Goa: ಪಣಜಿ: ಗೋವಾ ಕೇವಲ "ಶ್ರೀಮಂತ ಪ್ರವಾಸಿಗರನ್ನು" ಬಯಸುತ್ತದೆ ಹೊರತು ಕಡಿಮೆ ಬಜೆಟ್ ನಲ್ಲಿ ಕರಾವಳಿ ರಾಜ್ಯಕ್ಕೆ ಭೇಟಿ ನೀಡುವ ಪ್ರಯಾಣಿಕರನ್ನಲ್ಲ ಎಂದು ಗೋವಾ ಪ್ರವಾಸೋದ್ಯಮ ಸಚಿವ ಮನೋಹರ್ ಅಜಗಾಂವ್ಕರ್ ಹೇಳಿದ್ದಾರೆ. ಅದೇ ಸಮಯದಲ್ಲಿ,  'ಮಾದಕ ದ್ರವ್ಯ ಸೇವಿಸುವ ಪ್ರವಾಸಿಗರು ನಮಗೆ ಬೇಡ, ಗೋವವನ್ನು ನಾಶ ಮಾಡುವ ಪ್ರವಾಸಿಗರು ನಮಗೆ ಬೇಡ ಎಂದವರು ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಮಾದಕ ದ್ರವ್ಯ ಸೇವನೆಯನ್ನು ಸಹಿಸುವುದಿಲ್ಲ:
ಗೋವಾಗೆ ಬರುವ ಪ್ರವಾಸಿಗಳು (Goa Tourism) ಬಸ್‌ಗಳಲ್ಲಿ ಅಡುಗೆ ಮಾಡುವುದು ನಮಗೆ ಬೇಡ. ನಾವು ಶ್ರೀಮಂತ ಪ್ರವಾಸಿಗರನ್ನು ಬಯಸುತ್ತೇವೆ. ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಗೋವಾವನ್ನು ಗೌರವಿಸುವ ಪ್ರವಾಸಿಗರನ್ನು ನಾವು ಬಯಸುತ್ತೇವೆ. ನಾವು ಪ್ರವಾಸಿಗರನ್ನು ಸ್ವಾಗತಿಸುತ್ತೇವೆ, ಆದರೆ ಅವರು ಗೋವಾವನ್ನು ಸಂಸ್ಕೃತಿ ಮತ್ತು ಸಂಪ್ರದಾಯದ ಮಿತಿಯಲ್ಲಿ ಆನಂದಿಸಬೇಕು. ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರು ಡ್ರಗ್ಸ್ ಸೇವಿಸುವುದನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಮನೋಹರ್ ಅಜಗಾಂವ್ಕರ್ ಹೇಳಿದ್ದಾರೆ.


ಇದನ್ನೂ ಓದಿ- ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ: 17ಕ್ಕೂ ಹೆಚ್ಚು ಸಾವು, ಹಲವರು ನಾಪತ್ತೆ


ಡ್ರಗ್ಸ್ ವಿರುದ್ಧ ಗೋವಾ ಸರ್ಕಾರ:
ನಾವು ಮಾದಕ ದ್ರವ್ಯಗಳ (Drugs) ವಿರುದ್ಧ ಮತ್ತು ನಮ್ಮ ಸಿಎಂ ಕೂಡ ಇದಕ್ಕೆ ವಿರುದ್ಧವಾಗಿದ್ದಾರೆ. ವಿದೇಶದಿಂದ ಬರುವ ಪ್ರವಾಸಿಗರಿಗೆ ಐದು ಲಕ್ಷ ವೀಸಾಗಳನ್ನು ಉಚಿತವಾಗಿ ನೀಡುವ ಪ್ರಧಾನಿಯವರ ನಿರ್ಧಾರದಿಂದ ಗೋವಾ ಲಾಭ ಪಡೆಯಲಿದೆ ಎಂದು ಪ್ರವಾಸೋದ್ಯಮ ಸಚಿವ ಮನೋಹರ್ ಅಜಗಾಂವ್ಕರ್ ಹೇಳಿದ್ದಾರೆ.


ಇದನ್ನೂ ಓದಿ- UP Assembly Elections 2022: ಈ ಬಾರಿ ಶೇ.40ರಷ್ಟು ಮಹಿಳೆಯರಿಗೆ ಟಿಕೆಟ್ ನೀಡುವುದಾಗಿ ಘೋಷಣೆ ಮಾಡಿದ ಪ್ರಿಯಾಂಕಾ ಗಾಂಧಿ


ಪ್ರವಾಸೋದ್ಯಮ ತೆರೆಯಲಿದೆ, ಚಾರ್ಟರ್ ವಿಮಾನಗಳು ಈಗ ಆರಂಭವಾಗಲಿವೆ. ಕಾಟೇಜ್ ಮತ್ತು ಹೋಟೆಲ್ ಪರವಾನಗಿಗೆ ಸಂಬಂಧಿಸಿದ 50 ಪ್ರತಿಶತ ಶುಲ್ಕವನ್ನು ಈಗಾಗಲೇ ಮನ್ನಾ ಮಾಡಲಾಗಿದೆ. ಗಮನಾರ್ಹವಾಗಿ, ಗೋವಾವನ್ನು ದೇಶದ ಪ್ರಮುಖ ಬೀಚ್ ಮತ್ತು ನೈಟ್ ಲೈಫ್ ಪ್ರವಾಸಿ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಸಾಂಕ್ರಾಮಿಕ ರೋಗದ ಮೊದಲು, ದೇಶೀಯ ಮತ್ತು ಅಂತರರಾಷ್ಟ್ರೀಯ ಸುಮಾರು 8 ಮಿಲಿಯನ್ ಪ್ರವಾಸಿಗರು ಗೋವಾಕ್ಕೆ ಭೇಟಿ ನೀಡಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ