ನವದೆಹಲಿ: ಕೊರೊನಾ ವೈರಸ್ ಗೆ ಇದುವರೆಗೆ ಯಾವುದೇ ಲಸಿಕೆಯನ್ನು ಕಂಡು ಹಿಡಿಯಲಾಗಿಲ್ಲ. ಆದರೆ, ಆಯುರ್ವೇದದಲ್ಲಿ ಈ ವೈರಸ್ ನಿಂದ ಬಚಾವಾಗಲು ಹಾಗೂ ಹೋರಾಡಲು ನೀಡಲಾಗಿರುವ ಹಲವು ಉಪಾಯಗಳು ಇದೀಗ ಉಪಯುಕ್ತ ಎಂದು ಸಾಬೀತಾಗುತ್ತಿವೆ. ಇನ್ನೊಂದೆಡೆ ಭಾರತದಲ್ಲಿ ಹಲವು ಮನೆ ಮದ್ದುಗಳನ್ನು ಬಳಸಿ ಈ ವೈರಸ್ ನಿಂದ ರಕ್ಷಿಸಿಕೊಳ್ಳಲಾಗುತ್ತಿದೆ. ಇಂತಹುದೇ ಒಂದು ಉಪಾಯ ಎಂದರೆ ಉಪ್ಪು ಮತ್ತು ಬಿಸಿನೀರಿನಿಂದ ಬಾಯಿ ಮುಕ್ಕಳಿಸುವುದು. ಈ ಉಪಾಯಕ್ಕೆ ಇದೀಗ ಬ್ರಿಟನ್ ಸಂಶೋಧಕರೂ ಕೂಡ ಸೈ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಬ್ರಿಟನ್ ನ ಏಡಿನ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ನಡೆಸಲಾಗಿರುವ ಸಂಶೋಧನೆ ಪ್ರಕಾರ ಉಪ್ಪು ಮತ್ತು ಬಿಸಿ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಸೋಂಕಿನ ಲಕ್ಷಣಗಳು ಕಡಿಮೆಯಾಗುವುದರ ಜೊತೆಗೆ ಸೋಂಕಿನ ಅವಧಿಯನ್ನು ಕೂಡ ಕಮ್ಮಿ ಮಾಡುತ್ತದೆ ಎಂದು ಹೇಳಿದೆ.


ಕೊರೊನಾ ವೈರಸ್ ಸೋಂಕಿಗೆ ಗುರಿಯಾದ ಸುಮಾರು 66 ಮೇಲೆ 12 ದಿನಗಳವರೆಗೆ ಈ ರಿಸರ್ಚ್ ನಡೆಸಲಾಗಿದೆ. ಈ ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಲು ಹೇಳಲಾಗಿದೆ. 12 ದಿನಗಳ ಬಳಿಕ ಇವರ ಮೂಗಿನಿಂದ ಸ್ಯಾಂಪಲ್ ಗಳನ್ನು ಪಡೆಯಲಾಗಿದೆ. ಈ ಸ್ಯಾಂಪಲ್ ಸ್ಟಡಿಯಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಡಿಮೆಯಾಗಿರುವುದು ಕಂಡುಬಂದಿದೆ.


ಜರ್ನಲ್ ಆಫ್ ಗ್ಲೋಬಲ್ ಹೆಲ್ತ್ ನಲ್ಲಿ ಪ್ರಕಟವಾದ ಒಂದು ಸಂಶೋಧನೆ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವ ಕೊರೊನಾ ಸೋಂಕಿತರಲ್ಲಿ ಎರಡೂವರೆ ದಿನಗಳಲ್ಲಿ ಸೋಂಕು ಕಡಿಮೆ ಇರುವುದು ಪತ್ತೆಯಾಗಿದೆ ಎಂದು ಹೇಳಿದೆ. ಬಿಸಿ ನೀರು ಮತ್ತು ಉಪ್ಪಿನಿಂದ ಬಾಯಿ ಮುಕ್ಕಳಿಸುವುದರಿಂದ ಕೊರೊನಾ ಸೋಂಕಿನ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಇದರಿಂದ ಕಡಿಮೆ ಅವಧಿಯಲ್ಲಿ ರೋಗದ ಮೇಲೆ ನಿಯಂತ್ರಣ ಪಡೆಯುವುದು ಸಾಧ್ಯವಾಗಲಿದೆ.


ಇದಕ್ಕೂ ಮೊದಲು ಮೌತ್ ವಾಶ್ ಬಳಕೆಯೂ ಕೂಡ ಕೊರೊನಾ ವೈರಸ್ ಮೇಲೆ ಪ್ರಭಾವ ಬೀರುತ್ತದೆ ಎಂದು ಅಂತಾರಾಷ್ಟ್ರೀಯ ವೈರಸ್ ತಜ್ಞರು ಹೇಳಿದ್ದರು. ದೇಹದ ಜೀವಕೋಶಗಳನ್ನು ಸೋಂಕಿತಗೊಳಿಸುವ ಮೊದಲೇ ಮೌತ್ ವಾಶ್ ವೈರಸ್ ಅನ್ನು ನಿವಾರಿಸುತ್ತದೆ ಎಂದು ಅವರು ಹೇಳಿದ್ದರು.


ಇತ್ತೀಚೆಗಷ್ಟೇ ಭಾರತ ಸರ್ಕಾರ ಕೂಡ ತನ್ನ ಆಯುಶ್ ಸಚಿವಾಲಯದ ಮೂಲಕ ಸೋಂಕಿನಿಂದ ರಕ್ಷಿಸಿಕೊಳ್ಳಲು ಬಿಸಿ ನೀರು ಸೇವನೆ ಮಾಡಲು ಸಲಹೆ ನೀಡಿದೆ. ಬಿಸಿ ನೀರಿನಿಂದ ಬೆಳಗ್ಗೆ ಹಾಗೂ ರಾತ್ರಿ ಹೊತ್ತು ಬಾಯಿ ಮುಕ್ಕಳಿಸುವುದರಿಂದ ಗಂಟಲು ಸ್ವಚ್ಛವಾಗುತ್ತದೆ ಎಂದು ಆಯುಶ್ ಸಚಿವಾಲಯ ತನ್ನ ಮಾರ್ಗಸೂಚಿಗಳಲ್ಲಿ ತಿಳಿಸಿದೆ.