ನವದೆಹಲಿ: ಚಳಿಗಾಲದ ಪ್ರಾರಂಭವಾಗುತ್ತಿದ್ದಂತೆ ಹಿಮಾಚಲ ಪ್ರದೇಶದ ಉನ್ನತ ಸ್ಥಳಗಳಲ್ಲಿ ಭಾರಿ ಹಿಮಪಾತ ಸಂಭವಿಸುತ್ತಿ.ದೆ. ಹಿಮಾಚಲ ಪ್ರದೇಶ ಮತ್ತು ಲಾಹೌಲ್ ಪ್ರದೇಶಗಳ ಉನ್ನತ ಸ್ಥಳಗಳಲ್ಲಿ ಗುರುವಾರ ವರ್ಷದ ಮೊದಲ ಹಿಮಪಾತ ಸಂಭವಿಸಿದೆ. ಈ ಭಾಗದಲ್ಲಿ ಹವಾಮಾನವು ತಂಪಾಗುತ್ತಿದ್ದರೆ, ಮತ್ತೊಂದೆಡೆ ಪ್ರವಾಸಿಗರು ಹಿಮಪಾತವನ್ನು ಅನುಭವಿಸುತ್ತಿದ್ದಾರೆ. ಆದರೆ ನೀವು ಈ ಸಮಯದಲ್ಲಿ ಹಿಮಾಚಲ ಪ್ರದೇಶದಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದರೆ, ಇಲ್ಲಿನ ಪ್ರದೇಶಗಳ ತಾಪಮಾನವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.


COMMERCIAL BREAK
SCROLL TO CONTINUE READING


ಶಿಮ್ಲಾದಲ್ಲಿ ಹಿಮಪಾತದ ನಂತರ ಹೋಟೆಲ್ ವೀಕ್ಷಣೆ (ಫೋಟೋ ANI)


ಹಿಮಾಚಲ ಪ್ರದೇಶದ ಹೆಚ್ಚಿನ ಸ್ಥಳಗಳಲ್ಲಿ ಹಿಮಪಾತ ಬಳಿಕ ಉಷ್ಣಾಂಶದಲ್ಲಿ ಭಾರಿ ಕುಸಿತ ಕಂಡಿದೆ.



ಶಿಮ್ಲಾದ ಹಿಮಪಾತ (ಫೋಟೋ ANI)


ಮನಾಲಿಯಲ್ಲಿ ತಾಪಮಾನ -1.2 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಕೆಲ್ಲಾಂಗ್ನಲ್ಲಿ 24 ಗಂಟೆಗಳ ಅವಧಿಯಲ್ಲಿ -3.3 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತದ ಹವಾಮಾನ ಇಲಾಖೆಯ (ಐಎಂಡಿ) ತಿಳಿಸಿದೆ.



ಸಾಂಗ್ಲಾ ಕಣಿವೆಯಲ್ಲಿ ಹಿಮಪಾತ (ಫೋಟೋ ANI)


ಇದಲ್ಲದೆ, ಕಳೆದ 24 ಗಂಟೆಗಳಲ್ಲಿ ಕಲ್ಪಾದಲ್ಲಿ, ತಾಪಮಾನವು -0.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕುಫ್ರಿದಲ್ಲಿನ ತಾಪಮಾನವು -0.3 ಸೆಲ್ಸಿಯಸ್ ತಲುಪಿದೆ.



ಸೋಲಾಂಗ್ ಕಣಿವೆಯಲ್ಲಿ ಹಿಮಪಾತ (ಫೋಟೋ ANI)


ಹಿಮಪಾತದ ನಂತರ, ಶಿಮ್ಲಾ ನಗರದಲ್ಲಿ 3.3 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. ಧರ್ಮಶಾಲಾದಲ್ಲಿ ತಾಪಮಾನವು 8.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.