ನವದೆಹಲಿ:ಇಂದು ನಡೆದ ಅಂತಿಮ ದಿನದ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಮೋದಿ ಸರ್ಕಾರದ ಆರ್ಥಿಕ ನೀತಿಗಳ ಮೇಲೆ ವಾಗ್ದಾಳಿ ನಡೆಸಿದರು.


COMMERCIAL BREAK
SCROLL TO CONTINUE READING

ನೋಟು ನಿಷೇಧದ ಬಗ್ಗೆ ಪ್ರಸ್ತಾಪಿಸಿದ ಚಿದಂಬರಂ "ನೋಟು ನಿಷೇಧಿಕರಣಕ್ಕಿಂತಲೂ ದೊಡ್ಡ ಸುಳ್ಳು ಯಾವುದು ಇಲ್ಲ  ಆರ್ ಬಿ ಐ ಗೆ ಇದುವರೆಗೂ ಮರುಕಳಿಸಿದ ಹಣವನ್ನು ಎಣಿಸಲು ಸಾಧ್ಯವಾಗಿಲ್ಲವೇಕೆ? ನೀವು ತಿರುಪತಿ ಹುಂಡಿ ಲೆಕ್ಕಿಗರ ಬಳಿ ಹೋಗಿ,ಅವರು ನಿಮಗಿಂತಲೂ ವೇಗವಾಗಿ ಹಣವನ್ನು ಲೆಕ್ಕಹಾಕುತ್ತಾರೆ "ಎಂದು ಆರ್ ಬಿ ಐಗೆ ವ್ಯಂಗ್ಯವಾಡಿದರು.


ಸದ್ಯದ ದೇಶದ ಆರ್ಥಿಕ ಹಿಂಜರಿತವನ್ನು ಕಾಂಗ್ರೆಸ್ ಪಕ್ಷವು ಮಾತ್ರ ಪಾರು ಮಾಡಬಲ್ಲದು, ನಾನು ಇದನ್ನು  ದಾಷ್ಟ್ಯದಿಂದ ಈ ಮಾತುಗಳನ್ನು ಹೇಳುತ್ತಿಲ್ಲ, ಬದಲಾಗಿ ಹಿಂದೆ ಕೂಡ ನಾವು ಇದನ್ನು ಸಾಧಿಸಿದ್ದೆವು ಮತ್ತು ಮುಂದೆಯೂ ಸಾಧಿಸಬಲ್ಲೆವು ಎಂದು ತಿಳಿಸಿದರು. ಮನಮೋಹನ್ ಸಿಂಗ್ ರು ತಮ್ಮ ಅವಧಿಯಲ್ಲಿ 14 ಕೋಟಿಗೂ ಅಧಿಕ ಜನರನ್ನು ಬಡತನ ಮುಕ್ತಗೊಳಿಸಿದ್ದರು.ಆದರೆ ಬಿಜೆಪಿಯು ಜನರನ್ನು ಬಡತನದ ಕೂಪಕ್ಕೆ ತಳ್ಳುತ್ತಿದೆ ಎಂದು ತಿಳಿಸಿದರು.