ತೆಲಂಗಾಣದ ಬೀಬಿನಗರ ಬಳಿ ಹಳಿತಪ್ಪಿದ ಗೋದಾವರಿ ಎಕ್ಸ್‌ಪ್ರೆಸ್ ರೈಲು
ದಕ್ಷಿಣ ಮಧ್ಯ ರೈಲ್ವೆ ಪ್ರಕಾರ ಗೋದಾವರಿ ಎಕ್ಸ್‌ಪ್ರೆಸ್‌ನ ಕೋಚ್‌ಗಳು ಹಳಿತಪ್ಪಿದ ಕಾರಣ ಒಟ್ಟು 19 ರೈಲುಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ರದ್ದುಗೊಳಿಸಲಾಗಿದೆ.
ತೆಲಂಗಾಣ: ತೆಲಂಗಾಣದ ಬೀಬಿನಗರದಿಂದ ಘಟ್‌ಕೇಸರ್ ನಡುವೆ ಗೋದಾವರಿ ಎಕ್ಸ್‌ಪ್ರೆಸ್ ರೈಲಿನ ಆರು ಬೋಗಿಗಳು ಹಳಿತಪ್ಪಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಬುಧವಾರ ಬೆಳಗ್ಗೆ ರೈಲು ಹಳಿ ತಪ್ಪಿದ ತಕ್ಷಣ ರೈಲಿನಲ್ಲಿದ್ದ ಪ್ರಯಾಣಿಕರ ರೋದನ ಮುಗಿಲು ಮುಟ್ಟಿತ್ತು. ಎಲ್ಲರೂ ಭಯಭೀತರಾಗಿದ್ದರು, ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ವಿಶಾಖಪಟ್ಟಣಂ-ಸಿಕಂದರಾಬಾದ್ ಗೋದಾವರಿ ಎಕ್ಸ್‌ಪ್ರೆಸ್‌ನ ಆರು ಕೋಚ್‌ಗಳು ಹಳಿ ತಪ್ಪಿದ್ದು, ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿ, ಆಸ್ತಿ-ಪಾಸ್ತಿ ನಷ್ಟದ ಸುದ್ದಿ ಇಲ್ಲದಿರುವುದು ಹೆಮ್ಮೆಯ ಸಂಗತಿ ಎಂದು ದಕ್ಷಿಣ-ಮಧ್ಯ ರೈಲ್ವೆಯ ಪಿಆರ್‌ಒ ಮಾಹಿತಿ ನೀಡಿದ್ದಾರೆ.
ಕೊಯಮತ್ತೂರು ಕಾರ್ ಸ್ಫೋಟ ಪ್ರಕರಣ : ತಮಿಳುನಾಡು, ಕರ್ನಾಟಕ, ಕೇರಳದ 60 ಸ್ಥಳಗಳಲ್ಲಿ ಎನ್‌ಐಎ ದಾಳಿ
19 ರೈಲುಗಳ ಸಂಚಾರ ಸಂಪೂರ್ಣ/ಭಾಗಶಃ ಸ್ಥಗಿತ:
ದಕ್ಷಿಣ ಮಧ್ಯ ರೈಲ್ವೆ ಪ್ರಕಾರ, ಗೋದಾವರಿ ಎಕ್ಸ್‌ಪ್ರೆಸ್‌ನ ಕೋಚ್‌ಗಳು ಹಳಿತಪ್ಪಿದ ಕಾರಣ ಒಟ್ಟು 19 ರೈಲುಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ರದ್ದುಗೊಳಿಸಲಾಗಿದೆ .
ರೈಲು ಸಂಖ್ಯೆ 12727 ವಿಶಾಖಪಟ್ಟಣಂ-ಸಿಕಂದರಾಬಾದ್ ಎಕ್ಸ್‌ಪ್ರೆಸ್‌ನ S1, S2, S3, S4, GS ಮತ್ತು SLR ಕೋಚ್‌ಗಳು ಹಳಿತಪ್ಪಿವೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬೋಗಿಗಳು ಹಳಿತಪ್ಪಿದ ನಂತರ, ಅವುಗಳನ್ನು ರೈಲಿನ ಉಳಿದ ಭಾಗದಿಂದ ಬೇರ್ಪಡಿಸಲಾಯಿತು ಮತ್ತು ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆಯಲಾಯಿತು ಎಂದವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ- ಪುಲ್ವಾಮಾ ದಾಳಿಗೆ ನಾಲ್ಕು ವರ್ಷಗಳು: ಆ ದುರ್ದಿನ ಏನು ನಡೆಯಿತು?
ವಿಶೇಷ ಸಹಾಯವಾಣಿ ಸಂಖ್ಯೆ:
ಈ ಅಪಘಾತದ ಬಗ್ಗೆ ದಕ್ಷಿಣ-ಮಧ್ಯ ರೈಲ್ವೆ ವಿಶೇಷ ಸಹಾಯವಾಣಿ ಸಂಖ್ಯೆಯನ್ನು ಸಹ ಬಿಡುಗಡೆ ಮಾಡಿದೆ. ನೀವು ಬಯಸಿದರೆ, ಈ ಸಹಾಯವಾಣಿ ಸಂಖ್ಯೆ - 040-27786666 ಅನ್ನು ಸಂಪರ್ಕಿಸುವ ಮೂಲಕ ನೀವು ಪ್ರಯಾಣಿಕರ ಬಗ್ಗೆ ಮಾಹಿತಿಯನ್ನು ಪಡೆಯಬಹುದು ಎಂದು ಹೇಳಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.