Ghulam Nabi Azad new Party : ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದಿರುವ ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್ ಅವರು 10 ದಿನಗಳಲ್ಲಿ ತಮ್ಮ ಹೊಸ ರಾಜಕೀಯ ಪಕ್ಷ ಘೋಷಿಸುವುದಾಗಿ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿರುವ ಡಾಕ್ ಬಂಗಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಗುಲಾಂ ನಬಿ ಆಜಾದ್, ಪಕ್ಷ ಸಿದ್ಧಾಂತ “ಆಜಾದ್”, ಹೊಸ ರಾಜಕೀಯ ಪಕ್ಷದ ಕಾರ್ಯಸೂಚಿಯು ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಮರುಸ್ಥಾಪಿಸುವುದು ಮತ್ತು ಜನರ ಉದ್ಯೋಗ ಮತ್ತು ಭೂಮಿಯ ಹಕ್ಕುಗಳಿಗಾಗಿ ಹೋರಾಡುವುದು ಎಂದು ಹೇಳಿದರು.


ಇದನ್ನೂ ಓದಿ : Swaroopanand Saraswati Demise: ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ನಿಧನ


10 ದಿನಗಳಲ್ಲಿ ಹೊಸ ಪಕ್ಷ ಘೋಷಣೆ


ಆಗಸ್ಟ್ 26 ರಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಂತರ ಕಾಶ್ಮೀರ ಕಣಿವೆಯಲ್ಲಿ ತನ್ನ ಮೊದಲ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಜಾದ್, "ನನ್ನೊಂದಿಗೆ ನಿಂತಿರುವ ಮತ್ತು ನನ್ನ ಹೊಸ ಪಕ್ಷದ ಆಧಾರವಾಗಿರುವ ನನ್ನ ಸಹೋದ್ಯೋಗಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ, ಅದನ್ನು ಮುಂದಿನ 10 ದಿನಗಳಲ್ಲಿ ಘೋಷಿಸಲಾಗುವುದು ಎಂದು ಹೇಳಿದ್ದಾರೆ.


'ತಮ್ಮ ಹೊಸ ಪಕ್ಷವು ಅದರ ಸಿದ್ಧಾಂತ ಮತ್ತು ಅದರ ಹೆಸರಿನಂತೆ ಚಿಂತನೆಯಲ್ಲಿ "ಆಜಾದ್" ಎಂದು ಹೇಳಿದರು. ನನ್ನ ಪಕ್ಷ ಆಜಾದ್ ವಾಗಿದೆ ಎಂದರು. ನನ್ನ ಅನೇಕ ಸಹೋದ್ಯೋಗಿಗಳು ಪಕ್ಷಕ್ಕೆ 'ಆಜಾದ್' ಎಂದು ಹೆಸರಿಡಬೇಕು ಎಂದು ಹೇಳಿದರು. ಆದರೆ, ನಾನು ಅದಕ್ಕೆ ಒಪ್ಪಿಲ್ಲ. ಆದರೆ, ಅದರ ಸಿದ್ಧಾಂತವು ಸ್ವತಂತ್ರವಾಗಿರುತ್ತದೆ, ಅದು ವಿಲೀನಗೊಳ್ಳುವುದಿಲ್ಲ. ಇದು ನನ್ನ ಸಾವಿನ ನಂತರ ಆಗಬಹುದು, ಆದರೆ ಅಲ್ಲಿಯವರೆಗೆ ಆಗಲ್ಲ ಎಂದರು.


ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದ ಆಜಾದ್


ಆಜಾದ್ ಅವರು ಆಗಸ್ಟ್ 26 ರಂದು ಕಾಂಗ್ರೆಸ್ ಜೊತೆಗಿನ ಐದು ದಶಕಗಳ ಸಂಬಂಧಕ್ಕೆ ಗುಡ್ ಬೈ ಹೇಳಿದ್ದರು. ಕಾಂಗ್ರೆಸ್ ದಲ್ಲಿ ಇವರು ಹಿರಿಯ ನಾಯಕರಾಗಿ ಗುರುತಿಸಿಕೊಂಡಿದ್ದರು.


ಇದನ್ನೂ ಓದಿ : BB Lal : ರಾಮಜನ್ಮಭೂಮಿ ಉತ್ಖನನದ ನೇತೃತ್ವ ವಹಿಸಿದ್ದ ಪುರಾತತ್ವಶಾಸ್ತ್ರಜ್ಞ ಬಿಬಿ ಲಾಲ್ ಇನ್ನಿಲ್ಲ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.