ನೀವೂ ಕೂಡ Ludo Game ಆಡುತ್ತೀರಾ? ಹಾಗಿದ್ದರೆ ಎಚ್ಚರಿಕೆ!
ದೇಶಾದ್ಯಂತ ಹಲವು ಪ್ರದೇಶಗಳಲ್ಲಿ ಆನ್ಲೈನ್ ಲೂಡೋ ಗೇಮ್ ಹಾಗೂ ಸ್ನೇಕ್ ಅಂಡ್ ಲ್ಯಾಡರ್ (ಸಾಂಪ್ ಸೀಡಿ) ಗ್ಯಾಂಗ್ ಗಳೂ ಇದೀಗ ಸಕ್ರೀಯವಾಗಿವೆ.
ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ಪಿಡುಗನ್ನು ತಡೆಗಟ್ಟಲು ಲಾಕ್ ಡೌನ್ ಘೋಷಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ತಮ್ಮ ತಮ್ಮ ಮನೆಗಳಲ್ಲಿಯೇ ಬಂಧಿಯಾಗಿದ್ದಾರೆ. ಹೀಗಾಗಿ ಟೈಮ್ ಪಾಸ್ ಮಾಡಲು ಜನರು ಆನ್ಲೈನ್ ನಲ್ಲಿ ಲೂಡೋ ಅಥವಾ ಸ್ನೇಕ್ ಅಂಡ್ ಲ್ಯಾಡರ್ ಆಡುತ್ತಿದ್ದು, ಅವರ ಫೆವರಿಟ್ ಗೇಮ್ ಆಗಿದೆ. ಆದರೆ, ಈ ಆಟಗಳನ್ನು ಆಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಸಾಕು ನೀವು ಕಂಗಾಲಾಗುವ ಸಾಧ್ಯತೆ ಇದೆ. ಹೌದು, ಖ್ಯಾತ ಆಟಗಳು ಇದೀಗ ಬೆಟ್ಟಿಂಗ್ ನ ಹೊಸ ಆಟಗಳಾಗಿ ಪರಿವರ್ತನೆಯಾಗಿವೆ. ಆಕಸ್ಮಿಕವಾಗಿ ನಿಮ್ಮನ್ನು ವಾಟ್ಸ್ ಆಪ್ ಅಥವಾ ಟೆಲಿಗ್ರಾಮ್ ನಲ್ಲಿನ ಲೂಡೋ ಅಥವಾ ಸಾಂಪ್ ಸೀಡಿ ಗ್ರೂಪ್ ಗಳಲ್ಲಿಸ್ ಸೇರಿಸಲಾಗುತ್ತದೆ. ಆಟವೊಂದರ ಗ್ರೂಪ್ ಆದ ಕಾರಣ ನೀವೂ ಕೂಡ ಹೆಚ್ಚಿಗೆ ಯೋಚಿಸುವುದಿಲ್ಲ.
ಆದರೆ, ಎಚ್ಚರಿಕೆ..! ಇದು ಮುಂದೆ ಹೋಗಿ ಶಿಕ್ಷಾರ್ಹ ಅಪರಾಧ ಕೂಡ ಆಗಬಹುದು. ಏಕೆಂದರೆ, ದೇಶಾದ್ಯಂತ ಹಲವು ಭಾಗಗಳಲ್ಲಿ ಆನ್ಲೈನ್ ಲೂಡೋ ಹಾಗೂ ಸಾಂಪ್ ಸೀಡಿ ಗ್ಯಾಂಗ್ ಗಳು ಸಕ್ರೀಯವಾಗಿವೆ. ಬೆಟ್ಟಿಂಗ್ ನಲ್ಲಿ ನಿರತರಾಗಿರುವ ಇವರ ಪದ್ಧತಿ ಕೂಡ ಭಿನ್ನವಾಗಿದೆ. ಮೊದಲು ಆಟಕ್ಕಾಗಿ ವಾಟ್ಸ್ ಆಪ್ ಅಥವಾ ಟೆಲಿಗ್ರಾಮ್ ಗ್ರೂಪ್ ಗಳ ಅಡ್ಮಿನ್ ಗಳನ್ನು ಟಾರ್ಗೆಟ್ ಮಾಡುತ್ತಾರೆ. ಅವರ ಮೂಲಕ ಗ್ರೂಪ್ ನಲ್ಲಿ ಲಿಂಕ್ ವೊಂದನ್ನು ಹಂಚಿಕೊಳ್ಳುತ್ತಾರೆ. ಆ ಬಳಿಕ ಗ್ರೂಪ್ ಅದ್ಮಿಂಗ್ ಕೋಡ್ ವೊಂದನ್ನು ನೀಡುತ್ತಾನೆ. ಈ ಕೋಡ್ ಬಳಸಿ ಗ್ರೂಪ್ ನ ಯಾವುದೇ ನಾಲ್ವರು ಸದಸ್ಯರು ಬೇರೆ ಬೇರೆ ಜಾಗದಲ್ಲಿ ಇದ್ದುಕೊಂಡು ಲೂಡೋ ಆಟ ಆಡುತ್ತಾರೆ. ಈ ವೇಳೆ ಗ್ರೂಪ್ ನ ಉಳಿದೆಲ್ಲ ಸದಸ್ಯರು ಯಾರು ಗೆಲ್ಲಲಿದ್ದಾರೆ ಎಂಬುದರ ಮೇಲೆ ಬೆಟ್ಟಿಂಗ್ ಆಡುತ್ತಾರೆ.
ಗೆಲ್ಲುವವರಿಂದ ಗ್ರೂಪ್ ಅಡ್ಮಿನ್ ಕಮಿಷನ್ ಪಡೆಯುತ್ತಾನೆ ಹಾಗೂ ಬೆಟ್ಟಿಂಗ್ ನಲ್ಲಿ ಹೂಡಲಾಗಿರುವ ಹಣವನ್ನು ಗೆಲವು-ಸೋಲು ಆಧರಿಸಿ ಪಾಲ್ಗೊಂಡ ಎಲ್ಲರಲ್ಲಿಯೂ ಕೂಡ ಹಂಚಿಕೆಯಾಗುತ್ತದೆ. ಇದೇ ರೀತಿ ಸಾಂಪ್ ಸೀಡಿ ಆಟದಲ್ಲಿಯೂ ಕೂಡ ಬೆಟ್ಟಿಂಗ್ ನಡೆಸಲಾಗುತ್ತಿದೆ.
ಆಟದ ನಿಯಮಗಳು
ಲೂಡೋ ಹಾಗೂ ಸಾಂಪ್ ಸೀಡಿ ಆಟದಲ್ಲಿ ಡಿಪಾಸಿಟ್ ಹಣ ಇಲ್ಲದೆ ಯಾವ ಗೇಮ್ ಕೂಡ ಆಡಲಾಗುವುದಿಲ್ಲ ಎಂಬುದನ್ನು ಅಡ್ಮಿನ್ ಮೊದಲೇ ಸ್ಪಷ್ಟಪಡಿಸುತ್ತಾನೆ.
- ಆಟವಾಡುವ ವೇಳೆ ನಿಮ್ಮ ನೆಟ್ ಪ್ಯಾಕ್ ಮುಗಿದುಹೋದ್ರೆ, ಫೋನ್ ಹ್ಯಾಂಗ್ ಆದರೆ ಅಥವಾ ಇತರೆ ಯಾವುದೇ ಕಾರಣಗಳಿದ್ದರೆ ಹಣ ಹಿಂದಿರುಗಿಸಲಾಗುವುದಿಲ್ಲ.
- ಪ್ರತಿ ಆಟದ ಬಳಿಕ ಬ್ಯಾಲೆನ್ಸ್ ಹಣ ಸೇರಿಸಬೇಕು.
- ಗ್ರೂಪ್ ನಲ್ಲಿ ಅವಾಚ್ಯ ಶಬ್ದಗಳನ್ನು ಬಳಸುವವರ ಬ್ಯಾಲೆನ್ಸ್ ಶೂನ್ಯ ಎಂದು ಪರಿಗಣಿಸಲಾಗುವುದು.
- ಕನಿಷ್ಠ ರೂ.100ನ್ನು ಬೆಟ್ ರೂಪದಲ್ಲಿ ನೀಡಬೇಕು.
ಈ ರೀತಿಯ ಆಟದಲ್ಲಿ ಒಂದು ವೇಳೆ ನೀವು ತೊಡಗಿದರೆ ಯಾವುದೇ ಕ್ಷಣದಲ್ಲಿ ಅದು ವಿವಾದಕ್ಕೆ ಕಾರಣವಾಗಬಹುದು ಹಾಗೂ ನಿಮ್ಮ ಗೆಳೆತನದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ. ಮಧ್ಯಪ್ರದೇಶದ ಚಿಂದವಾಡಾದಲ್ಲಿ ಇಂತಹ ಒಂದು ಗ್ಯಾಂಗ್ ಅನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ. ಗ್ರೂಪ್ ಅಡ್ಮಿನ್ ಸೇರಿದಂತೆ ಇತರೆ ಇಬ್ಬರನ್ನು ಬಂಧಿಸಲಾಗಿದ್ದು, ಅವರ ಮೇಲೆ ಬೆಟ್ಟಿಂಗ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.