ಅಲಹಾಬಾದ್: ಕರ್ನಾಟಕದಲ್ಲಿ ಅತಿ ಕಡಿಮೆ ಬೆಲೆಗೆ ಊಟ ಒದಗಿಸುವ ದೃಷ್ಟಿಯಿಂದ ಆರಂಭವಾಗಿರುವ ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್'ನಂತೆ ಅಲಹಾಬಾದ್'ನಲ್ಲಿ ಕೇವಲ 10ರೂ.ಗಳಿಗೆ ಊಟ ನೀಡಲು ನಿರ್ಧರಿಸಲಾಗಿದೆ. ಆ ಊಟದ ಹೆಸರೇನು ಗೊತ್ತೇ? ಅದೇ 'ಯೋಗಿ ಥಾಲಿ'!


COMMERCIAL BREAK
SCROLL TO CONTINUE READING

ಅಲಹಾಬಾದ್ ಮೇಯರ್ ಅಭಿಲಾಶ್ ಗುಪ್ತಾ ಅವರು ಸ್ಥಳೀಯ ಸಂಸ್ಥೆಯೊಂದರ ಸಹಯೋಗದಲ್ಲಿ ಈ ಭೋಜನ ಯೋಜನೆ ಹಮ್ಮಿಕೊಂಡಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಸರನ್ನು ಈ ಭೋಜನಕ್ಕೆ ನಾಮಕರಣ ಮಾಡಿದ್ದಾರೆ. 


"ಈ ಸೌಲಭ್ಯವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಸರಿನಲ್ಲಿ ಆರಂಭಿಸಲಾಗಿದೆ. ಇದರಿಂದ ಒಂದು ಹೊತ್ತಿನ ಊಟಕ್ಕೂ ಪರದಾಡುವ ಬಡವರಿಗೆ, ಶ್ರಮಿಕರಿಗೆ ಖಂಡಿತ ಉಪಯೋಗವಾಗಲಿದೆ" ಎಂದು ಮೇಯರ್ ಗುಪ್ತಾ ಹೇಳಿದ್ದಾರೆ. 


ಈ ಯೋಜನೆಯ ರೂವಾರಿ ದಿಲೀಪ್ ಅಲಿಯಾಸ್ ಕಾಕೆ ಮಾತನಾಡಿ, ಯಾರೂ ಕೂಡ ಖಾಲಿ ಹೊಟ್ಟೆಯಿಂದ ಮಲಗಬಾರದು. ಹೀಗಾಗಿ 10 ರೂ.ಗಳಿಗೆ ಊಟ ನೀಡುವ ಆಲೋಚನೆ ಹೊಂದಿದ್ದೇವೆ. ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಜನತೆಗೆ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಹಾಗಾಗಿ ಅವರ ಹೆಸರನ್ನೇ ಇದಕ್ಕೆ ಇಡಲಾಗಿದೆ" ಎಂದಿದ್ದಾರೆ. ಅಲಹಾಬಾದ್‌ನ ಅಟಾರ್ಸುಯಿಯಾ ಭಾಗದಲ್ಲಿರುವ ಔಟ್‌ಲೆಟ್‌ನಲ್ಲಿ ಕ್ಯಾಂಟೀನ್‌ ಆರಂಭಗೊಳಿಸಲಾಗಿದೆ.