ನವದೆಹಲಿ: ಪ್ರಸ್ತುತ ಚಿನ್ನ ತನ್ನ ನಿರ್ಧಾರಿತ ಮಟ್ಟಕ್ಕಿಂತ ಶೇ.10 ರಷ್ಟು ಕಡಿಮೆ ಮಟ್ಟಕ್ಕೆ ವ್ಯವಹಾರ ನಡೆಸುತ್ತಿದೆ. ಆದರೆ, ದೀಪಾವಳಿಯ ಸಮಯದಲ್ಲಿ ಚಿನ್ನದ ಬೆಲೆ (Gold Price) ರೂ.60 ಸಾವಿರ ದಾಟಲಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ, ಒಂದು ವೇಳೆ ನೀವೂ ಕೂಡ ಪ್ರಸ್ತುತ ಚಿನ್ನದಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸಮಯವು ಉತ್ತಮವಾಗಿದೆ. ಸಾಮಾನ್ಯವಾಗಿ ಚಿನ್ನದ ಮೇಲೆ ಹೂಡಿಕೆ  ಹಲವು ವಿಧಗಳಲ್ಲಿ ಮಾಡಬಹುದು. ಇತ್ತೀಚಿನ ದಿನಗಳಲ್ಲಿ, ಸರ್ಕಾರವು ನಿಯತಕಾಲಿಕವಾಗಿ ಚಿನ್ನದಲ್ಲಿ ಹೂಡಿಕೆ ಮಾಡಲು ಸಾವರೆನ್ ಚಿನ್ನದ ಬಾಂಡ್ ಯೋಜನೆಯನ್ನು ಸಹ ತರುತ್ತದೆ. ಚಿನ್ನದ ಹೂಡಿಕೆಗೆ ಮೊದಲು ನಾವು ನಿಮಗೆ ಅನೇಕ ರೀತಿಯ ಮಾಹಿತಿಯನ್ನು ನೀಡುತ್ತಿದ್ದೇವೆ, ಅದು ನಿಮಗೆ ಹೂಡಿಕೆಯ ಮೊದಲು ಸಹಾಯಕಾರಿಯಾಗಲಿದೆ.


COMMERCIAL BREAK
SCROLL TO CONTINUE READING

ಚಿನ್ನದಲ್ಲಿ ಹೂಡಿಕೆಗೆ ಇಲ್ಲಿವೆ ಆಯ್ಕೆಗಳು
ಸಾಮಾನ್ಯವಾಗಿ ಚಿನ್ನದಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರ ಬಳಿ ಹಲವಾರು ಆಯ್ಕೆಗಳಿವೆ. ಇವುಗಳಲ್ಲಿ ಪೇಪರ್ ಗೋಲ್ಡ್, ಗೋಲ್ಡ್ ETF, ಸಾವೆರಿನ್ ಗೋಲ್ಡ್ ಬಾಂಡ್, ಗೋಲ್ಡ್ ಮ್ಯೂಚವಲ್ ಫಂಡ್ ಹಾಗೂ ಡಿಜಿಟಲ್ ಗೋಲ್ಡ್. ಈ ಎಲ್ಲ ಆಯ್ಕೆಗಳನ್ನು ಕೊರೊನಾ ಕಾಲದಲ್ಲಿಉತ್ತಮ ಆಯ್ಕೆಗಳೆಂದು ಹೇಳಲಾಗುತ್ತಿದೆ. ಏಕೆಂದರೆ ಈ ಆಯ್ಕೆಗಳ ಮೂಲಕ ಚಿನ್ನದ ಖರೀದಿ ಹಾಗೂ ಮಾರಾಟ ಸುಲಭವಾಗಿದೆ. ಇನ್ನೊಂದೆಡೆ ಚಿನ್ನ ಕೂಡ ಒಂದು ವೇಳೆ ಶುದ್ಧವಾಗಿದ್ದರೆ, ಆದರ ಸುರಕ್ಷತೆಯ ಪ್ರಶ್ನೆಯೂ ಕೂಡ ಉದ್ಭವಿಸುವುದಿಲ್ಲ.


ಇದನ್ನು ಅಸೆಟ್ ಆಗಿ ಪರಿವರ್ತಿಸಿ
ಚಿನ್ನವನ್ನು ಒಂದು ಆಭರಣವನ್ನಾಗಿ ಖರೀದಿಸದೇ ಇದನ್ನು ಒಂದು ಆರ್ಥಿಕ ಆಸ್ತಿಯಾಗಿ ಖರೀದಿಸಬಹುದು. ಆಭರಣ ಖರೀದಿಸಿದರೆ, ಆಭರಣದ ಸುರಕ್ಷತತೆಯ ಪ್ರಶ್ನೆ ಎದುರಾಗುತ್ತದೆ. ಜೊತೆಗೆ ಆಭರಣದಲ್ಲಿ ಬಳಸಲಾಗಿರುವ ಚಿನ್ನ ಎಷ್ಟು ಶುದ್ಧವಾಗಿದೆ ಎಂಬುದು ಕೂಡ ಒಂದು ರಿಸ್ಕ್ ಆಗಿರುತ್ತದೆ. ಇಂತಹುದರಲ್ಲಿ ಡಿಜಿಟಲ್ ಚಿನ್ನ ಖರೀದಿಸುವುದು ಒಂದು ಉತ್ತಮ ಆಯ್ಕೆ ಎಂದೇ ಹೇಳಬಹುದಾಗಿದೆ.


ಗೋಲ್ಡ್ ಮ್ಯೂಚವಲ್ ಫಂಡ್ 
ಇಂದಿನ ಕಾಲದಲ್ಲಿ ಬಹುತೇಕ ಜನರಿಗೆ ಮ್ಯೂಚವಲ್ ಫಂಡ್ ಕುರಿತು ಮಾಹಿತಿ ಇದೆ. ನೀವು ಮಾರುಕಟ್ಟೆಯಲ್ಲಿ ಗೋಲ್ಡ್ ಮ್ಯೂಚವಲ್ ಫಂಡ್ ಕೂಡ ಖರೀದಿಸಬಹುದಾಗಿದೆ. ಇದರಲ್ಲಿನ ಹೂಡಿಕೆ ಚಿನ್ನದ ಮೇಲಿನ ಹೂಡಿಕೆಯಾಗಿದೆ. ಇದರಲ್ಲಿಯೂ ಕೂಡ ಫಂಡ್ ಮ್ಯಾನೇಜರ್ ಹೂಡಿಕೆದಾರರ ಹೂಡಿಕೆಯ ಕುರಿತು ಗಮನಹರಿಸುತ್ತಾರೆ. ಮಾರುಕಟ್ಟೆಯಲ್ಲಿನ ಪರಿಸ್ಥಿತಿ ಫಂಡ್ ನ ರಿಟರ್ನ್ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ಹೂಡಿಕೆದಾರರು ತಮ್ಮ ರಿಸ್ಕ್ ಕೆಪ್ಯಾಸಿಟಿ ಆಧರಿಸಿ ಹೂಡಿಕೆ ಮಾಡುವುದು ಆವಶ್ಯಕವಾಗಿದೆ.


ಹೂಡಿಕೆಯ ಮೇಲೆ ನೀವು ಕ್ಯಾಪಿಟಲ್ ಗೆನ್ ಟ್ಯಾಕ್ಸ್ ನೀಡಬೇಕು
ಒಂದು ವೇಳೆ ನೀವು ಚಿನ್ನವನ್ನು ಖರೀದಿಸಿ ಅದನ್ನು ಮೂರು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಮಾರಾಟ ಮಾಡಿದರೆ, ದರ ಮೇಲೆ ನೀವು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೆನ್ ಟ್ಯಾಕ್ಸ್ ಪಾವತಿಸಬೇಕು. ಇದು ನಿಮ್ಮ ಒಟ್ಟು ಆದಾಯಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಮೂರು ವರ್ಷಗಳ ಬಳಿಕ ಒಂದು ವೇಳೆ ನೀವು ನಿಮ್ಮ ಚಿನ್ನವನ್ನು ಮಾರಾಟ ಮಾಡಿದರೆ, ನೀವು ಲಾಂಗ್ ಟರ್ಮ್ ಕ್ಯಾಪಿಟಲ್ ಗೆನ್ ಟ್ಯಾಕ್ಸ್ ಪಾವತಿಸಬೇಕು. ಇಲ್ಲಿ ನೀವು LTCG 20%+ಸರ್ಚಾರ್ಚ್ ಪಾವತಿಸಬೇಕು. ಇದು ಶೇ.4ರಷ್ಟು ಸೆಸ್ ಇಂಡೆಕ್ಸನ್ ಜೊತೆಗೆ ಸಂಭವವಿದೆ. ಫಿಸಿಕಲ್ ಗೋಲ್ಡ್ ಮೇಲೆ ನೀವು GST ಪಾವತಿಸಬೇಕು.