ಹಣ ಪಾವತಿಸದ ಹಿನ್ನಲೆಯಲ್ಲಿ ಜೆಟ್ ಏರ್ವೇಸ್ ಗೆ ಇಂಧನ ಪೂರೈಕೆ ಸ್ಥಗಿತ
ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ಶುಕ್ರವಾರದಂದು ಜೆಟ್ ಏರ್ವೇಸ್ ಗೆ ಇಂಧನ ಪೂರೈಕೆಯನ್ನು ನಿಲ್ಲಿಸಿದೆ.
ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ಶುಕ್ರವಾರದಂದು ಜೆಟ್ ಏರ್ವೇಸ್ ಗೆ ಇಂಧನ ಪೂರೈಕೆಯನ್ನು ನಿಲ್ಲಿಸಿದೆ.
ಶುಕ್ರವಾರದಂದು 12 ರಂದು ಮಧ್ಯಾಹ್ನದಿಂದ ಹಣಪಾವತಿಸದ ಹಿನ್ನಲೆಯಲ್ಲಿ ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ವಿಚಾರವಾಗಿ ಈಗ ಜೆಟ್ ಏರ್ವೇಸ್ ಗೆ ಸಂಪರ್ಕಿಸಿದಾಗ ಅದು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.ಈಗ ಲೇವಾದೇವಿಗಾರರು ಜೆಟ್ ಏರ್ವೇಸ್ ನಿಯಂತ್ರಣ ಮಂಡಳಿಯನ್ನು ವಶಕ್ಕೆ ತೆಗೆದುಕೊಳ್ಳುವ ಸಿದ್ದತೆ ನಡೆಸಿದ್ದಾಗಲೇ ಜೆಟ್ ಏರ್ವೇಸ್ 26 ವಿಮಾನಗಳ ಕಾರ್ಯಾಚರಣೆಯನ್ನು ಮೊಟಕುಗೊಳಿಸಿತ್ತು.
ಮಾರ್ಚ್ 25 ರಂದು ಎಸ್ಬಿಐ ನೇತೃತ್ವದ ದೇಶೀಯ ಲೇವಾದೇವಿಗಾರರು ರಚಿಸಿದ ನಿರ್ಣಯ ಯೋಜನೆಗೆ ಜೆಟ್ ಏರ್ವೇಸ್ ಮಂಡಳಿ ಅನುಮೋದಿಸಿತ್ತು. ಇದರ ಅಡಿಯಲ್ಲಿ ರೂ. 1,500 ಕೋಟಿ ತುರ್ತು ನಿಧಿಯನ್ನು ಏರ್ಲೈನ್ಗೆ ನೀಡಲು ಒಪ್ಪಿಗೆ ನೀಡಲಾಗಿತ್ತು. ಆ ಮೂಲಕ ಅದನ್ನು ಇಕ್ವಿಟಿ ಮೌಲ್ಯಕ್ಕೆ ಶೇ 50.1 ರಷ್ಟನ್ನು ಪರಿವರ್ತನೆ ಮಾಡಲಾಗಿತ್ತು.ಆದರೆ ಇದುವರೆಗೆ ಅಗತ್ಯವಿರುವ ನಿಧಿಯನ್ನು ಏರ್ ಲೈನ್ ಇದುವರೆಗೆ ಸ್ವೀಕರಿಸಿಲ್ಲ ಎಂದು ಹೇಳಲಾಗಿದೆ.