General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: 2009ರಲ್ಲಿ ಕರ್ನಾಟಕದಿಂದ ಭಾರತ ರತ್ನ ಪ್ರಶಸ್ತಿಯನ್ನು ಪಡೆದವರು ಯಾರು ?


ಉತ್ತರ: ಪಂಡಿತ್ ಭೀಮಸೇನ್ ಜೋಷಿ


ಪ್ರಶ್ನೆ 2: ವಿಶ್ವಪ್ರಸಿದ್ಧ ಹಂಪಿ ನಗರವು ಯಾವ ನದಿ ದಂಡೆಯಲ್ಲಿದೆ?


ಉತ್ತರ: ತುಂಗಭದ್ರಾ ನದಿ


ಪ್ರಶ್ನೆ 3: 1894ರಲ್ಲಿ ಮೊದಲ ಕನ್ನಡ-ಇಂಗ್ಲಿಷ್ ನಿಘಂಟನ್ನು ಬರೆದವರು ಯಾರು?


ಉತ್ತರ: ಫರ್ಡಿನಾಂಡ್ ಕಿಟೆಲ್


ಪ್ರಶ್ನೆ 4: ವಿಶ್ವಪ್ರಿಸಿದ್ಧ ಗೋಲ್ ಗುಂಬಜ್ ಎಲ್ಲಿದೆ?


ಉತ್ತರ: ಬಿಜಾಪುರ  


ಪ್ರಶ್ನೆ 5: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯನಾಮ ಯಾವುದು?


ಉತ್ತರ: ಶ್ರೀನಿವಾಸ


ಇದನ್ನೂ ಓದಿ: Daily GK Quiz: ಯಾವ ರಾಜ್ಯದಲ್ಲಿ ತಂಬಾಕನ್ನು ಅಧಿಕವಾಗಿ ಬೆಳೆಯುತ್ತಾರೆ..?


ಪ್ರಶ್ನೆ 6: ಯಾವ ಪಟ್ಟಣವನ್ನು ಕರ್ನಾಟಕದ ಸಿಲ್ಕ್ ಟೌನ್ ಎಂದು ಕರೆಯಲಾಗುತ್ತದೆ?


ಉತ್ತರ: ರಾಮನಗರ


ಪ್ರಶ್ನೆ 7: ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿದ ಮೊದಲ ಗ್ರಾಮವನ್ನು ಹೆಸರಿಸಿ?


ಉತ್ತರ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು


ಪ್ರಶ್ನೆ 8: ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು?


ಉತ್ತರ: ಕೆ.ಎಸ್.ನಾಗರತ್ನಮ್ಮ


ಪ್ರಶ್ನೆ 9: ಕರ್ನಾಟಕದ ಕಬಡ್ಡಿ ರಾಣಿ ಎಂದು ಯಾರನ್ನು ಕರೆಯುತ್ತಾರೆ..?  


ಉತ್ತರ: ಮಮತಾ ಪೂಜಾರಿ


ಪ್ರಶ್ನೆ 10: ಕರ್ನಾಟಕದಲ್ಲಿ ಮೊದಲ ಕಬ್ಬಿಣ ಮತ್ತು ಉಕ್ಕಿನ ಕಂಪನಿಯನ್ನು ಎಲ್ಲಿ ಸ್ಥಾಪಿಸಲಾಯಿತು?


ಉತ್ತರ: ಭದ್ರಾವತಿ


ಇದನ್ನೂ ಓದಿ: National Pension System: ಸರ್ಕಾರಿ ನೌಕರರ ಸ್ವಯಂ ನಿವೃತ್ತಿ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಿದ ಕೇಂದ್ರ ಸರ್ಕಾರ...!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.