ನವದೆಹಲಿ: ಇತ್ತೀಚೆಗೆ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋಪ್ತಾದಕರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40ಕ್ಕೂ ಅಧಿಕ ಸಿಆರ್ಪಿಎಫ್ ಯೋಧರು ಹುತಾತ್ಮರಾದ ಬಳಿಕ ಇಡೀ ದೇಶ ಪಾಕಿಸ್ತಾನದ ನಡೆಯನ್ನು ಸಂಪೂರ್ಣವಾಗಿ ವಿರೋಧಿಸತೊಡಗಿದೆ. ದೇಶದ ಟೀ ಮಾರುವವನಿಂದ ಹಿಡಿದು, ಉದ್ಯಮಿಯವರೆಗೆ ಎಲ್ಲರೂ ಈ ಘಟನೆಯನ್ನು ವಿರೋಧಿಸಿದ್ದಾರೆ. ಇದೇ ಸಂದರ್ಭದಲ್ಲಿ ಛತ್ತಿಸ್ ಗಡದ ಚಿಕನ್ ವ್ಯಾಪಾರಿಯೊಬ್ಬ ತನ್ನ ಗ್ರಾಹಕರಿಗೆ ವಿಶೇಷ ರಿಯಾಯಿತಿ ಘೋಷಿಸಿದ್ದಾನೆ.


COMMERCIAL BREAK
SCROLL TO CONTINUE READING

ಜಗದಲ್ಪುರದ ಚಿಕನ್ ಅಂಗಡಿ ವ್ಯಾಪಾರಿ ಅಂಜಲ್ ಸಿಂಗ್ ಎಂಬವರು ತಾವು ಮಾರುವ ಚಿಕನ್ ಲೆಗ್ ಪೀಸ್ಗಳ ಮೇಲೆ 10 ರೂಪಾಯಿಗಳ ರಿಯಾಯಿತಿ ಘೋಷಿಸಿದ್ದಾರೆ. ಆದರೆ ಈ ರಿಯಾಯಿತಿ ಸುಮ್ಮನೆ ಸಿಗುವುದಿಲ್ಲ. 'ಪಾಕಿಸ್ತಾನ ಮುರ್ದಾಬಾದ್' ಎಂದು ಹೇಳುವವರಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದೆ.


"ಪಾಕಿಸ್ತಾನ ಎಂದಿಗೂ ಮಾನವಿಯತೆಗೆ ಬೆಲೆ ಕೊಟ್ಟಿಲ್ಲ, ಮುಂದೆಯೂ ಕೊಡುವುದಿಲ್ಲ. ಹಾಗಾಗಿ ಎಲ್ಲರೂ ಪಾಕಿಸ್ತಾನ ಮುರ್ದಾಬಾದ್ ಹೇಳಲೇಬೇಕು" ಎಂದಿರುವ ಮಾಲೀಕ ಅಂಜಲ್ ಸಿಂಗ್, ಈ ಮೂಲಕ ಪುಲ್ವಾಮಾ ದಾಳಿಯನ್ನು ವಿರೋಧಿಸಿದ್ದಾರೆ.