ಶಿವಸೇನೆ-ಬಿಜೆಪಿ ದೋಸ್ತಿ ಕತಂ: `ಬಾಲಾಸಾಹೇಬ್ ಠಾಕ್ರೆ ನರಳುತ್ತಿರಬಹುದು` ಎಂದ ಗಿರಿರಾಜ್ ಸಿಂಗ್
ಗಿರಿರಾಜ್ ಸಿಂಗ್ ಚಿತ್ರವೊಂದನ್ನು ಟ್ವೀಟ್ ಮಾಡಿದ್ದು, ಇದರಲ್ಲಿ ಬಾಲಾ ಸಾಹೇಬ್ ಠಾಕ್ರೆ, ಮಾಜಿ ಪ್ರಧಾನಿ ಅಟಲ್ ಬಿಹಾರ ವಾಜಪೇಯಿ, ಎಲ್.ಕೆ.ಅಡ್ವಾಣಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
ಪಾಟ್ನಾ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಏಕಕಾಲದಲ್ಲಿ ಸ್ಪರ್ಧಿಸಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿವಸೇನೆ (ಶಿವಸೇನೆ) ನಡುವಿನ 30 ವರ್ಷದ ಸ್ನೇಹ ಮುರಿದು ಬಿದ್ದಿದೆ. ಇದಕ್ಕೆ ಕಾರಣ ಮಹಾರಾಷ್ಟ್ರದ ಸಿಎಂ ಪಟ್ಟ. ಈ ವಿಷಯದ ಬಗ್ಗೆ ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕೂಡ ಪ್ರತಿಕ್ರಿಯಿಸಿದ್ದು, ಹಿಂದುತ್ವ ವಿರೋಧಿಗಳೊಂದಿಗೆ ಹೋಗುತ್ತಿರುವುದನ್ನು ಕಂಡು ಬಾಲಾಸಾಹೇಬ್ ಠಾಕ್ರೆ ಮತ್ತು ಶಿವಸೇನೆ ನರಳುತ್ತಿರಬಹುದು ಎಂದಿದ್ದಾರೆ.
ಗಿರಿರಾಜ್ ಸಿಂಗ್ ಚಿತ್ರವೊಂದನ್ನು ಟ್ವೀಟ್ ಮಾಡಿದ್ದು, ಇದರಲ್ಲಿ ಬಾಲಾ ಸಾಹೇಬ್ ಠಾಕ್ರೆ, ಮಾಜಿ ಪ್ರಧಾನಿ ಅಟಲ್ ಬಿಹಾರ ವಾಜಪೇಯಿ, ಎಲ್.ಕೆ.ಅಡ್ವಾಣಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
ಬಾಲಾ ಸಾಹೇಬರ ವರ್ಷಗಳ ತಪಸ್ಸಿನಿಂದಾಗಿ ಮಹಾರಾಷ್ಟ್ರದಲ್ಲಿ ಒಂದು ನಿರೀಕ್ಷೆ ಮತ್ತು ಮನ್ನಣೆಯನ್ನು ನೀಡಿತು. ಇಂದು ಹಿಂದುತ್ವ ವಿರೋದಿಗಳೊಂದಿಗೆ ಹೋಗುತ್ತಿರುವುದನ್ನು ಕಂಡು ಬಾಲಾ ಸಾಹೇಬ್ ಮತ್ತು ಶಿವಸೇನೆ ನರಳುತ್ತಿರಬಹುದು. ಬಾಲಸಾಹೇಬ್ ಎಲ್ಲರನ್ನು ಹೇಗೆ ಒಗ್ಗೂಡಿಸಿದರು ಎಂಬುದು ಇತಿಹಾಸ. ಇದೀಗ ಕೆಲವರು ಎಲ್ಲರನ್ನು ಚದುರಿಸುತ್ತಿದ್ದಾರೆ ಎಂದು ಗಿರಿರಾಜ್ ಸಿಂಗ್ ಅವರು ಟ್ವೀಟ್ ನಲ್ಲಿ ಬರೆದಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ 105 ಶಾಸಕರು ಜಯಗಳಿಸಿದರು. ಶಿವಸೇನೆಯ 56 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಫಲಿತಾಂಶದ ನಂತರ ಶಿವಸೇನೆ ಮುಖ್ಯಮಂತ್ರಿ ಹುದ್ದೆಯ ಬೇಡಿಕೆ ಮತ್ತು 50-50 ಸೂತ್ರವನ್ನು ಬಿಜೆಪಿ ಮುಂದೆ ಮಂಡಿಸಿತು. ಆದರೆ ಬಿಜೆಪಿ ಅದನ್ನು ತಿರಸ್ಕರಿಸಿತು. ಇದರ ನಂತರ, ಶಿವಸೇನೆ ಬಿಜೆಪಿ ಜೊತೆಗಿನ ತನ್ನ ಚುನಾವಣಾ ಪೂರ್ವ ಮೈತ್ರಿಯನ್ನು ಕಳೆದುಕೊಂಡಿದೆ. ಅದರ ನಂತರ ಎದುರಾಳಿ ಪಕ್ಷವು ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಸರ್ಕಾರ ರಚಿಸಲು ಪ್ರಯತ್ನಿಸುತ್ತಿದೆ.