ನವದೆಹಲಿ: ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಪ್ರಕಾರ, ಚಿನ್ನದ ಬೆಲೆಗಳು ಬುಧವಾರ ದೆಹಲಿಯಲ್ಲಿ 10 ಗ್ರಾಂಗೆ 332 ರೂ.ನಿಂದ 39,299 ರೂ.ಗೆ ಏರಿದೆ. ಈ ಹಿಂದಿನ ವಹಿವಾಟಿನಲ್ಲಿ, ಚಿನ್ನ 10 ಗ್ರಾಂಗೆ 38,967 ರೂ.ಇತ್ತು.


COMMERCIAL BREAK
SCROLL TO CONTINUE READING

"ದೆಹಲಿಯ 24 ಕ್ಯಾರೆಟ್ ಗಳಿಗೆ ಚಿನ್ನವು 332 ರೂ.ಗಳಷ್ಟು ಏರಿಕೆಯಾಗಿದೆ, ಇದು ಜಾಗತಿಕ ಚಿನ್ನದ ಬೆಲೆಯಲ್ಲಿ ರಾತ್ರಿಯ ಖರೀದಿಯನ್ನು ಪ್ರತಿಬಿಂಬಿಸುತ್ತದೆ.ರೂಪಾಯಿ ಡಾಲರ್ ಎದುರು 3 ಪೈಸೆ ದುರ್ಬಲವಾಗಿ ವಹಿವಾಟು ನಡೆಸುತ್ತಿದೆ, ಇದು ದಿನದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ" ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದರು.


ರೂಪಾಯಿ ದುರ್ಬಲ ನೋಟಿನಲ್ಲಿ ತೆರೆದು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು 12 ಪೈಸೆ ಕುಸಿದು 71.78 ಕ್ಕೆ ತಲುಪಿದೆ. ಬೆಳ್ಳಿಯ ಬೆಲೆಯು ಕೆ.ಜಿ.ಗೆ 676 ರೂ.ಗೆ 46,672 ರೂ.ಗೆ ಏರಿದೆ. ಜಾಗತಿಕ ಮಾರುಕಟ್ಟೆಯಲ್ಲಿ, ಚಿನ್ನವು ಔನ್ಸ್‌ಗೆ 1,483 ಡಾಲರ್‌ಗೆ ಅಧಿಕ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಸಹ ಔನ್ಸ್‌ಗೆ 17.27 ಡಾಲರ್‌ಗೆ ತಲುಪಿದೆ.


'2020 ರ ನವೆಂಬರ್ ಚುನಾವಣೆಯ ನಂತರ ಚೀನಾದೊಂದಿಗಿನ ವ್ಯಾಪಾರ ಒಪ್ಪಂದವು ನಡೆಯಬಹುದು ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ನಂತರ ಚಿನ್ನದ ಬೆಲೆಗಳಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.