ಇಂದಿನಿಂದ ಈ ನಗರದಲ್ಲಿ ಅಕ್ರಮ ಪಾರ್ಕಿಂಗ್ ಮಾಡಿದಲ್ಲಿ 23,000 ರೂ ದಂಡ...!
ಇಂದಿನಿಂದ, ಮುಂಬೈ ರಸ್ತೆಗಳಲ್ಲಿ ಅಕ್ರಮವಾಗಿ ವಾಹನ ನಿಲುಗಡೆಗೆ ಮಾಡಿದಲ್ಲಿ ನಿಮ್ಮ ದಂಡವು ಕಾರ್ಯಾಗಾರದಲ್ಲಿ ಕಾರ ಸರ್ವಿಸ್ ಗೆ ನೀಡುವ ಬಿಲ್ ಗಿಂತ ಅಧಿಕವಾದರೆ ನೀವು ಆಶ್ಚರ್ಯಪಡಬೇಡಿ.
ನವದೆಹಲಿ: ಇಂದಿನಿಂದ, ಮುಂಬೈ ರಸ್ತೆಗಳಲ್ಲಿ ಅಕ್ರಮವಾಗಿ ವಾಹನ ನಿಲುಗಡೆಗೆ ಮಾಡಿದಲ್ಲಿ ನಿಮ್ಮ ದಂಡವು ಕಾರ್ಯಾಗಾರದಲ್ಲಿ ಕಾರ ಸರ್ವಿಸ್ ಗೆ ನೀಡುವ ಬಿಲ್ ಗಿಂತ ಅಧಿಕವಾದರೆ ನೀವು ಆಶ್ಚರ್ಯಪಡಬೇಡಿ.
ಹೌದು, ಈಗ ಇಂತದ್ದೇ ನಿಯಮವೊಂದನ್ನು ಈಗ ಮುಂಬೈ ಮಹಾನಗರ ಪಾಲಿಕೆ ಮತ್ತು ಮುಂಬೈ ಟ್ರಾಫಿಕ್ ಪೊಲೀಸರು ಜಾರಿಗೆ ತರುತ್ತಿದ್ದಾರೆ. ಈ ನಿಯಮದ ಪ್ರಕಾರ ಮುಂಬೈನ 26 ಸಾರ್ವಜನಿಕ ಪಾರ್ಕಿಂಗ್ ಸ್ಥಳಗಳ 500 ಮೀಟರ್ ತ್ರಿಜ್ಯದೊಳಗೆ ತಮ್ಮ ವಾಹನವನ್ನು ಯಾವುದೇ ಪಾರ್ಕಿಂಗ್ ವಲಯಗಳಲ್ಲಿ ನಿಲ್ಲಿಸಲು ಸಿಕ್ಕಿಬಿದ್ದವರಿಗೆ 5,000 ದಿಂದ ರೂ. 23,000.ರೂ ದಂಡವನ್ನು ಅಕ್ರಮ ಪಾರ್ಕಿಂಗ್ ಗಾಗಿ ನೀಡಬೇಕಾಗುತ್ತದೆ ಎನ್ನಲಾಗಿದೆ.
ಈ ನಿಯಮದನ್ವಯ ರೂ 5000 ರಿಂದ , 8,300 ಮತ್ತು ದ್ವಿಚಕ್ರ ವಾಹನಗಳಿಗೆ ರೂ. 10,000 ದಿಂದ ರೂ. ನಾಲ್ಕು ಚಕ್ರಗಳಿಗೆ 23,250 ರೂ. ಮಧ್ಯಮ ವಾಹನಗಳ ಮಾಲೀಕರು ರೂ. 11,000 ರಿಂದ ರೂ. 17,600, ಲಘು ಮೋಟಾರು ವಾಹನಗಳು ರೂ. 10,000 ದಿಂದ ರೂ. 15,100 ಮತ್ತು ತ್ರಿಚಕ್ರ ವಾಹನಗಳಿಗೆ ದಂಡ ರೂ. 8,000 ರಿಂದ ರೂ. 12,200 ರೂ.ಇರಲಿದೆ ಎನ್ನಲಾಗಿದೆ.
ಈ ನಿಯಮವನ್ನು ಪ್ರಮುಖವಾಗಿ ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವ ಪರಿಪಾಠಕ್ಕೆ ತಡೆಯನ್ನೋಡ್ದುವ ಉದ್ದೇಶವನ್ನು ಹೊಂದಿದೆ ಎನ್ನಲಾಗಿದೆ.