ನವದೆಹಲಿ:  ಭಾರತೀಯ ಸಾಮಾಜಿಕ-ಕಾರ್ಯಕರ್ತೆ ಮತ್ತು SEWA ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಭಾರತದ ಬಡ-ಮಹಿಳೆಯರ ಜೀವನಮಟ್ಟವನ್ನು ಹೆಚ್ಚಿಸುವ ದಿಶೆಯಲ್ಲಿ ಮಹತ್ವದ ಪಾತ್ರವಹಿಸಿದ್ದ ಸಾಮಾಜಿಕ ಹೋರಾಟಗಾರ್ತಿ ಇಳಾ ಭಟ್ ಅವರು ನವೆಂಬರ್ 2 ರಂದು ತಮ್ಮ 90 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ,


COMMERCIAL BREAK
SCROLL TO CONTINUE READING

ಸೆಪ್ಟೆಂಬರ್ 7, 1933 ರಂದು ಅಹಮದಾಬಾದ್‌ನಲ್ಲಿ ಜನಿಸಿದ ಇಳಾ ಬೆನ್ ಭಟ್, ಅವರು ದುಡಿಯುವ ಮಹಿಳೆಯರ ಅಸಾಧಾರಣ ಸಂಘಟಕರಾಗಿ ಗುರುತಿಸಲ್ಪಟ್ಟಿದ್ದಾರೆ. ಇಳಾ ಅವರ ತಂದೆ ಯಶಸ್ವಿ ವಕೀಲರಾಗಿದ್ದರು ಮತ್ತು ಅವರ ತಾಯಿ ಮಹಿಳಾ ಹಕ್ಕುಗಳ ಹೋರಾಟಗಾರರಾಗಿದ್ದರು.


ಇದನ್ನೂ ಓದಿ : TET Exam 2022 : ಇದೆ ತಿಂಗಳ 6 ರಂದು ಟಿಇಟಿ ಪರೀಕ್ಷೆ : ಅಭ್ಯರ್ಥಿಗಳಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ 


1954 ರಲ್ಲಿ ಭಟ್ ಅವರು ಕಾನೂನಿನಲ್ಲಿ ಪದವಿ ಪಡೆದ ನಂತರ, ಅವರು ಹಿಂದೂ ಕಾನೂನಿನ ಕೆಲಸಕ್ಕಾಗಿ ಚಿನ್ನದ ಪದಕವನ್ನು ಪಡೆದರು. ಇದರ ನಂತರ, ಅವರು ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ಕಾಲೇಜಿನಲ್ಲಿ ಸ್ವಲ್ಪ ಸಮಯದವರೆಗೆ ಇಂಗ್ಲಿಷ್ ಕಲಿಸಿದರು ಮತ್ತು ಒಂದು ವರ್ಷದ ನಂತರ, 1955 ರಲ್ಲಿ ಅವರು ಅಹಮದಾಬಾದ್‌ನಲ್ಲಿ ಜವಳಿ ಕಾರ್ಮಿಕ ಸಂಘಕ್ಕೆ (ಟಿಎಲ್‌ಎ) ಸೇರಿದರು.


ಸ್ವಯಂ ಉದ್ಯೋಗಿ ಮಹಿಳಾ ಸಂಘ,:('ಸೇವಾ')SEWA' ಸಂಸ್ಥೆಯನ್ನು ಸ್ಥಾಪಿಸಿದರು. ಇದೊಂದು ’ಟ್ರೇಡ್ ಯೂನಿಯನ್ ಸಂಸ್ಥೆಯಾಗಿದ್ದು’, 1 ಮಿಲಿಯನ್ ಗೂ ಹೆಚ್ಚು ಸದಸ್ಯರನ್ನು ಹೊಂದಿದೆ. 1974 ರಲ್ಲಿ ’ಇಳಾ’ರವರು, ಒಂದು ’ಸಹಕಾರಿ ಬ್ಯಾಂಕ್’ ಸ್ಥಾಪಿಸಿದರು. ಈ ಬ್ಯಾಂಕಿನ ಕಾರ್ಯವ್ಯಾಪ್ತಿ, ಸುಮಾರು ೩ ಮಿಲಿಯನ್(30 ಲಕ್ಷ) ಹೆಣ್ಣುಮಕ್ಕಳ ಜೀವನವನ್ನು ರೂಪಿಸಿ ಸಹಾಯಮಾಡುವಲ್ಲಿ ಯಶಸ್ವಿಯಾಗಿದೆ.


ಇದನ್ನೂ ಓದಿ : Wildlife Service Award 2022: ನವೆಂಬರ್ 5 ರಂದು ಅರಣ್ಯ ವೀಕ್ಷಕ ಫೈರೋಜ್ ವಿವಿಎಎಸ್ ರಿಂದ ಸನ್ಮಾನ


ಇಳಾ ಬೆನ್ ಭಟ್ ಅವರು ಸಬರಮತಿ ಆಶ್ರಮ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು ಮತ್ತು ಇತ್ತೀಚಿನವರೆಗೂ ಏಳು ವರ್ಷಗಳ ಕಾಲ ಗುಜರಾತ್ ವಿದ್ಯಾಪೀಠದ ಕುಲಪತಿಯಾಗಿದ್ದರು.ಇತ್ತೀಚೆಗಷ್ಟೇ ಅನಾರೋಗ್ಯದ ಕಾರಣದಿಂದ ಕೆಳಗಿಳಿಯುವ ಇಚ್ಛೆ ವ್ಯಕ್ತಪಡಿಸಿದ್ದರು. ಇದನ್ನು 100 ವರ್ಷಗಳಷ್ಟು ಹಳೆಯದಾದ ವಿದ್ಯಾಪೀಠವನ್ನು ಮಹಾತ್ಮ ಗಾಂಧಿಯವರು ಸ್ಥಾಪಿಸಿದ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.