35 ವರ್ಷ ಬೀದಿ ಗುಡಿಸುತ್ತಿದ್ದವರಿಗೆ ಉಪಮೇಯರ್ ಪಟ್ಟ !ಡೆಪ್ಯುಟಿ ಮೇಯರ್ ಆದ ಬಳಿಕವೂ ಬೀದಿ ಬದಿಯಲ್ಲಿ ತರಕಾರಿ ಮಾರಾಟ !
Deputy Mayor Selling Vegetables : ಉಪಮೇಯರ್ ಆದ ನಂತರವೂ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಹಿಂದಿನ ಕಾರಣ ಏನು ಎನ್ನುವುದು ಈಗ ಎಲ್ಲರನ್ನೂ ಕಾಡುವ ಪ್ರಶ್ನೆಯಾಗಿದೆ.
Deputy Mayor Selling Vegetables : ಉಪಮೇಯರ್ ತರಕಾರಿ ಮಾರಾಟ ಮಾಡುತ್ತಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಇವರು ಮಾರುಕಟ್ಟೆಯಲ್ಲಿ ನೆಲದ ಮೇಲೆ ಕುಳಿತೇ ತರಕಾರಿಗಳನ್ನು ಮಾರಾಟ ಮಾಡುತ್ತಾರೆ. ಇವರ ಈ ನಡೆ ಎಲ್ಲರನ್ನೂ ಆಶ್ಚರ್ಕ್ಕೆ ಗುರಿ ಮಾಡುತ್ತದೆ. ಆದರೆ, ಉಪಮೇಯರ್ ಆದ ನಂತರವೂ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಹಿಂದಿನ ಕಾರಣ ಏನು ಎನ್ನುವುದು ಈಗ ಎಲ್ಲರನ್ನೂ ಕಾಡುವ ಪ್ರಶ್ನೆಯಾಗಿದೆ.
ಚಿಂತಾದೇವಿ 35 ವರ್ಷಗಳ ಕಾಲ ಗಯಾ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಸ್ವೀಪರ್ ಆಗಿ ಮಾಡಿದ್ದಾರೆ. ಇದಾದ ನಂತರ ಚಿಂತಾ ದೇವಿ ಗಯಾ ನಗರದ ಉಪಮೇಯರ್ ಆಗಿ ನೇಮಕ ಆಗಿದ್ದಾರೆ.
ಇದನ್ನೂ ಓದಿ : ಕರ್ನಾಟಕದ ನೆರೆಯ ರಾಜ್ಯದಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆ ದಾಖಲು
ಚಿಂತಾದೇವಿ ರಸ್ತೆಯಲ್ಲಿ ತರಕಾರಿ ಮಾರುತ್ತಿರುವುದೇಕೆ? :
ಸ್ವೀಪರ್ ಆಗಿದ್ದವರು ಉಪ ಮೇಯರ್ ಆದ ಬಳಿಕವೂ ತರಕಾರಿ ಮಾರಾಟ ಮಾಡುತ್ತಿರುವುದರ ಬಗ್ಗೆ ಎಲ್ಲರ ಮನದಲ್ಲಿ ಪ್ರಶ್ನೆ ಎದ್ದಿದೆ. ನೆಲೆದ ಮೇಲೆ ತರಕಾರಿಗಳನ್ನು ಹಾಸಿ ಮಾರಟಕ್ಕೆ ಕುಳಿತಿರುವುದರ ಹಿಂದಿನ ಕಾರಣ ಏನು ಎನ್ನುವುದು ಜನರ ಪ್ರಶ್ನೆ.
ಇದಕ್ಕೆ ಉತ್ತರವನ್ನು ಸ್ವತಃ ಚಿಂತಾದೇವಿಯೇ ನೀಡಿದ್ದಾರೆ. ತನಗೆ ತೋರಿದ ಅಗೌರವದ ವಿರುದ್ಧ ಅವರು ಪ್ರತಿಭಟಿಸಿ ಈ ರೀತಿ ಮಾಡುತ್ತಿದ್ದಾರೆ. ನಗರಸಭೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡದಿದ್ದರೆ ನಾನು ಉಪಮೇಯರ್ ಆಗಿದ್ದಕ್ಕೆ ಏನು ಪ್ರಯೋಜನ ಎನ್ನುವುದು ಚಿಂತಾದೇವಿ ಪ್ರಶ್ನೆ. ಗಯಾ ಮಹಾನಗರ ಪಾಲಿಕೆ ಆಡಳಿತದ ಧೋರಣೆಯಿಂದ ನನಗೆ ತುಂಬಾ ಬೇಸರವಾಗಿದೆ. ಪಾಲಿಕೆಯಲ್ಲಿ ನಡೆಯುವ ಸಭೆಗಳಿಗೂ ನನ್ನನ್ನು ಆಹ್ವಾನಿಸುವುದಿಲ್ಲ. ನಗರದಲ್ಲಿ ಪಾಲಿಕೆಯಿಂದ ನಡೆಯುತ್ತಿರುವ ಯೋಜನೆಗಳ ಬಗ್ಗೆ ಅಧಿಕಾರಿಗಳು ಮಾಹಿತಿಯನ್ನೂ ನೀಡುತ್ತಿಲ್ಲ ಎಂದು ದೂರಿದ್ದಾರೆ. ಕಳೆದ ಹಲವು ತಿಂಗಳಿನಿಂದ ಉಪಮೇಯರ್ ವೇತನ ನೀಡಿಲ್ಲ ಎಂದು ಚಿಂತಾದೇವಿ ಆರೋಪಿಸಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
35 ವರ್ಷಗಳ ಕಾಲ ರಸ್ತೆ ಗುಡಿಸಿ, ನಂತರ ಉಪಮೇಯರ್ :
ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಸ್ವೀಪರ್ ಆಗಿದ್ದ ಚಿಂತಾ ದೇವಿ, ನಿವೃತ್ತಿಯಾದ ಎರಡು ವರ್ಷಗಳ ನಂತರ ಗಯಾದ ಉಪ ಮೇಯರ್ ಆಗಿ ಆಯ್ಕೆಯಾದರು. ಆದರೆ, ಮಂಗಳವಾರ ಕೇದಾರನಾಥ ಮಾರುಕಟ್ಟೆಯಲ್ಲಿ ಚಿಂತಾದೇವಿ ತರಕಾರಿ ಮಾರುತ್ತಿದ್ದುದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿ, ಸುತ್ತಲೂ ಅಪಾರ ಜನಸ್ತೋಮವೇ ನೆರೆದಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.