Goa Politics : ಗೋವಾದಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದೆ, ಅದರ ಎಂಟು ಶಾಸಕರು ಇಂದು ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡಿದ್ದಾರೆ. ದಿಗಂಬರ ಕಾಮತ್, ಮೈಕೆಲ್ ಲೋಬೋ, ದೇಲಿಲಾ ಲೋಬೋ, ರಾಜೇಶ್ ಫಾಲ್ದೇಸಾಯಿ, ಕೇದಾರ್ ನಾಯ್ಕ್, ಸಂಕಲ್ಪ್ ಅಮೋನ್ಕರ್, ಅಲೆಕ್ಸೋ ಸಿಕ್ವೇರಾ ಮತ್ತು ರುಡಾಲ್ಫ್ ಫೆರ್ನಾಂಡಿಸ್ ಕೇಸರಿ ಪಾಳಯಕ್ಕೆ ಸೇರ್ಪಡೆಗೊಂಡ ಎಂಟು ಕಾಂಗ್ರೆಸ್ ಶಾಸಕರು.


COMMERCIAL BREAK
SCROLL TO CONTINUE READING

ಈ 8 ಕಾಂಗ್ರೆಸ್ ಶಾಸಕರು ಇಂದು ಗೋವಾ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಿದ್ದಾರೆ.


ಇದನ್ನೂ ಓದಿ : Jammu and Kashmir: ಆಳವಾದ ಕಮರಿಗೆ ಬಸ್ ಬಿದ್ದು 9 ಮಂದಿ ಸ್ಥಳದಲ್ಲೇ ದುರ್ಮರಣ!


ಈ ಬಗ್ಗೆ  ಪಕ್ಷ ಬದಲಾಯಿಸಿದ ಮೈಕೆಲ್ ಲೋಬೋ ಮಾತನಾಡಿ "ಪ್ರಧಾನಿ (ನರೇಂದ್ರ) ಮೋದಿ ಮತ್ತು ಸಿಎಂ ಪ್ರಮೋದ್ ಸಾವಂತ್ ಅವರ ಕೈಗಳನ್ನು ಬಲಪಡಿಸಲು ನಾವು ಬಿಜೆಪಿಗೆ ಸೇರಿದ್ದೇವೆ, ಕಾಂಗ್ರೆಸ್ ಛೋಡೋ, ಬಿಜೆಪಿ ಕೋ ಜೋಡೋ" ಎಂದು ಹೇಳಿದ್ದಾರೆ.


ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ಈಗ ಮೂವರು ಶಾಸಕರ ಬಲವನ್ನು ಹೊಂದಿದ್ದರೆ, ಬಿಜೆಪಿಯ ಬಲ 20 ರಿಂದ 28 ಕ್ಕೆ ಏರಿದೆ.ಈ ಹಿಂದೆ 2019 ರಲ್ಲಿ 10 ಕಾಂಗ್ರೆಸ್ ಶಾಸಕರು ಕೇಸರಿ ಪಾಳಯಕ್ಕೆ ಸೇರ್ಪಡೆಗೊಂಡಿದ್ದರು.


ಇದನ್ನೂ ಓದಿ : Good News: ಅಗತ್ಯ ಔಷಧಗಳ ದರ ಇಳಿಕೆ ಮಾಡಿದ ಕೇಂದ್ರ ಸರ್ಕಾರ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.