ನವದೆಹಲಿ: ತೈಲ ಕಂಪನಿಗಳು ಒಂದು ಕಡೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡುತ್ತಿವೆ. ಆದರೆ ಮತ್ತೊಂದೆಡೆ, ತೈಲ ಕಂಪನಿಗಳು ಮತ್ತೆ ಎಲ್‌ಪಿಜಿಯ ಬೆಲೆಯನ್ನು ಹೆಚ್ಚಿಸಿವೆ. ಸತತ ಮೂರನೇ ತಿಂಗಳು ಎಲ್‌ಪಿಜಿಯ ಬೆಲೆ ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್) ಪ್ರಕಾರ, ನವೆಂಬರ್ 1 ರಿಂದ 14.2 ಕೆಜಿ ಸಿಲಿಂಡರ್ ಬೆಲೆಯನ್ನು 76.5 ರೂ.ಗೆ ಹೆಚ್ಚಿಸಲಾಗಿದೆ. ಬೆಲೆ ಹೆಚ್ಚಳದ ನಂತರ, ದೆಹಲಿಯಲ್ಲಿ ನವೆಂಬರ್ 1 ರಿಂದ ಸಬ್ಸಿಡಿ ರಹಿತ14.2 ಕೆಜಿ ಸಿಲಿಂಡರ್ ಬೆಲೆ 681.50 ರೂ.ಗೆ ಏರಿದೆ. ಅಕ್ಟೋಬರ್‌ನಲ್ಲಿ ಈ ಸಿಲಿಂಡರ್ 605 ರೂ.ಗೆ ಲಭ್ಯವಿತ್ತು.


ಎಲ್ಲಾ ನಗರಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಬದಲಾಗಿದೆ:
ಮತ್ತೊಂದೆಡೆ, 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು 119 ರೂ. ಹೆಚ್ಚಿಸಲಾಗಿದೆ. ಹೊಸ ಬೆಲೆ ಜಾರಿಗೆ ಬಂದ ನಂತರ ಈ ಸಿಲಿಂಡರ್‌ನ ಬೆಲೆ 1204 ರೂ. ಇದಕ್ಕೂ ಮೊದಲು ಅಕ್ಟೋಬರ್‌ನಲ್ಲಿ ಈ ಸಿಲಿಂಡರ್‌ಗೆ 1085 ರೂ. ಇತ್ತು. ಇದಲ್ಲದೆ, 5 ಕೆಜಿ ಸಣ್ಣ ಸಿಲಿಂಡರ್ ಈಗ 264.50 ರೂಗಳಿಗೆ ಲಭ್ಯವಿದೆ. ಎಲ್ಲಾ ಮೂರು ರೀತಿಯ ಸಿಲಿಂಡರ್‌ಗಳ ಹೊಸ ಬೆಲೆಗಳು ನವೆಂಬರ್ 1 ರಿಂದ ಜಾರಿಗೆ ಬಂದಿವೆ. ನವೆಂಬರ್ 1 ರಿಂದ ವಿವಿಧ ನಗರಗಳಲ್ಲಿ ಬೆಲೆಗಳು ಬದಲಾಗಿವೆ.


ನವೆಂಬರ್ 1 ರಿಂದ ಕೋಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 706.00 ರೂ.ಗೆ ಹೆಚ್ಚಿಸಲಾಗಿದೆ. ಅದೇ ಸಮಯದಲ್ಲಿ, ಈ ಸಿಲಿಂಡರ್ ಮುಂಬೈನಲ್ಲಿ 651.00 ರೂ.ಗಳಿಗೆ ಲಭ್ಯವಿದೆ. ಚೆನ್ನೈನಲ್ಲಿ ಸಿಲಿಂಡರ್‌ಗೆ 695 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ವಾಣಿಜ್ಯ ಸಿಲಿಂಡರ್‌ಗಳು ಕೋಲ್ಕತ್ತಾದಲ್ಲಿ 1258 ರೂ., ಮುಂಬೈನಲ್ಲಿ 1151.50 ರೂ. ಮತ್ತು ಚೆನ್ನೈನಲ್ಲಿ 1319 ರೂ. ಆಗಿದೆ.