Daily GK Quiz: ಮೊದಲ ಆಂಗ್ಲೋ-ಮೈಸೂರು ಯುದ್ಧ ಯಾವಾಗ ನಡೆಯಿತು?
Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
ಪ್ರಶ್ನೆ 1- ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದವರು ಯಾರು?
ಉತ್ತರ: ಕುವೆಂಪು
ಪ್ರಶ್ನೆ 2- ಯಾವ ವರ್ಷದಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು?
ಉತ್ತರ: 1973.
ಪ್ರಶ್ನೆ 3- ಮೊದಲ ಆಂಗ್ಲೋ-ಮೈಸೂರು ಯುದ್ಧ ಯಾವಾಗ ನಡೆಯಿತು..?
ಉತ್ತರ: 1767.
ಪ್ರಶ್ನೆ 4- ಬೆಂಗಳೂರು ವಿಶ್ವವಿದ್ಯಾಲಯವನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು?
ಉತ್ತರ: 1886.
ಪ್ರಶ್ನೆ 5- ಕನ್ನಡ ಸಾಹಿತ್ಯದ ಮೂರು ರತ್ನಗಳು ಯಾರು?
ಉತ್ತರ: ಪಂಪ, ಪೊನ್ನ ಮತ್ತು ರನ್ನ.
ಇದನ್ನೂ ಓದಿ: GK Questions Answers: ಯಾವ ದೇಶದ ಜನರು ಬೆಕ್ಕುಗಳನ್ನು ದೇವರಂತೆ ಪೂಜಿಸುತ್ತಾರೆ..?
ಪ್ರಶ್ನೆ 6- ಕರ್ನಾಟಕದ ಒಟ್ಟು ಲೋಕಸಭಾ ಸ್ಥಾನಗಳ ಸಂಖ್ಯೆ
ಉತ್ತರ: 28.
ಪ್ರಶ್ನೆ 7- ಪಟ್ಟದಕಲ್ಲು ಮತ್ತು ಐಹೋಳೆ ದೇವಾಲಯಗಳನ್ನು ನಿರ್ಮಿಸಿದವರು ಯಾರು?
ಉತ್ತರ: ಚಾಲುಕ್ಯರು
ಪ್ರಶ್ನೆ 8- ಚಿತ್ರದುರ್ಗದಲ್ಲಿನ “ಬ್ರಹ್ಮಗಿರಿ” ಶಾಸನವು ಯಾವ ಚಕ್ರವರ್ತಿಗೆ ಸೇರಿದೆ?
ಉತ್ತರ: ಸಾಮ್ರಾಟ ಅಶೋಕ
ಪ್ರಶ್ನೆ 9- ಸುವರ್ಣ ವಿಧಾನ ಸೌಧ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
ಉತ್ತರ: ಬೆಳಗಾವಿ ಜಿಲ್ಲೆಯಲ್ಲಿದೆ
ಪ್ರಶ್ನೆ 10- ಕರ್ನಾಟಕದ ಅತಿ ಎತ್ತರದ ಸ್ಥಳ ಯಾವುದು?
ಉತ್ತರ: ಮುಳ್ಳಯ್ಯನಗಿರಿ ಶಿಖರ
ಇದನ್ನೂ ಓದಿ: GK Questions Answers: ಜಗತ್ತಿನ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ ಯಾವುದು..?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.