Punjab Assembly Election 2022 : ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧೆಗಿಳಿದ ಸೋನು ಸೂದ್ ಸಹೋದರಿ! ಪಾರ್ಟಿ ಯಾವುದು?
ಈ ಸಂದರ್ಭದಲ್ಲಿ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಎಲ್ಲಿಂದ ಮತ್ತು ಯಾವ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಮಾಧ್ಯಮದವರು ಕೇಳಿದಾಗ, ಇದೀಗ ಯಾವುದೇ ಪಕ್ಷವನ್ನು ಹೆಸರಿಸುವುದು ಸರಿಯಲ್ಲ, ಶೀಘ್ರದಲ್ಲೇ ಪಕ್ಷಕ್ಕೆ ಸೇರುತ್ತೇನೆ ಅದನ್ನ ಹೇಳಿತ್ತೇನೆ ಎಂದು ಹೇಳಿದರು.
ಚಂಡೀಗಢ : 2022ರ ಪಂಜಾಬ್ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಸೋನು ಸೂದ್ ಬೇರೆ ಬೇರೆ ಪಕ್ಷಗಳಿಗೆ ಹೋಗುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯ, ಕೆಲವು ದಿನಗಳ ಹಿಂದೆ, ಸೋನು ಸೂದ್ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನೂ ಭೇಟಿ ಮಾಡಿದ್ದಾರೆ. ಇದಾದ ನಂತರ ವಿವಿಧ ರಾಜಕೀಯ ಪಾಳಯಗಳಲ್ಲಿ ಗುಸು ಗುಸು ಶುರುವಾಗಿದೆ.
ಇದಕ್ಕೆ ಸೋನು ಸೂದ್ ಹೇಳಿದ್ದೇನು?
ಬಾಲಿವುಡ್ ನಟ ಸೋನು ಸೂದ್(Sonu Sood) ಇಂದು (ಭಾನುವಾರ) ಪಂಜಾಬ್‌ನ ಮೋಗಾ ತಲುಪಿದ್ದಾರೆ. ಸೋನು ಸೂದ್ ಮೊಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸೋನು ಸೂದ್, ನಮ್ಮ ಕುಟುಂಬ ಸಮಾಜ ಸೇವಾ ಕ್ಷೇತ್ರದೊಂದಿಗೆ ಬೆಸೆದುಕೊಂಡಿದೆ. ಬಡ ಮತ್ತು ನಿರ್ಗತಿಕ ಕುಟುಂಬಗಳಿಗೆ ಸಹಾಯ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ. ನಿರ್ಗತಿಕರಿಗೆ ಚಿಕಿತ್ಸೆ ಮತ್ತು ಉತ್ತಮ ಶಿಕ್ಷಣ ನೀಡಬೇಕು ಎಂದರು.
ಇದನ್ನೂ ಓದಿ : Aadhaar Card ಪರಿಶೀಲನೆಗೆ ಹೊಸ ನಿಯಮ ಜಾರಿಗೊಳಿಸಿದ ಸರ್ಕಾರ, ನೀವೂ ತಿಳಿದುಕೊಳ್ಳಿ
ಮಾಳವಿಕಾ ಸೂದ್ ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ?
ಈ ಸಂದರ್ಭದಲ್ಲಿ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್(Malvika Sood) ಎಲ್ಲಿಂದ ಮತ್ತು ಯಾವ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಮಾಧ್ಯಮದವರು ಕೇಳಿದಾಗ, ಇದೀಗ ಯಾವುದೇ ಪಕ್ಷವನ್ನು ಹೆಸರಿಸುವುದು ಸರಿಯಲ್ಲ, ಶೀಘ್ರದಲ್ಲೇ ಪಕ್ಷಕ್ಕೆ ಸೇರುತ್ತೇನೆ ಅದನ್ನ ಹೇಳಿತ್ತೇನೆ ಎಂದು ಹೇಳಿದರು.
ಸ್ವತಃ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸೋನು ಸೂದ್ ಹೇಳಿದ್ದೇನು?
ಸೋನು ಸೂದ್ ಅವರು ಚುನಾವಣೆ(Punjab Assembly Election 2022)ಗೆ ಏಕೆ ಸ್ಪರ್ಧಿಸುತ್ತಿಲ್ಲ ಎಂದು ಕೇಳಿದಾಗ, ನನಗೆ ಈಗ ಹಾಗೆ ಅನಿಸುತ್ತಿಲ್ಲ ಎಂದು ಹೇಳಿದರು. ಸದ್ಯಕ್ಕೆ ನನ್ನ ತಂಗಿ ಮಾಳವಿಕಾ ಸೂದ್ ಮಾತ್ರ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಮೊಗಕ್ಕೆ ಸಂಬಂಧಿಸಿದ ಎಲ್ಲ ಜನರಿಗೆ ಒಳ್ಳೆಯ ಸೇವೆಗಳನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ ಎಂದು ಹೇಳಿದರು. ಆಗ ಸೋನು ಸೂದ್‌ಗೆ ನೀವು ಪಾರ್ಟಿಗೆ ಹೋದರೆ ಆ ಪಕ್ಷದ ಹಳೆಯ ನಾಯಕರಿಗೆ ಕೋಪ ಬರಬಹುದು, ಅವರು ನಿಮ್ಮನ್ನು ವಿರೋಧಿಸಬಹುದು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಈ ಬಗ್ಗೆ ಸೋನು ಸೂದ್ ಹೇಳಿದ್ದು ನಾವು ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇವೆ. ಅವರು ನಮ್ಮವ್ರೆ ಆಗಿರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ : BIG NEWS : ಪೆಟ್ರೋಲ್-ಡೀಸೆಲ್ ನಂತರ CNG ಬೆಲೆಯಲ್ಲಿ ಭಾರಿ ಏರಿಕೆ! ಹೊಸ ಬೆಲೆ ತಿಳಿಯಿರಿ
ನೀವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ(Charanjit Singh Channi) ಇಬ್ಬರನ್ನೂ ಭೇಟಿ ಮಾಡಿದ್ದೀರಿ ಎಂದು ಸೋನು ಸೂದ್ ಅವರನ್ನು ಮಾಧ್ಯಮದವರು ಕೇಳಿದಾಗ. ಅಕಾಲಿದಳದ ಅಧ್ಯಕ್ಷರ ಜತೆಯೂ ಸಭೆ ನಡೆಸುತ್ತೀರಾ? ಈ ಕುರಿತು ಸೋನು ಸೂದ್, ಸುಖ್‌ಬೀರ್ ಬಾದಲ್ ಕರೆ ಮಾಡಿದರೆ ನಾನೂ ಕೂಡ ಭೇಟಿ ಮಾಡುತ್ತೇನೆ ಎಂದಿದ್ದಾರೆ.'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.