ನೂತನವಾಗಿ ಆಯ್ಕೆಯಾಗಿರುವ ನಾಲ್ಕು ಶಾಸಕರಿಗೆ ಸ್ಪೀಕರ್ ಮೈಕೆಲ್ ಲೋಬೊ ಇಂದು ಪ್ರಮಾಣವಚನ ನೀಡಿದರು.


COMMERCIAL BREAK
SCROLL TO CONTINUE READING

ಇತ್ತೀಚಿಗೆ ರಾಜ್ಯದಲ್ಲಿ ನಡೆದ ಉಪಚುನಾವನೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಥಾನಶಿಯಾ ಮಾನ್ಸ್ರೇಟ್ ಮತ್ತು ಬಿಜೆಪಿಯಿಂದ ಸುಭಾಶ್ ಶಿರೋಡ್ಕರ್, ದಯಾನಂದ ಸೋಪ್ಟೆ ಮತ್ತು ಜೋಶುವಾ ಡಿ ಸೋಜಾ ಕ್ರಮವಾಗಿ ಪಣಜಿ, ಶಿರೋಡಾ, ಮಾಂಡ್ರೆಮ್ ಮತ್ತು ಮಾಪುಸಾ ವಿಧಾನಸಭಾ ಕ್ಷೇತ್ರಗಳಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಉಪಚುನಾವಣೆ ಏಪ್ರಿಲ್ 23 ಮತ್ತು ಮೇ 19 ರಂದು ಎರಡು ಹಂತಗಳಲ್ಲಿ ನಡೆಯಿತು.


ಈ ಶಾಸಕರ ಆಯ್ಕೆಯೊಂದಿಗೆ ಗೋವಾದಲ್ಲಿ ಶಾಸಕರ ಬಲ 40 ಆಗಿದೆ. ಪ್ರಸ್ತುಕ ಆಡಳಿತಾರೂಢ ಬಿಜೆಪಿ 17 ಶಾಸಕರನ್ನು ಹೊಂದಿದ್ದರೆ, ಗೋವಾ ಫಾರ್ವರ್ಡ್ 3 ಶಾಸಕರನ್ನು, ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ 1 ಮತ್ತು 3 ಸ್ವತಂತ್ರ ಅಭ್ಯರ್ಥಿಗಳ ಬೆಂಬಲ ಪಡೆದಿದೆ.


ವಿರೋಧ ಪಕ್ಷ ಕಾಂಗ್ರೆಸ್ 15 ಶಾಸಕರನ್ನು ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಒಬ್ಬ ಶಾಸಕನನ್ನು ಒಳಗೊಂಡಿದೆ.