ನವದೆಹಲಿ:ಹೋಳಿ ಹಬ್ಬಕ್ಕೂ ಮೊದಲು, ಎಲ್‌ಪಿಜಿಯ ಬೆಲೆಯಲ್ಲಿ ಸಾರ್ವಜನಿಕರಿಗೆ ನೆಮ್ಮದಿ ದೊರೆತಿದೆ. ಹೌದು, ಇಂದಿನಿಂದ ನೀವು ಗ್ಯಾಸ್ ಸಿಲಿಂಡರ್ ಖರೀದಿಸಲು ಕಳೆದ ತಿಂಗಳ ಹೋಲಿಕೆಯಲ್ಲಿ ಕಡಿಮೆ ಹಣ ಖರ್ಚು ಮಾಡಬೇಕಾಗಲಿದೆ. ಅಂದರೆ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ರೂ.52.50 ಅಗ್ಗವಾಗಿದೆ. ಇದಕ್ಕೂ ಮೊದಲು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸಿಲಿಂಡರ್ ಖರೀದಿಗೆ ರೂ.858.50 ಹಣ ನೀಡಬೇಕಾಗಿದ್ದು, ಇದೀಗ ಐದು ತಿಂಗಳ ಅವಧಿಯ ಬಳಿಕ ಸಾಮಾನ್ಯ ನಾಗರಿಕರಿಗೆ ನೆಮ್ಮದಿಯ ಸುದ್ದಿ ಪ್ರಕಟವಾಗಿದೆ. ಕಳೆದ ತಿಂಗಳಿನಲ್ಲಿಯೂ ಕೂಡ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗಿತ್ತು.


COMMERCIAL BREAK
SCROLL TO CONTINUE READING

ಮಹಾನಗರಗಳಲ್ಲಿ 14.5 ಕೆ.ಜಿ ಸಿಲಿಂಡರ್ ಬೆಲೆ
ಇಂಡಿಯನ್ ಆಯಿಲ್ ವೆಬ್ಸೈಟ್ ಪ್ರಕಾರ ರಾಷ್ಟ್ರ ರಾಜಧಾನಿಯಲ್ಲಿ 14.5 ಕೆ.ಜಿ ಸಿಲಿಂಡರ್ ಬೆಲೆ ರೂ.805 ಕ್ಕೆ ಇಳಿಕೆಯಾಗಿದೆ. ಇನ್ನೊಂದೆಡೆ ಕೊಲ್ಕತ್ತಾದಲ್ಲಿ ಸಿಲಿಂಡರ್ ಬೆಲೆ ರೂ.839ಕ್ಕೆ ಬಂದು ತಲುಪಿದೆ. ಮುಂಬೈ ಹಾಗೂ ಚೆನ್ನೈನಲ್ಲಿ ಈ ಬೆಲೆ ಕ್ರಮೇಣವಾಗಿ ರೂ. 776.5 ಹಾಗೂ ರೂ.826 ಗಳಿಗೆ ಬಂದು ತಲುಪಿದೆ.


ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿಯೂ ಕೂಡ ಇಳಿಕೆ ಮಾಡಲಾಗಿದೆ
ಇನ್ನೊಂದೆಡೆ 19 ಕೆ.ಜಿ ತೂಕದ ಕಮರ್ಷಿಯಲ್ ಸಿಲಿಂಡರ ಬೆಲೆಯಲ್ಲಿಯೂ ಕೂಡ ನೆಮ್ಮದಿಯ ಸುದ್ದಿ ಹೊರಬಂದಿದೆ. ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ ರೂ.84.50 ರಷ್ಟು ಇಳಿಕೆ ಮಾಡಲಾಗಿದೆ.


ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
ಇತರೆ ನಗರಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಕುರಿತು ಮಾಹಿತಿ ಪಡೆಯಲು IOCLನ ಅಧಿಕೃತ ವೆಬ್ ಸೈಟ್ ಆಗಿರುವ (https://www.iocl.com/Products/IndaneGas.aspx)ಗೆ ಭೇಟಿ ನೀಡಬಹುದಾಗಿದೆ.