ಕೊಂಡಗಾವ್: ಚತ್ತೀಸ್ಗಢದ ಕೊಂಡಾಗೋನ್ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಚಿನ್ನದ ಮತ್ತು ಬೆಳ್ಳಿಯ ನಾಣ್ಯಗಳಿದ್ದ ಮಡಕೆಯೊಂದು ಪತ್ತೆಯಾಗಿದೆ.


COMMERCIAL BREAK
SCROLL TO CONTINUE READING

ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಕೆಲಸಗಾರನೊಬ್ಬ ಭೂಮಿಯನ್ನು ಅಗೆಯುತ್ತಿದ್ದ ಸಂದರ್ಭದಲ್ಲಿ ಚಿನ್ನದ ನಾಣ್ಯಗಳಿರುವ ಮಡಕೆ ಪತ್ತೆಯಾಗಿದ್ದು, 12 ನೇ ಶತಮಾನಕ್ಕೆ ಸೇರಿದ ಚಿನ್ನದ ನಾಣ್ಯಲಾಗಿವೆ ಎನ್ನಲಾಗಿದೆ.


ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ನೀಲಕಂಠ್ ಟೆಕಮ್, ಕೊರ್ಕೋಟಿ ಮತ್ತು ಬೆಡಮ ಜಿಲ್ಲೆಗಳ ನಡುವೆ ನಡೆಯುತ್ತಿದ್ದ ರಸ್ತೆ ಕಾಮಗಾರಿ ಸಂದರ್ಭದಲ್ಲಿ, ಭೂಮಿಯಲ್ಲಿ ಹೂತಿದ್ದ ಮಡಕೆಯಲ್ಲಿ 57 ಚಿನ್ನದ ನಾಣ್ಯಗಳು, ಒಂದು ಬೆಳ್ಳಿ ನಾಣ್ಯ ಮತ್ತು ಒಂದು ಕಿವಿಯೋಲೆ ಪತ್ತೆಯಾಗಿದೆ. ಅವುಗಳ ರಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು. ನಾಣ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪುರಾತತ್ತ್ವ ಇಲಾಖೆಗೆ ಪರಿಶೀಲನೆಗೆ  ಕಳುಹಿಸಲಾಗುವುದು ಎಂದಿದ್ದಾರೆ.