ನವದೆಹಲಿ: ಅಂತರ್ಜಾಲದಲ್ಲಿ ಪ್ರಸ್ತುತ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಕಪ್ಪೆಯೊಂದು ಫೈರ್ ಫ್ಲೈ (ಬೆಳಕಿನ ಹುಳು) ಅನ್ನು ನುಂಗಿದೆ. ಬಳಿಕ ಬೆಳಕಿನ ಹುಳುವಿನ ಬೆಳಕು ಕಪ್ಪೆಯ ಹೊಟ್ಟೆಯಿಂದ ಬರಲಾರಂಭಿಸಿದೆ. ಟ್ವಿಟ್ಟರ್ ಮೇಲೆ ಈ ವಿಡಿಯೋ ಅನ್ನು 84 ಸಾವಿರಕ್ಕೂ ಅಧಿಕ ಬಾರಿಗೆ ವಿಕ್ಷೀಸಲಾಗಿದೆ.


COMMERCIAL BREAK
SCROLL TO CONTINUE READING

14 ಸೆಕೆಂಡ್ ಅವಧಿಯ ಈ ವಿಡಿಯೋದಲ್ಲಿ ಕಪ್ಪೆಯೊಂದು ಗೋಡೆಯೊಂದರ ಮೇಲೆ ಅಂಟಿಕೊಂಡಿದೆ. ಕೆಲವೇ ಸೆಕೆಂಡ್ ಗಳ ಬಳಿಕ ಅದರ ಹೊಟ್ಟೆಯಿಂದ ಬೆಳಕು ಹೊಳೆಯಲಾರಂಭಿಸುತ್ತದೆ ಬಳಿಕ ಬೆಳಕು ಮಾಯವಾಗುತ್ತದೆ.


ಒಂದು ನಿಯಮಿತ ಅಂತರದಲ್ಲಿ ಈ ಬೆಳಕು ಪುನಃ ಕಾಣಿಸಿಕೊಳ್ಳುತ್ತದೆ. ಏಕೆಂದರೆ ಕಪ್ಪೆ ಕತ್ತಲಲ್ಲಿ ಹೊಳೆಯುವ ಕೀಟವನ್ನು ನುಂಗಿದೆ. ರಾತ್ರಿಯ ಹೊತ್ತು ಹೊಳೆಯುವ ದುಂಬಿಗಳ ಕಾರಣ ಕಪ್ಪೆಯ ಹೊಟ್ಟೆಯಲ್ಲಿಯೂ ಕೂಡ ಪದೆಪದೆ ಬೆಳಕು ಕಾಣಿಸಿಕೊಂಡಿದೆ .


ಇದಕ್ಕೂ ಮೊದಲು ಟ್ವಿಟ್ಟರ್ ಮೇಲೆ ಈ ರೀತಿಯ ವಿಡಿಯೋ ಎಂದಿಗೂ ವಿಕ್ಷೀಸಲಾಗಿಲ್ಲ. 11 ಸೆಪ್ಟೆಂಬರ್ ಗೆ ಟ್ವೀಟ್ ಮಾಡಲಾಗಿರುವ ಈ ವಿಡಿಯೋ ಅನ್ನು ಇದುವರೆಗೆ 84 ಸಾವಿರಕ್ಕೂ ಅಧಿಕ ಜನರು ವಿಕ್ಷೀಸಿದ್ದಾರೆ.