ಭರತಪುರ್:  ರಾಜಸ್ತಾನ್ ದಲ್ಲಿ ಹುಡುಗಿಗೆ ಕಾಟ ಕೊಟ್ಟು ಅವಳಿಗೆ ಅವಮಾನಿಸಲು ಪ್ರಯತ್ನಿಸುತ್ತಿದ್ದ ಹುಡುಗನಿಗೆ ಹುಡುಗಿಯೊಬ್ಬಳು ಭರ್ಜರಿ ಧರ್ಮದೇಟು ನೀಡಿದ್ದಾಳೆ. 



COMMERCIAL BREAK
SCROLL TO CONTINUE READING

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ಚುಡಾಯಿಸುತ್ತಿದ್ದ ಹುಡುಗನಿಗೆ ಕೋಲಿನಿಂದ ಬಾರಿಸುತ್ತಿರುವ ಚಿತ್ರಣ ಸೆರೆಯಾಗಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಈ ಹುಡುಗಿ "ಕೆಲವು ಹುಡುಗರು ನನ್ನನ್ನು ಅವಮಾನಕ್ಕೆ ಒಳಪಡಿಸಲು ನೋಡಿದರು ಅವರಿಗೆ ನನ್ನ ಸಂದೇಶವಿಷ್ಟೇ ಹೆಣ್ಣು ಮಕ್ಕಳು ವೀಕ್ ಎಂದು ತಿಳಿಯಬೇಡಿ, ಎಚ್ಚರಿಕೆ ಸಂದೇಶ ರವಾನಿಸಿದ್ದಾಳೆ.



ಒಂದು ವೇಳೆ ನೀವು ಡೊನಾಲ್ಡ್ ಟ್ರಂಪ್ ಮಕ್ಕಳು ಎಂದು ತಿಳಿದಿದ್ದರೆ ಅದು ನಿಮ್ಮ ಭ್ರಮೆಯಷ್ಟೇ.ಯಾವ ಹೆಣ್ಣು ಮಗಳು ಕೂಡ ವೀಕ್ ಅಲ್ಲ,ಹದ್ದು ಮೀರಿದರೆ  ನಮ್ಮ ಧ್ವನಿಯನ್ನು ನಾವು ಎತ್ತುತ್ತೇವೆ. ನಿಮ್ಮ  ಜೀವನ ಹಾಳಾಗಬಾರದು.ಆದ್ದರಿಂದ ಅವನಿಗೆ ಸುಧಾರಣೆಗೆ ಅವಕಾಶ ನಿಡುವ ನಿಟ್ಟಿನಲ್ಲಿ ನಾನು  ಪೊಲೀಸರಿಗೆ ದೂರು ನೀಡಲಿಲ್ಲ" ಎಂದು ಆ ಹೆಣ್ಣು ಮಗಳು ತಿಳಿಸಿದಳು.