ನವದೆಹಲಿ : ಸರ್ಕಾರದ ವಿವಿಧ ಯೋಜನೆಗಳನ್ನು ಪಡೆಯಲು ಆಧಾರ್ ಕಾರ್ಡ್ ಅನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿರುವ ಬೆನ್ನಲ್ಲೇ 12 ಡಿಜಿಟ್‌ಗಳ ಈ ವಿಶಿಷ್ಟ ಗುರುತು ಸಂಖ್ಯೆಯ ಡಾಟಾಗಳನ್ನು ಸುಲಭದಲ್ಲಿ ಮತ್ತು ಅನಿರ್ಬಂಧಿತವಾಗಿ ಜುಜುಬಿ ಹಣಕ್ಕೆ ಖರೀದಿಸಲು ಸಾಧ್ಯವಿದೆ ಎಂಬುದು 'ದ ಟ್ರಿಬ್ಯೂನ್‌' ನಡೆಸಿರುವ ತನಿಖೆಯಲ್ಲಿ ಬಹಿರಂಗವಾಗಿದೆ.


COMMERCIAL BREAK
SCROLL TO CONTINUE READING

ಈ ಕುರಿತು ವರದಿಮಾಡಿರುವ `ದ ಟ್ರಿಬ್ಯೂನ್' ತನ್ನ ವರದಿಗಾರರೊಬ್ಬರು ವಾಟ್ಸಾಪ್‌ನಲ್ಲಿ ಅನಾಮಿಕ ಮಾರಾಟಗಾರರ ಮೂಲಕ, ಪೇಟಿಎಂ ನಲ್ಲಿ ಏಜಂಟ್‌ ಒಬ್ಬರಿಗೆ ಕೇವಲ 500 ರೂ. ಪಾವತಿಸಿ ಆಧಾರ್‌ ಡಾಟಾ ಖರೀದಿಸಿರುವುದಾಗಿ ತಿಳಿಸಿದೆ.  


ತನ್ನ ವರದಿಗಾರರು ವಾಟ್ಸಾಪ್‌ನಲ್ಲಿ ಅನಾಮಿಕ ಮಾರಾಟಗಾರರ ಮೂಲಕ, ಪೇಟಿಎಂ ನಲ್ಲಿ ಏಜಂಟ್‌ ಒಬ್ಬರಿಗೆ ಕೇವಲ 500 ರೂ. ಪಾವತಿಸಿ ಕೇವಲ 10 ನಿಮಿಷಗಳಲ್ಲಿ ಆಧಾರ್‌ ಡಾಟಾ ಖರೀದಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. 


ನಂತರ ಆ ಏಜಂಟ್‌ ಪತ್ರಿಕಾ ವರದಿಗಾರನಿಗೆ ಲಾಗಿನ್‌ ಐಡಿ ಮತ್ತು ಪಾಸ್‌ ವರ್ಡ್‌ ಕೊಟ್ಟಿದ್ದಾನೆ. ಇದರ ಮೂಲಕ ನೂರು ಕೋಟಿ ಆಧಾರ್‌ ನಂಬರ್‌ಗಳಿಗೆ ಅನಿರ್ಬಂಧಿತ ಸಂಪರ್ಕ ದೊರಕಿ ಅವುಗಳಲ್ಲಿನ ಖಾಸಗಿ ಮಾಹಿತಿಗಳನ್ನು ತನಿಖಾ ವರದಿಗಾರ ಪಡೆದಿರುವುದಾಗಿ "ದ ಟ್ರಿಬ್ಯೂನ್‌' ವರದಿ ತಿಳಿಸಿದೆ.


ಲಾಗ್‌ ಇನ್‌ ಗೇಟ್‌ವೇ ಮೂಲಕ ಯಾರೇ ಆದರೂ ಯಾವುದೇ ನಿರ್ದಿಷ್ಟ ಆಧಾರ್‌ ನಂಬರ್‌ ಅನ್ನು ಪೋರ್ಟಲ್‌ನಲ್ಲಿ ಪಡೆಯಬಹುದಾಗಿದ್ದು, ಆ ನಂಬರ್‌ನ ವ್ಯಕ್ತಿಯ ಹೆಸರು, ವಿಳಾಸ, ಪೋಸ್ಟಲ್‌ ಕೋಡ್‌, ಫೋಟೋ, ಫೋನ್‌ ನಂಬರ್‌, ಇ-ಮೇಲ್‌ ವಿಳಾಸ ಇತ್ಯಾದಿಗಳನ್ನು ಸುಲಭದಲ್ಲಿ ಪಡೆಯಬಹುದಾಗಿದೆ. 


ಮತ್ತೊಂದು ಶಾಕಿಂಗ್ ವಿಚಾರವೆಂದರೆ, ಆ ಏಜೆಂಟ್ ಗೆ ಹೆಚ್ಚುವರಿ 300 ರೂ.ಗಳನ್ನು ನೀಡಿದರೆ ಆತ ಆಧಾರ್ ಕಾರ್ಡ್ ಮುದ್ರಿಸುವ ಸಾಫ್ಟ್ ವೇರ್ ಅನ್ನು ಕೂಡ ಆತ ಒದಗಿಸುತ್ತಾನೆ ಎಂದು ಆ ಪತ್ರಿಕೆ ವರದಿ ಮಾಡಿದೆ. 


ಆದರೆ ಯುಐಎಡಿಎ ಈ ಮಾಧ್ಯಮ ವರದಿಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದು, ಈ ವರದು ಸುಳ್ಳು ಎಂದು ಹೇಳಿದೆ. 


ಈ ಮಧ್ಯೆ, ಆಧಾರ್‌ ಕುರಿತ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ಮೇಲಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡಿದೆ. 


ಸರ್ಕಾರದ ಆಧಾರ್ ಕಡ್ಡಾಯದ ಕುರಿತಾದ ಅರ್ಜಿಗಳನ್ನು ವಿಚಾರಣೆ ನಡೆಸಲು ಸಂವಿಧಾನಬದ್ಧ ಪೀಠವನ್ನು ರಚಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ. 


ಇದೇ ವೇಳೆ ಬ್ಯಾಂಕ್ ಖಾತೆ, ಮೊಬೈಲ್ ನಂಬರ್, ಪ್ಯಾನ್ ಮೊದಲಾದವಿಗಳಿಗೆ ಆಧಾರ್ ನಂಬರ್ ಲಿಂಕ್ ಮಾಡಲು ಈ ಮೊದಲು ನಿಗದಿಪಡಿಸಿದ್ದ ದಿನಾಂಕವನ್ನು ಸರ್ಕಾರ ಮಾರ್ಚ್ 31, 2018ರವರೆಗೆ ವಿಸ್ತರಿಸಿದೆ.