ನವದೆಹಲಿ:ಲಾಕ್ ಡೌನ್ ಅವಧಿಯಲ್ಲಿ ಅವಶ್ಯಕತೆ ಇರುವವರಿಗೆ ನೆರವು ನೀಡುವ ಉದ್ದೇಶದಿಂದ ದೆಹಲಿ ಸರ್ಕಾರ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇದರದೇ ಒಂದು ಭಾಗವಾಗಿ ಸರ್ಕಾರ ಮೇ ಒಂದೇ ತಿಂಗಳಿನಲ್ಲಿ ರೇಶನ್ ಕಾರ್ಡ್ ಇಲ್ಲದೆ ಇರುವ ಸುಮಾರು 38 ಲಕ್ಷ ಜನರಿಗೆ ಉಚಿತವಾಗಿ ಪಡಿತರ ನೀಡುವುದಾಗಿ ಘೋಷಿಸಿದೆ. ಇನ್ನೊಂದೆಡೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಉಚಿತ ಪಡಿತರಕ್ಕಾಗಿ ಇ-ಕೂಪನ್ ಪಡೆದ ರೇಶನ್ ಕಾರ್ಡ್ ಧಾರಕರಿಗೆ ಮಾತ್ರ ಪಡಿತರ ವಿತರಿಸಲಾಗುವುದು ಎಂದು ಸರ್ಕಾರ ಹೇಳಿದೆ.


COMMERCIAL BREAK
SCROLL TO CONTINUE READING

ಗೋಧಿ ಮತ್ತು ಭತ್ತದ ಜೊತೆಗೆ ಸಿಗಲಿದೆ ಕೊರೊನಾ ರಿಲೀಫ್ ಕಿಟ್
ಈ ಕುರಿತು ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ, ಮೇ ತಿಂಗಳಲ್ಲಿ 38 ಲಕ್ಷ ಜನರಿಗೆ 4 ಕೆಜಿ ಗೋಧಿ ಮತ್ತು ಪ್ರತಿ ವ್ಯಕ್ತಿಗೆ 1 ಕೆಜಿ ಅಕ್ಕಿ ನೀಡಲಾಗುವುದು ಎಂದು ಘೋಷಿಸಿದೆ. ಪ್ರತಿ ಕುಟುಂಬಕ್ಕೆ ಕರೋನಾ ರಿಲೀಫ್ ಕಿಟ್ ದೊರಕಲಿದ್ದು, ಇದನ್ನು ಪಡಿತರ ಚೀಟಿ ಹೊಂದಿರುವವರಿಗೆ (ರೇಷನ್ ಕಾರ್ಡ್) ಮಾತ್ರ ನೀಡಲಾಗುತ್ತಿದೆ. ಕರೋನಾ ರಿಲೀಫ್ ಕಿಟ್‌ನಲ್ಲಿ 1 ಲೀಟರ್ ಸಂಸ್ಕರಿಸಿದ ಎಣ್ಣೆ, 1 ಕೆಜಿ ಕಡಲೆ, 1 ಕೆಜಿ ಸಕ್ಕರೆ, 1 ಕೆಜಿ ಉಪ್ಪು, 200 ಗ್ರಾಂ ಅರಿಶಿನ ಪುಡಿ, 200 ಗ್ರಾಂ ಧಾನಿಯಾ ಪುಡಿ, 200 ಗ್ರಾಂ ಮೆಣಸಿನ ಪುಡಿ ಮತ್ತು 2 ಬಾರ್ ಸೋಪ್ ಸಿಗಲಿದೆ.


ಇ-ರಿಕ್ಷಾ ಮಾಲೀಕರಿಗೂ ಕೂಡ ಸಿಗಲಿದೆ ನೆಮ್ಮದಿ
ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಾರ್ವಜನಿಕ ಸೇವಾ ವಾಹನಗಳ ಚಾಲಕರಿಗೆ ದೆಹಲಿ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ದೆಹಲಿ ಸರ್ಕಾರ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಪಿಎಸ್‌ವಿ (ಸಾರ್ವಜನಿಕ ಸೇವಾ ವಾಹನ) ಚಾಲಕರಿಗೆ ತಮ್ಮ ಬ್ಯಾಂಕ್ ಖಾತೆಯಲ್ಲಿ 5–5 ಸಾವಿರ ರೂ. ಈಗ ಪಿಎಸ್‌ವಿ ಬ್ಯಾಡ್ಜ್‌ಗಳಿಲ್ಲದ ಇ ರಿಕ್ಷಾ ಮತ್ತು ಪ್ಯಾರಾ ಟ್ರಾನ್ಸಿಟ್ ವಾಹನಗಳ ಚಾಲಕರಿಗೆ ಒಟ್ಟು 5000 ರೂ.ಗಳನ್ನು ನೀಡಲಾಗುವುದು ಎಂದು ಹೇಳಿದೆ. ಈ ನೆರವು ಪಡೆಯಲು ದೆಹಲಿಯಲ್ಲಿ ಇ-ರಿಕ್ಷಾ ನೋಂದಣಿ ಕಡ್ಡಾಯವಾಗಿದೆ.