ನವದೆಹಲಿ: ಹವಾಮಾನದಿಂದಾಗಿ ರೈತರು (Farmers) ಒಂದಲ್ಲಾ ಒಂದು ರೀತಿಯ ತೊಂದರೆಗೆ ಸಿಲುಕುತ್ತಾರೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಬರಗಾಲದಿಂದಾಗಿ ಬೆಳೆ ಸುಟ್ಟುಹೋಗುತ್ತಿರುವುದು ಒಂದೆಡೆಯಾದರೆ  ದೇಶದ ಎಲ್ಲ ಭಾಗಗಳಲ್ಲಿ ಭಾರಿ ಮಳೆ ಮತ್ತು ಪ್ರವಾಹ (Flood)ದಿಂದಾಗಿ ಬೆಳೆಗಳು ಹಾಳಾಗುತ್ತಿವೆ. ನೈಸರ್ಗಿಕ ವಿಪತ್ತಿನಿಂದಾಗಿ ಬೆಳೆಗಳನ್ನು ಸರಿದೂಗಿಸಲು ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ-ಪಿಎಂಎಫ್‌ಬಿವೈ ಅನ್ನು ಪ್ರಾರಂಭಿಸಲಾಗಿದೆ.


COMMERCIAL BREAK
SCROLL TO CONTINUE READING

ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ ಬೆಳೆಗೆ ಸುರಕ್ಷತಾ ರಕ್ಷಣೆಯಾಗಿದೆ. ರೈತರಿಗೆ ಬೆಳೆ ನಷ್ಟವಾದರೆ ಸ್ಥಳೀಯ ಕೃಷಿ ಕಚೇರಿ ರೈತರ ಸಹಾಯವಾಣಿ ಅಥವಾ ಬೆಳೆ ವಿಮಾ ಅಪ್ಲಿಕೇಶನ್‌ನಲ್ಲಿ 72 ಗಂಟೆಗಳಲ್ಲಿ ಬೆಳೆ ವೈಫಲ್ಯದ ಬಗ್ಗೆ ಮಾಹಿತಿ ಸಲ್ಲಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು ಸಹಾಯವಾಣಿ ಸಂಖ್ಯೆ 1800-180-1551 ಅನ್ನು ಸಂಪರ್ಕಿಸಬಹುದು.


ಇದು ಅಗ್ನಿ ಪರೀಕ್ಷೆ, ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸಮರ್ಥವಾಗಿ ಸಜ್ಜಾಗಿ: ಎಚ್.ಡಿ. ಕುಮಾರಸ್ವಾಮಿ

ಪಿಎಂಎಫ್‌ಬಿವೈ ಅಡಿಯಲ್ಲಿ, ಸ್ಥಳೀಯ ವಿಪತ್ತುಗಳು ಮತ್ತು ಸುಗ್ಗಿಯ ನಂತರದ ನಷ್ಟಗಳನ್ನು ವೈಯಕ್ತಿಕ ವಿಮೆ ಮಾಡಿದ ಜಮೀನಿನ ಮಟ್ಟದಲ್ಲಿ ನಿರ್ಣಯಿಸಲಾಗುತ್ತದೆ. ಆದ್ದರಿಂದ ರೈತ ಮತ್ತು ಗೊತ್ತುಪಡಿಸಿದ ವಿಮಾ ಏಜೆನ್ಸಿಗಳಿಂದ ನಷ್ಟದ ನೋಟೀಸ್ ಸಲ್ಲಿಸುವುದು ಅವಶ್ಯಕ.


ನೈಸರ್ಗಿಕ ವಿಕೋಪಗಳಿಂದಾಗಿ ರೈತನಿಗೆ ಆಗುವ ನಷ್ಟವು ದೊಡ್ಡ ಪ್ರಮಾಣದಲ್ಲಿರುತ್ತದೆ.  ಆದ್ದರಿಂದ ಅಂತಹ ವಿಪತ್ತುಗಳ ಹಕ್ಕುಗಳಿಗಾಗಿ ವಿಮೆ ಮಾಡಿದ ರೈತ ಮತ್ತು ಹೆಸರಿಸಲಾದ ಏಜೆನ್ಸಿಗಳಿಗೆ ತಿಳಿಸುವ ಅಗತ್ಯವಿಲ್ಲ.


PM Kisan: ರೈತರ ಖಾತೆಗೆ ಈ ದಿನದಿಂದ ಬರಲಿದೆ ಆರನೇ ಕಂತು


ಜಿಲ್ಲಾ ಮಟ್ಟದ ಜಂಟಿ ಸಮಿತಿ (ಡಿಎಲ್‌ಜೆಸಿ) ಸಲ್ಲಿಸಿದ ನಷ್ಟದ ಮೌಲ್ಯಮಾಪನ ಅಥವಾ ರಾಜ್ಯ ಸರ್ಕಾರದ ಸರಾಸರಿ ಇಳುವರಿಯ ಆಧಾರದ ಮೇಲೆ ಹಕ್ಕುಗಳನ್ನು ಲೆಕ್ಕಹಾಕಲಾಗುತ್ತದೆ.


ಪ್ರಧಾನ್ ಮಂತ್ರಿ ಬೆಳೆ ವಿಮಾ ಯೋಜನೆ ಪ್ರಾರಂಭವಾದ ಮೊದಲ ಮೂರು ವರ್ಷಗಳಲ್ಲಿ ರೈತರು 13,000 ಕೋಟಿ ರೂ.ಗಳ ಪ್ರೀಮಿಯಂ ಪಾವತಿಸಿದ್ದಾರೆ ಮತ್ತು ರೈತರಿಗೆ ಒಟ್ಟು 60000 ಕೋಟಿ ರೂ.ಗಳಷ್ಟು ಪಾವತಿ ಮಾಡಲಾಗಿದೆ.