ಫ್ರಿಡ್ಜ್ ಸ್ಫೋಟಕ್ಕೆ ನಾಲ್ವರ ಸಾವು
ಗ್ವಾಲಿಯರ್ನ ಮನೆಯಲ್ಲಿ ರೆಫ್ರಿಜರೇಟರ್ನಲ್ಲಿ ಸ್ಫೋಟದಿಂದಾಗಿ ನಾಲ್ಕು ಜನರು ಮೃತಪಟ್ಟಿದ್ದಾರೆ.
ನವದೆಹಲಿ: ಕಳೆದ ರಾತ್ರಿ ಗ್ವಾಲಿಯರ್ನ ದರ್ಪಣ್ ಕಾಲೋನಿ ಪ್ರದೇಶದಲ್ಲಿರುವ ಒಂದು ಮನೆಯಿಂದ ಭಾರೀ ಸ್ಫೋಟ ಕೇಳಿಬಂದಿತ್ತು. ಈ ಸ್ಫೋಟ ಎಷ್ಟರ ಮಟ್ಟಿಗಿತ್ತು ಎಂದರೆ ಇದರಿಂದಾಗಿ ಮನೆಯ ಗೋಡೆಯು ನೆರೆಮನೆಯ ಗೋಡೆಯ ಮೇಲೆ ಬಿದ್ದಿತು, ಇದರಿಂದ ನೆರೆಯ ಮನೆಯಲ್ಲಿ ಮಲಗಿದ್ದ ಒಂಬತ್ತು ಮಂದಿ ಕಲ್ಲುಮಣ್ಣಿನ ಅವಶೇಷಗಳಡಿ ಸಿಲುಕಿದರು. ಈ ಘಟನೆಯಲ್ಲಿ ಮನೆಯ ಯಜಮಾನ ಸೇರಿದಂತೆ ಕುಟುಂಬದ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಐದು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯು ಗ್ವಾಲಿಯರ್ ನ ಉತ್ತರಾಂಚಲ್ ದರ್ಪಣ್ ಕಾಲೋನಿಯಲ್ಲಿರುವ ಅನಂತರಾಮ್ ಅವರ ನೆರೆಯ ರಾಣಾ ಜಿ ಯವರ ಮನೆಯಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತು. ನಂತರ ತೀಕ್ಷ್ಣವಾದ ಸ್ಫೋಟದಿಂದಾಗಿ ಗೋಡೆಯು ಅನಂತರಾಮ್ ಅವರ ಮನೆ ಮೇಲೆ ಬಿದ್ದಿದೆ. ಇದರಿಂದಾಗಿ ಅನಂತರಾಮ್ ಅವರ ಮನೆ ಕುಸಿದಿದೆ. ಇದರಿಂದಾಗಿ ಮನೆಯಲ್ಲಿ ಮಲಗಿದ್ದ ಒಂಬತ್ತು ಮಂದಿ ಅವಶೇಷಗಳಡಿ ಸಿಲುಕಿದರು. ಅವರಲ್ಲಿ ಅನಂತರಾಮ್ ಅವರ ಪತ್ನಿ ಉಮಾ, ಇಬ್ಬರು ಪುತ್ರಿಯರಾದ ಖುಷಿ ಮತ್ತು ಕಶಿಶ್ ಮೃತಪಟ್ಟಿದ್ದು, ಕುಟುಂಬದ ಇನ್ನುಳಿದ ಐವರು ಸದಸ್ಯರಿಗೆ ಗಾಯಗಳಾಗಿವೆ.
ಸ್ಫೋಟ ಸಂಭವಿಸಿದ ಬಳಿಕ, ಹತ್ತಿರದ ಜನರು ಥಟ್ಟಿಪುರ ಪೊಲೀಸರಿಗೆ ಮಾಹಿತಿ ನೀಡಿದರಲ್ಲದೆ, ರಕ್ಷಣಾ ಕಾರ್ಯದಲ್ಲಿ ಭಾಗಿಯಾದರು. ನಂತರ ಪೋಲಿಸ್ ಸಹಾಯದಿಂದ ಜನರು ಕುಟುಂಬ ಐದು ಸದಸ್ಯರನ್ನು ಸುರಕ್ಷಿತವಾಗಿ ಅವಶೇಷಗಳಡಿಯಿಂದ ರಕ್ಷಿಸಿದ್ದಾರೆ. ಮಾಹಿತಿಯ ಪ್ರಕಾರ, ರಾಣಾ ಜಿ ಮನೆಯಲ್ಲಿ ಎ.ಸಿ. ಮತ್ತು ರೆಫ್ರಿಜಿರೇಟರ್ನಿಂದ ಅನಿಲ ಸೋರಿಕೆಯ ಕಾರಣ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಇದೀಗ ಪೊಲೀಸರು ಈ ಪ್ರಕರಣದ ತನಿಖೆಯಲ್ಲಿ ನಡೆಸುತ್ತಿದ್ದಾರೆ.