General Elections 2024: ಒಂದರ ಮೇಲೊಂದರಂತೆ ರಾಹುಲ್ ಗಾಂಧಿ ಮೇಲೆ ಆರೋಪಗಳ ಸುರಿಮಳೆಗೈದ ಅಮಿತ್ ಶಾ
General Elections 2024: ತಮ್ಮ ವಿದೇಶ ಪ್ರವಾಸದ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭಾರತವನ್ನು ಟೀಕಿಸಿದ್ದಾರೆ ಮತ್ತು ದೇಶದ ಆಂತರಿಕ ರಾಜಕೀಯ ವಿಷಯವನ್ನು ಚರ್ಚಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
General Elections 2024: ತಮ್ಮ ವಿದೇಶ ಯಾತ್ರೆಯ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭಾರತವನ್ನು ಟೀಕಿಸಿದ್ದಾರೆ ಮತ್ತು ಭಾರತದ ಆಂತರಿಕ ರಾಜಕೀಯ ವಿಷಯವನ್ನು ಚರ್ಚಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಆರೋಪಿಸಿದ್ದಾರೆ. ತಮ್ಮ ಪೂರ್ವಜರಿಂದ ಕಲಿತುಕೊಳ್ಳಲು ಮಾಜಿ ಕಾಂಗ್ರೆಸ್ ಅಧ್ಯಕ್ಷರಿಗೆ ಶಾ ಸಲಹೆ ನೀಡಿದಾರೆ. ವಿದೇಶದಲ್ಲಿ ತಮ್ಮದೇ ದೇಶವನ್ನು ಟೀಕಿಸುವುದು ಯಾವುದೇ ನಾಯಕನಿಗೆ ಶೋಭೆ ತರುವುದಿಲ್ಲ ಎಂದ ಅವರು, ದೇಶದ ಜನತೆ ಅವರನ್ನು ಗಮನಿಸುತ್ತಿದ್ದಾರೆ ಎಂಬುದನ್ನು ರಾಹುಲ್ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ
ರಾಹುಲ್ ಅವರ ಇತ್ತೀಚಿನ ಯುಎಸ್ ಭೇಟಿಯನ್ನು ಉಲ್ಲೇಖಿಸಿದ ಗೃಹ ಸಚಿವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಹಲವಾರು ವಿಷಯಗಳಲ್ಲಿ ರಾಹುಲ್ ಟೀಕಿಸಿದ್ದಾರೆ. ಯಾವುದೇ ದೇಶದ ಮುಖಂಡ ಭಾರತದ ರಾಜಕೀಯದ ಬಗ್ಗೆ ಭಾರತದೊಳಗೆ ಚರ್ಚಿಸಬೇಕು ಎಂದು ಶಾ ಹೇಳಿದ್ದಾರೆ. ಯಾವ ಪಕ್ಷದ ನಾಯಕರೂ ವಿದೇಶಕ್ಕೆ ಹೋಗಿ ಭಾರತದ ರಾಜಕೀಯದ ಬಗ್ಗೆ ಚರ್ಚಿಸಿ ದೇಶವನ್ನು ಟೀಕಿಸುವುದು ಸರಿಯಲ್ಲ. ದೇಶದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದನ್ನು ರಾಹುಲ್ ಬಾಬಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಷಾ ಹೇಳಿದ್ದಾರೆ.
''ಬೇಸಿಗೆಯಿಂದ ತಪ್ಪಿಸಿಕೊಳ್ಳಲು ರಾಹುಲ್ ಬಾಬಾ ರಜೆಗೆಂದು ವಿದೇಶಕ್ಕೆ ತೆರಳುತ್ತಿದ್ದಾರೆ. ದೇಶವನ್ನು ವಿದೇಶಗಳಲ್ಲಿ ಟೀಕಿಸುತ್ತಲೇ ಇರುತ್ತಾರೆ. ರಾಹುಲ್ ಗಾಂಧಿ ತನ್ನ ಪೂರ್ವಜರಿಂದ ಅರಿತುಕೊಳ್ಳಬೇಕು ಎಂದು ನಾನು ಸಲಹೆ ನೀಡಲು ಬಯಸುತ್ತೇನೆ ಎಂದಿದ್ದಾರೆ. ಕೇಂದ್ರದ ಮೋದಿ ಸರ್ಕಾರದ ಒಂಬತ್ತು ವರ್ಷಗಳನ್ನು ಪೂರೈಸಿದ ಅಂಗವಾಗಿ ಗುಜರಾತ್‌ನ ಪಟಾನ್ ಜಿಲ್ಲೆಯ ಸಿದ್ಧಪುರ ಪ್ರದೇಶದಲ್ಲಿ ಆಯೋಜಿಸಲಾದ ರ್ಯಾಲಿಯನ್ನು ಉದ್ದೇಶಿಸಿ ಗೃಹ ಸಚಿವರು ಮಾತನಾಡಿದ್ದಾರೆ. ಮೋದಿ ಸರ್ಕಾರದ ಅಡಿಯಲ್ಲಿ ದೇಶವು ವ್ಯಾಪಕ ಬದಲಾವಣೆಗಳನ್ನು ಕಂಡಿದೆ ಎಂದು ಅವರು ಪ್ರತಿಪಾದಿಸಿದ್ದಾರೆ, ಆದರೆ ಕಾಂಗ್ರೆಸ್ ಭಾರತ ವಿರೋಧಿ ಮಾತನಾಡುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಹೊಸ ಸಂಸತ್ತಿನ ಕಟ್ಟಡವನ್ನು ಟೀಕಿಸಿದ್ದಕ್ಕಾಗಿ ಷಾ ರಾಹುಲ್ ಅವರನ್ನು ಗುರಿಯಾಗಿಸಿದ್ದಾರೆ. ಅಲ್ಲಿ ಹೊಸ ಸಂಸತ್ ಭವನ ಮತ್ತು ತಮಿಳುನಾಡಿನ ಐತಿಹಾಸಿಕ ರಾಜದಂಡ ‘ಸೆಂಗೊಲ್’ ಸ್ಥಾಪನೆಯನ್ನು ನೀವು ವಿರೋಧಿಸಿದ್ದೀರಿ. ಸೆಂಗೋಲ್ ಅನ್ನು ಜವಾಹರಲಾಲ್ ನೆಹರು ಸ್ಥಾಪಿಸಬೇಕಿತ್ತು. ನೆಹರೂ ಇದನ್ನು ಮಾಡದ ಕಾರಣ ಮೋದಿ ಮಾಡಿದ್ದಾರೆ. ಹೀಗಿರುವಾಗ ನೀವೇಕೆ (ರಾಹುಲ್) ಪ್ರತಿಭಟನೆ ಮಾಡುತ್ತಿದ್ದೀರಿ ಎಂದು ಷಾ ಪ್ರಶ್ನಿಸಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಲು ಪ್ರಧಾನಿ ಮೋದಿಗೆ ಕಾಂಗ್ರೆಸ್ ನಾಯಕರು ಅವಕಾಶ ನೀಡುತ್ತಿಲ್ಲ ಮತ್ತು ಅವರು ಎಲ್ಲವನ್ನೂ ವಿರೋಧಿಸುತ್ತಿದ್ದಾರೆ ಎಂದು ಶಾ ಆರೋಪಿಸಿದ್ದಾರೆ. ‘ಅಭಿವೃದ್ಧಿಯ ರಾಜಕಾರಣ’ ಮಾಡುವ ಹೊಸ ಸಂಪ್ರದಾಯಕ್ಕೆ ಪ್ರಧಾನಿ ನಾಂದಿ ಹಾಡಿದ್ದಾರೆ ಎಂದರು. ರಾಮ ಮಂದಿರ ನಿರ್ಮಾಣ ಮತ್ತು 370 ನೇ ವಿಧಿ ರದ್ದತಿ ವಿಷಯದಲ್ಲೂ ಶಾ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಾಬರ್ (ಮೊಘಲ್ ಸಾಮ್ರಾಜ್ಯದ ಸ್ಥಾಪಕ) ಕಾಲದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯವನ್ನು ಕೆಡವಲಾಯಿತು ಎಂದು ಅವರು ಹೇಳಿದ್ದಾರೆ.
ಆದರೆ ಇಂದು ಭವ್ಯ ರಾಮನ ಮಂದಿರ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಶಾ, ದಲಿತರು, ಬಡವರು ಮತ್ತು ಬುಡಕಟ್ಟು ಜನಾಂಗದವರ ಜೀವನವನ್ನು ಸುಧಾರಿಸಲು ಸರ್ಕಾರ ಕೆಲಸ ಮಾಡಿದೆ ಮತ್ತು ಅವರನ್ನು ಸಮರ್ಥರನ್ನಾಗಿ ಮಾಡಿದೆ ಎಂದು ಅವರು ಹೇಳಿದ್ದಾರೆ. ‘ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಮೊದಲ ಬಾರಿಗೆ ಬುಡಕಟ್ಟು ಮಹಿಳೆಯೊಬ್ಬರು ದೇಶದ ರಾಷ್ಟ್ರಪತಿಯಾಗಿದ್ದಾರೆ’ ಎಂಬುದನ್ನು ಅವರು ನೆನಪಿಸಿಕೊಟ್ಟಿದ್ದಾರೆ.
ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದಾಗಲಿ ಅಥವಾ ದೇಶವನ್ನು ಡಿಜಿಟಲ್ ಸಂಪರ್ಕಗೊಳಿಸುವುದಾಗಲಿ, ಸಮಾಜ ಕಲ್ಯಾಣ ಯೋಜನೆಗಳ ಅನುಷ್ಠಾನವಾಗಲಿ ಅಥವಾ ಕೋವಿಡ್ -19 ಲಸಿಕೆ ಮತ್ತು ಮೂಲಸೌಕರ್ಯಗಳ ಅನುಷ್ಠಾನವಾಗಲಿ, ಭಾರತವು ವಿಶ್ವದಲ್ಲಿ ಭರವಸೆಯ ಕೇಂದ್ರವಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಉಲ್ಲೇಖಿಸಿದ ಷಾ, “ಮನಮೋಹನ್-ಸೋನಿಯಾ ಅವರ 10 ವರ್ಷಗಳನ್ನು ಮೋದಿಯವರ 10 ವರ್ಷಗಳೊಂದಿಗೆ ಹೋಲಿಸಿದಾಗ, ಕಾಂಗ್ರೆಸ್ ನೇತೃತ್ವದ ಸರ್ಕಾರದ 10 ವರ್ಷಗಳಲ್ಲಿ ಭ್ರಷ್ಟಾಚಾರ, ದುರಾಡಳಿತ, ಆರ್ಥಿಕ ಕುಸಿತ, ಭಯೋತ್ಪಾದನೆ ಮತ್ತು ಕಳಪೆ ಕಾನೂನು ಮತ್ತು ಸುವ್ಯವಸ್ಥೆ ಇತ್ತು ಎಂಬುದು ಮಾತ್ರ ತಿಳಿಯುತ್ತದೆ.
ಇದನ್ನೂ ಓದಿ-NCP ಯಲ್ಲಿ ಸುಪ್ರಿಯಾ ಸುಳೆಗೆ ಮಹತ್ವದ ಜವಾಬ್ದಾರಿ, ಪವರ್ ಗೇಮ್ ನಿಂದ ಅಜಿತ್ ಪವಾರ್ ಔಟ್
ಮೋದಿ ಸರ್ಕಾರದ 10 ವರ್ಷಗಳು ಸಮರ್ಥ ಮತ್ತು ಸುರಕ್ಷಿತ ಡಿಜಿಟಲ್ ಇಂಡಿಯಾ ಸಾಮಾಜಿಕ ಕಲ್ಯಾಣದ ಹಾದಿಯಲ್ಲಿ ನಡೆಯುತ್ತಿವೆ ಎಂದು ಹೇಳಿದ್ದಾರೆ. 2024 ರ ಚುನಾವಣೆಯಲ್ಲಿ ಗುಜರಾತ್‌ನ ಎಲ್ಲಾ 26 ಲೋಕಸಭಾ ಸ್ಥಾನಗಳನ್ನು ಪಕ್ಷವು ಗೆಲ್ಲುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ನೀಡುವಂತೆ ಗೃಹ ಸಚಿವರು ಗುಜರಾತ್‌ನ ಜನರನ್ನು ಅವರು ಒತ್ತಾಯಿಸಿದ್ದಾರೆ. ನರೇಂದ್ರಭಾಯಿ ಅವರು ಗುಜರಾತ್‌ನಿಂದ ದೇಶದಲ್ಲಿ ಅಭಿವೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸಿದ್ದಾರೆ. 24x7 ವಿದ್ಯುತ್, ನೀರು, ಅಣೆಕಟ್ಟುಗಳು, ಜಮೀನುಗಳು ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ವಿಷಯದಲ್ಲಿ ಗುಜರಾತ್‌ನಲ್ಲಿ 2002 ರಿಂದ 2014 ರವರೆಗೆ ಸರ್ವತೋಮುಖ ಅಭಿವೃದ್ಧಿಯ ಮಾತುಗಳು ಮೋದಿಯವರಿಗೆ ಪ್ರಧಾನಿಯಾಗಲು ಸಹಾಯ ಮಾಡಿವೆ ಮತ್ತು 'ಗುಜರಾತ್ ಮಾದರಿ' 'ಭಾರತ ಮಾದರಿ'ಗೆ ತಿರುಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Biparjoy Update: 24 ಗಂಟೆಗಳಲ್ಲಿ ಭಾರಿ ಅನಾಹುತಕ್ಕೆ ಕಾರಣವಾಗಲಿದೆ ಬಿಪರಜಾಯ್ ಚಂಡಮಾರುತ, ಹವಾಮಾನ ಇಲಾಖೆ ಎಚ್ಚರಿಕೆ!
2024ರ ಚುನಾವಣೆಯಲ್ಲಿ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ನೋಡಲು ಬಯಸುತ್ತಾರೆಯೋ ಅಥವಾ ರಾಹುಲ್ ಅವರನ್ನು ಎಂಬುದನ್ನು ಜನರು ಒಗ್ಗೂಡಿ ನಿರ್ಧರಿಸಬೇಕು ಎಂದು ಶಾ ಒತ್ತಾಯಿಸಿದರು. ನಾನು ಎಲ್ಲಿಗೆ ಹೋದರೂ ಮೋದಿಗೆ ಬೆಂಬಲ ನೋಡಲು ಸಿಗುತ್ತಿದೆ ಎಂದು ಅವರು ಹೇಳಿದ್ದಾರೆ. ಗುಜರಾತ್‌ನ ಎಲ್ಲಾ 26 ಸ್ಥಾನಗಳಲ್ಲಿ ಬಿಜೆಪಿ ಮೂರನೇ ಬಾರಿಗೆ ಗೆಲ್ಲುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ನಾನು ಗುಜರಾತ್ ಜನತೆಗೆ ವಿನಂತಿಸುತ್ತೇನೆ ಎಂದಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.