ʼಭಾರತದಲ್ಲಿ ಜಂಟಿ ಜೆಟ್ ಇಂಜಿನ್ ಉತ್ಪಾದನೆಗೆ ಅಮೆರಿಕಾದ ಅನುಮತಿ ಕೋರಿದ ಜಿಇʼ
ಅಮೆರಿಕಾದ ವಿಮಾನಗಳ ಇಂಜಿನ್ ನಿರ್ಮಾಣ ಸಂಸ್ಥೆ ಜಿಇ ಈ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ. ಜಿಇ ಸಂಸ್ಥೆ ಭಾರತದೊಡನೆ ಜಂಟಿಯಾಗಿ ಭಾರತದಲ್ಲೇ ಜೆಟ್ ಇಂಜಿನ್ ನಿರ್ಮಾಣ ನಡೆಸಲು ಉದ್ದೇಶಿಸಿತ್ತು. ಈ ಉದ್ದೇಶಕ್ಕಾಗಿ, ಜಿಇ ಅಮೆರಿಕಾದ ಬಿಡನ್ ಸರ್ಕಾರದಿಂದ ಅನುಮತಿ ಕೋರಿದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ. ಈ ಕುರಿತು ಮಾಹಿತಿ ನೀಡಿರುವ ಶ್ವೇತ ಭವನ, ಅಮೆರಿಕಾ ಸರ್ಕಾರ ಜಿಇ ಸಲ್ಲಿಸಿರುವ ಮನವಿಯನ್ನು ತ್ವರಿತವಾಗಿ ಗಮನಿಸಲಿದೆ ಎಂದಿದೆ.
Jet engine manufacturers in india : ಅಮೆರಿಕಾದ ವಿಮಾನಗಳ ಇಂಜಿನ್ ನಿರ್ಮಾಣ ಸಂಸ್ಥೆ ಜಿಇ ಈ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ. ಜಿಇ ಸಂಸ್ಥೆ ಭಾರತದೊಡನೆ ಜಂಟಿಯಾಗಿ ಭಾರತದಲ್ಲೇ ಜೆಟ್ ಇಂಜಿನ್ ನಿರ್ಮಾಣ ನಡೆಸಲು ಉದ್ದೇಶಿಸಿತ್ತು. ಈ ಉದ್ದೇಶಕ್ಕಾಗಿ, ಜಿಇ ಅಮೆರಿಕಾದ ಬಿಡನ್ ಸರ್ಕಾರದಿಂದ ಅನುಮತಿ ಕೋರಿದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ. ಈ ಕುರಿತು ಮಾಹಿತಿ ನೀಡಿರುವ ಶ್ವೇತ ಭವನ, ಅಮೆರಿಕಾ ಸರ್ಕಾರ ಜಿಇ ಸಲ್ಲಿಸಿರುವ ಮನವಿಯನ್ನು ತ್ವರಿತವಾಗಿ ಗಮನಿಸಲಿದೆ ಎಂದಿದೆ.
ಭಾರತ ಮತ್ತು ಅಮೆರಿಕಾ ಎರಡೂ ರಾಷ್ಟ್ರಗಳು ದ್ವಿಪಕ್ಷೀಯ ರಕ್ಷಣಾ ಉದ್ಯಮ ಸಹಭಾಗಿತ್ವದ ಯೋಜನೆ ಹಾಕಿಕೊಂಡಿದ್ದು, ಆ ಮೂಲಕ ಎರಡೂ ರಾಷ್ಟ್ರಗಳ ತಂತ್ರಜ್ಞಾನದ ಸಹಕಾರವನ್ನು ಅಭಿವೃದ್ಧಿ ಪಡಿಸಲು, ಜಂಟಿಯಾಗಿ ಅಭಿವೃದ್ಧಿ ಮತ್ತು ಉತ್ಪಾದನೆ ನಡೆಸಲು ಉದ್ದೇಶಿಸಿವೆ. ಈ ಸಹಕಾರದಿಂದ ಪ್ರಮುಖವಾಗಿ ಜೆಟ್ ಇಂಜಿನ್‌ಗಳಿಗೆ ಸಂಬಂಧಿಸಿದ ಯೋಜನೆಗಳು, ಆಯುಧ ಸಂಬಂಧಿತ ತಂತ್ರಜ್ಞಾನಗಳು ಹಾಗೂ ಇತರ ವ್ಯವಸ್ಥೆಗಳ ಮೇಲೆ ಗಮನಹರಿಸಲಾಗುವುದು ಎಂದು ಶ್ವೇತ ಭವನ ತನ್ನ ಫ್ಯಾಕ್ಟ್ ಶೀಟ್ ನಲ್ಲಿ ತಿಳಿಸಿದೆ. ಅಮೆರಿಕಾ ಸರ್ಕಾರ ಜಿಇ ಸಲ್ಲಿಸಿರುವ ಮನವಿಯನ್ನು ಶೀಘ್ರವಾಗಿ ಗಮನಿಸಲಿದೆ ಎಂದಿದೆ.
ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ಸಿಂಹಪಾಲು ಪಡೆದ ರಕ್ಷಣಾ ಇಲಾಖೆ
ಜನವರಿ 31ರಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಹಾಗೂ ಅಮೆರಿಕಾದ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಇನಿಷಿಯೇಟಿವ್ ಆನ್ ಕ್ರಿಟಿಕಲ್ ಆ್ಯಂಡ್ ಎಮರ್ಜೆನ್ಸಿ ಟೆಕ್ನಾಲಜಿ (ಐಸಿಇಟಿ) ಪ್ರಥಮ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಎರಡೂ ರಾಷ್ಟ್ರಗಳು ಮಹತ್ವದ, ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನಗಳು, ಜಂಟಿ ಅಭಿವೃದ್ಧಿ ಮತ್ತು ಜಂಟಿ ಉತ್ಪಾದನೆ ಹಾಗೂ ನವೀನತೆ ಸಾಧಿಸುವ ಕುರಿತು ಪರಸ್ಪರ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಪರಸ್ಪರ ಹೆಚ್ಚಿನ ಸಹಕಾರ ಹೊಂದುವ ಕುರಿತು ಮಾತುಕತೆ ನಡೆಸಿದವು.
ತನ್ನ ಫ್ಯಾಕ್ಟ್ ಶೀಟ್‌ನಲ್ಲಿ ಈ ಕುರಿತು ಮಾತನಾಡಿರುವ ಶ್ವೇತ ಭವನ, ಭಾರತ - ಅಮೆರಿಕಾಗಳ ತಂತ್ರಜ್ಞಾನದ ಸಹಭಾಗಿತ್ವವನ್ನು ವೃದ್ಧಿಸಲು, ಗಾಢವಾಗಿಸಲು ಎರಡೂ ರಾಷ್ಟ್ರಗಳು ದ್ವಿಪಕ್ಷೀಯ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಎರಡೂ ರಾಷ್ಟ್ರಗಳು ಸರ್ಕಾರಗಳ, ಉದ್ಯಮಗಳ, ಶಿಕ್ಷಣ ಸಂಸ್ಥೆಗಳ ಮಧ್ಯ ರಕ್ಷಣಾ ನಾವೀನ್ಯತೆ ಮತ್ತು ತಂತ್ರಜ್ಞಾನದ ಸಹಕಾರ ಸೇರಿದಂತೆ ವಿವಿಧ ವಲಯಗಳಲ್ಲಿನ ಸಹಕಾರವನ್ನು ಸ್ವಾಗತಿಸುತ್ತಿವೆ ಎಂದಿದೆ.
ಇದನ್ನೂ ಓದಿ: Artificial Intelligence : ಭವಿಷ್ಯದ ಪೊಲೀಸ್ ಕಾರ್ಯಾಚರಣೆಗೆ 'ಆರ್ಟಿಫಿಷಿಯಲ್ ಇಂಟಲಿಜೆನ್ಸ್' ಆಧಾರ!
ಭಾರತ ಮತ್ತು ಅಮೆರಿಕಾ ಎರಡೂ ರಾಷ್ಟ್ರಗಳೂ ದೀರ್ಘಕಾಲದ ಸಂಶೋಧನೆ ಮತ್ತು ಅಭಿವೃದ್ಧಿ ಸಹಕಾರವನ್ನು ಸಾಧಿಸುವ ಕುರಿತು ಕಾರ್ಯ ನಿರ್ವಹಿಸಲಿವೆ. ಪ್ರಸ್ತುತ ಸಾಗರ ಸುರಕ್ಷತೆ ಮತ್ತು ಇಂಟಲಿಜೆನ್ಸ್ ಸರ್ವಯಲೆನ್ಸ್ ರಿಕನಯಸೆನ್ಸ್ (ಐಎಸ್ಆರ್) ಕಾರ್ಯಾಚರಣೆಗಳ ಕುರಿತು ಹೆಚ್ಚಿನ ಗಮನ ನೀಡಲಾಗುತ್ತಿದೆ. ಭಾರತ - ಅಮೆರಿಕಾಗಳು ಸೆಮಿಕಂಡಕ್ಟರ್ ಪೂರೈಕೆ ಸರಳಿಯನ್ನು ಅಭಿವೃದ್ಧಿ ಪಡಿಸಲು, ಸೆಮಿಕಂಡಕ್ಟರ್ ವಿನ್ಯಾಸ ಅಭಿವೃದ್ಧಿ ಪಡಿಸಲು, ಅವುಗಳನ್ನು ಭಾರತದಲ್ಲಿ ಉತ್ಪಾದಿಸಲು ದ್ವಿಪಕ್ಷೀಯ ಸಹಕಾರ ಸಾಧಿಸುವ ಕುರಿತು ಯೋಚಿಸುತ್ತಿವೆ.
ಭಾರತ ಅಮೆರಿಕಾಗಳು ಪರಸ್ಪರ ಸಹಕಾರದಲ್ಲಿ ತಮ್ಮ ಶಕ್ತಿಯನ್ನು ಬಳಸಿಕೊಳ್ಳುವ ಜೊತೆಗೆ, ಜಾಗತಿಕವಾಗಿ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಿವೆ. ಅದಕ್ಕಾಗಿ ತಂತ್ರಜ್ಞಾನದ ಸಹಭಾಗಿತ್ವ, ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಭಾರತದಲ್ಲಿ ಉತ್ಪಾದನೆ ನಡೆಸುವ ಉದ್ದೇಶ ಹೊಂದಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.