ವಿಶ್ವಾಸಮತ ಸಾಬೀತುಪಡಿಸಲು15 ದಿನ ನೀಡಿರುವುದು ಪ್ರಜಾಪ್ರಭುತ್ವದ ಅಣಕ - ರಜನಿಕಾಂತ್
ಚೆನ್ನೈ: ಕರ್ನಾಟಕಲ್ಲಿನ ರಾಜಕೀಯ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ರಜನಿಕಾಂತ್ ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು"ಎಂದು ಬಣ್ಣಿಸಿದ್ದಾರೆ. ರಾಜ್ಯಪಾಲರು ಬಿಜೆಪಿಗೆ ವಿಶ್ವಾಸಮತವನ್ನು ಸಾಬೀತುಪಡಿಸಲು 15 ದಿನಗಳ ಕಾಲಾವಕಾಶವನ್ನು ಪ್ರಜಾಪ್ರಭುತ್ವದ ಅಣಕ ಎಂದು ಟೀಕಿಸಿದ್ದಾರೆ.
"ನಿನ್ನೆ ಕರ್ನಾಟಕದಲ್ಲಿ ಸಂಭವಿಸಿರುವುದ ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ. ಬಿಜೆಪಿಯು ವಿಶ್ವಾಸಮತ ವನ್ನು ಸಾಬೀತುಪಡಿಸಲು 15 ದಿನಗಳ ಕಾಲಾವಧಿ ನೀಡಿದ್ದು ಪ್ರಜಾಪ್ರಭುತ್ವದ ಅಣಕ. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ಆದೇಶಕ್ಕೆ ನಾನು ಧನ್ಯವಾದ ಹೇಳುತ್ತೇನೆ" ಎಂದು ರಜನಿಕಾಂತ್ ತಿಳಿಸಿದರು.
ಇದೇ ಸಂದರ್ಭದಲ್ಲಿ 2019 ರ ಚುನಾವಣೆಯಲ್ಲಿ ಸ್ಪರ್ಧಿಸುವುದರ ಬಗ್ಗೆ ಕೇಳಿದಾಗ ಅವರು ಚುನಾವಣಾ ದಿನಾಂಕ ನಿಗಧಿಯಾದ ಬಳಿಕ ತಮ್ಮ ನಿರ್ಧಾರವನ್ನು ತಿಳಿಸುತ್ತೇನೆ ಎಂದು ರಜನಿಕಾಂತ್ ತಿಳಿಸಿದರು. ಇನ್ನು ಪಕ್ಷಕ್ಕೆ ಚಾಲನೆ ಸಿಕ್ಕಿಲ್ಲ ಆದರೆ ನಾವು ಎಲ್ಲದಕ್ಕೂ ಸಿದ್ದರಿದ್ದೇವೆ ಎಂದು ಅವರು ತಿಳಿಸಿದರು.