ನವದೆಹಲಿ: 120 ಜನರೊಂದಿಗೆ ಸಾಗುತ್ತಿದ್ದ ಗೋಏರ್ ವಿಮಾನವು ಗುರುವಾರದಂದು ತಾಂತ್ರಿಕ ದೋಷದಿಂದಾಗಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.


COMMERCIAL BREAK
SCROLL TO CONTINUE READING

ಗೋಏರ್ ವಿಮಾನ ಜಿ 8 -102 ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2: 20 ಕ್ಕೆ ದೆಹಲಿಗೆ ಹೊರಟಿತ್ತು. ಆದರೆ ಟೇಕಾಫ್ ಆದ ಕೂಡಲೇ ವಿಮಾನದಲ್ಲಿ ಹೊಗೆ ಕಂಡು ಬಂದಿರುವುದನ್ನು ಪೈಲೆಟ್ ಗಮನಿಸಿದ್ದಾನೆ. ನಂತರ ಅವರು  ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಗೆ ಸಂಪರ್ಕಿಸಿ ಮಧ್ಯಾಹ್ನ 2: 30 ರ ಸುಮಾರಿಗೆ ತುರ್ತು ಮಾಡಿದ್ದಾರೆ ಎನ್ನಲಾಗಿದೆ. ಈಗ ವಿಮಾನದಲ್ಲಿದ್ದ ಎಲ್ಲಾ 120 ಜನರು ಸುರಕ್ಷಿತರಾಗಿದ್ದಾರೆ.


ಈ ವರ್ಷದ ಜೂನ್‌ನಲ್ಲಿ ಗೋಯಿರ್ ವಿಮಾನ ಜಿ 8 586 ಪಾಟ್ನಾದಿಂದ ಮುಂಬೈಗೆ ಹೊರಟಾಗ ತಾಂತ್ರಿಕ ದೋಷದಿಂದಾಗಿ ಔರಂಗಾಬಾದ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು.ಫೆಬ್ರವರಿಯಲ್ಲಿ ಕೋಲ್ಕತ್ತಾದ ಮತ್ತೊಂದು ಗೋಏರ್ ವಿಮಾನವು ತಾಂತ್ರಿಕ ದೋಷ ಕಂಡು ಬಂದ ನಂತರ ಅಹಮದಾಬಾದ್ ಗೆ ಹಿಂತಿರುಗಬೇಕಾಯಿತು. ವಿಮಾನದಲ್ಲಿ 185 ಪ್ರಯಾಣಿಕರನ್ನು ಹೊಂದಿದ್ದ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ತುರ್ತು ಭೂಸ್ಪರ್ಶ ಮಾಡಿತ್ತು.