Covid-19 New Wave: ನಾಳೆಯಿಂದ ಬದಲಾಗಲಿದೆ ವಿಮಾನ ಪ್ರಯಾಣದ ನಿಯಮ
Covid-19 New Wave:ಚೀನಾದ ಹೊರತಾಗಿ, ಕರೋನಾದ ಹೊಸ ರೂಪಾಂತರವು ಜಪಾನ್ ಮತ್ತು ಅಮೆರಿಕದಲ್ಲಿಯೂ ತನ್ನ ಪರಿಣಾಮವನ್ನು ತೋರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಸಂಘ ಸಲಹೆ ನೀಡಿದೆ.
Covid-19 New Wave : ಚೀನಾದಲ್ಲಿ ಕೋವಿಡ್ -19 ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಭಾರತ ಸರ್ಕಾರ ಎಚ್ಚೆತ್ತುಕೊಂಡಿದೆ. ಪ್ರಕರಣ ಮತ್ತೆ ವೇಗವಾಗಿ ಹರಡುತ್ತಿರುವುದನ್ನು ಕಂಡು ವೈದ್ಯರು ಕೂಡ ಆಶ್ಚರ್ಯಚಕಿತರಾಗಿದ್ದಾರೆ. ಚೀನಾದ ಹೊರತಾಗಿ, ಕರೋನಾದ ಹೊಸ ರೂಪಾಂತರವು ಜಪಾನ್ ಮತ್ತು ಅಮೆರಿಕದಲ್ಲಿಯೂ ತನ್ನ ಪರಿಣಾಮವನ್ನು ತೋರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಸಂಘ ಸಲಹೆ ನೀಡಿದೆ. ಸರ್ಕಾರ ಕೂಡ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆರಂಭಿಸಿದೆ. ವಿಮಾನಯಾನ ಸಚಿವಾಲಯದ ಪರವಾಗಿ, ಡಿಸೆಂಬರ್ 24 ರಿಂದ ಅಂತರರಾಷ್ಟ್ರೀಯ ವಿಮಾನಗಳಿಂದ ಬರುವ ಕೆಲವು ಪ್ರಯಾಣಿಕರಿಗೆ ಕರೋನವೈರಸ್ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ.
ಪ್ರತಿ ವಿಮಾನದಿಂದ 2 ಪ್ರತಿಶತ ಪ್ರಯಾಣಿಕರನ್ನು ಪರೀಕ್ಷಿಸಲಾಗುವುದು :
ವಿಶ್ವದ ವಿವಿಧ ದೇಶಗಳಲ್ಲಿ ಕರೋನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದೆ. 'ಪ್ರತಿ ವಿಮಾನದಲ್ಲಿ ಒಟ್ಟು ಪ್ರಯಾಣಿಕರಲ್ಲಿ ಶೇಕಡಾ 2 ರಷ್ಟು ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸುವಂತೆ ಅಧಿಕೃತ ಪತ್ರದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯದ ರಾಜೀವ್ ಬನ್ಸಾಲ್ ಅವರಿಗೆ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಪತ್ರ ಬರೆದಿದ್ದಾರೆ. ಪರೀಕ್ಷೆಯ ನಂತರ ಯಾರಾದರೂ ಕೋವಿಡ್ ಪಾಸಿಟಿವ್ ಎಂದು ಕಂಡುಬಂದರೆ, ಮಾದರಿಯನ್ನು ಜೀನೋಮಿಕ್ ಪರೀಕ್ಷೆಗೆ ಕಳುಹಿಸಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ : Corona Cases in the World: ವಿಶ್ವದಲ್ಲಿ ಎಷ್ಟಾಗಿದೆ ಗೊತ್ತಾ ಕೊರೊನಾ ಪ್ರಕರಣಗಳು: ಯುಎಸ್-ಭಾರತದಲ್ಲಿ ಬೆಚ್ಚಿ ಬೀಳಿಸುವಂತಿದೆ ಅಂಕಿಅಂಶ
ಸ್ಯಾಂಪಲ್ ನೀಡಿದ ನಂತರವೇ ಏರ್ ಪೋರ್ಟ್ ನಿಂದ ಹೊರ ಬರಬಹುದು :
ಹೊರ ದೇಶಗಳಿಂದ ಬರುವ ಪ್ರತಿಯೊಂದು ವಿಮಾನ ಯಾತ್ರಿಕರ ಪರಿಶಿಯಾನೆಯನ್ನು ಆಯಾ ವಿಮಾನಯಾನ ಸಂಸ್ಥೆಗಳು ನೋಡಿಕೊಳ್ಳುತ್ತವೆ. ರಾಂಡಂ ಪರೀಕ್ಷೆಗೆ ಒಳಪಟ್ಟ ನಂತರವೇ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿ ನೀಡಲಾಗುತ್ತದೆ. ಮುಂಬರುವ ದಿನಗಳಲ್ಲಿ ಚೀನಾದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಪ್ರತಿದಿನ 10 ಲಕ್ಷ ಜನರು ಸೋಂಕಿಗೆ ಒಳಗಾಗುತ್ತಾರೆ ಮತ್ತು ಸಾವಿನ ಸಂಖ್ಯೆ 5 ಸಾವಿರ ತಲುಪಬಹುದು. ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ನೀಡಿದ ಅಪ್‌ಡೇಟ್ ಪ್ರಕಾರ, ದೇಶದಲ್ಲಿ 185 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳು 3,402 ಕ್ಕೆ ಇಳಿದಿವೆ.
ಇದನ್ನೂ ಓದಿ : Mansukh Mandaviya : 'ಕೊರೊನಾ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ, ಬೂಸ್ಟರ್ ಡೋಸ್ ಪಡೆಯಿರಿ'
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.