ಅಹ್ಮದಾಬಾದ್: 2002 ಫೆಬ್ರವರಿ 27ರಲ್ಲಿ ಗೋಧ್ರಾ ರೈಲು ನಿಲ್ದಾಣದಲ್ಲಿ ಸಬರಮತಿ ಎಕ್ಸ್ಪ್ರೆಸ್ನ್  ಎಸ್-6 ಕೋಚ್ ನಲ್ಲಿ ಅಗ್ನಿ ಅನಾಹುತ ಉಂಟಾಗಿತ್ತು.  ಈ ಕೋಚ್ ನಲ್ಲಿ ಒಟ್ಟು 59 ಜನರಿದ್ದರು, ಅದರಲ್ಲಿಯೂ ಹೆಚ್ಚಾಗಿ ಅಯೋಧ್ಯೆಯಿಂದ ಹಿಂದಿರುಗುವ ಮಂದಿ ಇದ್ದರು. ಗೋಧ್ರಾ ರೈಲು ನಿಲ್ದಾಣದಲ್ಲಿ ಕಿಡಿಗೇಡಿಗಳಿಂದ ಉಂಟಾಗಿದ್ದ ಈ ಹತ್ಯಾಕಾಂಡದ ಬಗ್ಗೆ ಎಸ್ಐಟಿ ವಿಶೇಷ ತನಿಖಾಧಿಕಾರಿಗಳ ತಂಡ ಆರೋಪಿಯನ್ನು ಬಂಧಿಸಿತ್ತು. ಇಂದು ಗುಜರಾತ್ ಹೈಕೋರ್ಟ್ ಈ ದಹನ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದೆ.  


COMMERCIAL BREAK
SCROLL TO CONTINUE READING

ಮಾರ್ಚ್ 1, 2011 ರಂದು ವಿಶೇಷ ನ್ಯಾಯಾಲಯ ಈ ಬಗ್ಗೆ ತೀರ್ಪು ನೀಡಿತ್ತು
ಈ ಪ್ರಕರಣದ ಬಗ್ಗೆ ಮಾರ್ಚ್ 1, 2011 ರಲ್ಲಿ ವಿಚಾರಣೆ ನಡೆಸಿದ್ದ ಎಸ್ಐಟಿ ವಿಶೇಷ ನ್ಯಾಯಾಲಯ 11 ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು ಮತ್ತು 20 ಮಂದಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿತ್ತು. 


ನಂತರ ರಾಜ್ಯ ಹೈಕೋರ್ಟ್ಗೆ ಹಲವಾರು ಮನವಿಗಳನ್ನು ಸಲ್ಲಿಸಲಾಗಿತ್ತು. ಈ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು 31 ಜನರನ್ನು ಕೊಲೆ, ಹತ್ಯೆ ಯತ್ನ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ನಿಂದಿಸಿ ತೀರ್ಪು ನೀಡಿತ್ತು. ಈ ಪ್ರಕರಣದ ಕುರಿತು ಇಂದು ಗುಜರಾತ್ ಹೈಕೋರ್ಟ್ನಲ್ಲಿ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.