ನವದೆಹಲಿ: ಗಾಂಧಿ ಕುಟುಂಬದ ಹೆಸರು ಫಿರೋಜ್ ಗಾಂಧಿಯವರಿಂದ ಬಂದಿರುವುದೇ ಹೊರತು ಮಹಾತ್ಮಾ ಗಾಂಧಿಜೀ ಅವರಿಂದ ಬಂದಿರುವುದಲ್ಲ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಹೇಳಿದ್ದಾರೆ. ರಾಹುಲ್ ಗಾಂಧಿ ಹಾಗೂ ಅವರ ಕುಟುಂಬದ ಬಗ್ಗೆ ಉಲ್ಲೇಖಿಸಿ ಮಾತನಾಡುತ್ತಾ ಫಿರೋಜ್ ಗಾಂಧಿಯವರಿಂದ ಗಾಂಧಿ ಕುಟುಂಬದ ಹೆಸರು ಬಳುವಳಿಯಾಗಿ ಬಂದಿದೆ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

"ನಮ್ಮ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ತಮ್ಮನ್ನು ರಾಜಾ ಎಂದು ಕರೆದುಕೊಳ್ಳುತ್ತಾರೆ. ಆದರೆ ಅವರು ಸೋನಿಯಾ ಗಾಂಧಿಯವರ ಮನೆಯ ಹೊರಗಡೆ ಸರದಿಯಲ್ಲಿ ನಿಲ್ಲುತ್ತಿದ್ದರು.ನಿರಾತುತ್ತಾ ದತ್ ತಿವಾರಿ ಅವರು ಸಂಜಯ್ ಗಾಂಧಿ ಅವರ ಶೂಗಳನ್ನು ಎತ್ತಿಕೊಳ್ಳುತ್ತಿದ್ದರು.ಕಾಂಗ್ರೆಸ್ ನ ದೊಡ್ಡ ನಾಯಕರು ಇಂದಿರಾ ಗಾಂಧಿಯವರ ಮುಂದೆ ಕೈ ಮುಗಿಯುತ್ತಿದ್ದರು. ಈ ಕುಟುಂಬದ ವಿಶೇಷತೆ ಏನಿದೆ ? ಎಂದು ಮಧ್ಯಪ್ರದೇಶದ ವಿಡಿಶಾದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಉಮಾಭಾರತಿ ಅವರು ಹೇಳಿದರು. 


"ಈ ಕುಟುಂಬದೊಂದಿಗೆ ಸಂಬಂಧ ಹೊಂದಿರುವ" ಗಾಂಧಿ "ಎಂಬ ಪದವು ಮಹಾತ್ಮಾ ಗಾಂಧಿಯವರದ್ದಲ್ಲ, ಆದರೆ ಫಿರೋಜ್ ಗಾಂಧಿಯವರಿಗೆ ಸೇರಿದ್ದು...ಫಿರೋಜ್ ಗಾಂಧಿ ಜವಾಹರಲಾಲ್ ನೆಹರು ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಿಲ್ಲ, ಆದ್ದರಿಂದ ಈ ಉಮನಾಮವನ್ನು ಬಳಸುವ ಹಕ್ಕನ್ನು ಸಹಿತ ಅವರು ಹೊಂದಿಲ್ಲ, ಆದರೆ ಈ ಉಪನಾಮದಿಂದ ಗೌರವವನ್ನು ಗಳಿಸಬಹುದೆಂದು ಅವರು ಭಾವಿಸಿದ್ದಾರೆ ಎಂದರು. ಆದರೆ ಮೋದಿಜಿ ನಿಜವಾಗಿ ಮಹಾತ್ಮ ಗಾಂಧಿಯವರ ಹಾದಿಯನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಹೇಳಿದರು.


 ಇದೇ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎನ್ನುವ ಆರೋಪಗಳನ್ನು ಉಮಾಭಾರತಿ ಅಲ್ಲಗಳೆದರು.