Gold Rate Today:ಐದು ತಿಂಗಳಲ್ಲಿ ಇದೆ ಮೊದಲ ಬಾರಿಗೆ ರೂ.4000 ರಷ್ಟು ಇಳಿಕೆಯಾದ ಚಿನ್ನದ ಬೆಲೆ
ಕಳೆದ ವಾರ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ವಾರ ಚಿನ್ನ 10 ಗ್ರಾಂಗೆ 2600 ರೂ. ರಷ್ಟು ಇಳಿಕೆಯಾಗಿತ್ತು.
ನವದೆಹಲಿ: ಕೊರೊನಾ ವ್ಯಾಕಿನ್ ಬರುವಿಕೆಯ ನಿರೀಕ್ಷೆ ಹಾಗೂ ಚಿನ್ನ-ಬೆಳ್ಳಿಯ ಬೆಲೆ ಏರಿಕೆಯ ವೇಗಕ್ಕೆ ಬ್ರೇಕ್ ಬಿದ್ದಿದೆ. ವ್ಯಾಕ್ಸಿನ್ ಬರುವಿಕೆಗೆ ಕುರಿತು ಪ್ರಸ್ತುತ ಕೇವಲ ಚರ್ಚೆಗಳು ಮಾತ್ರ ನಡೆಯುತ್ತಿವೆ. ಇನ್ನೊಂದೆಡೆ ಹೂಡಿಕೆದಾರರ ಮೂಡ ಕೂಡ ಬದಲಾಗಿದೆ. ಕಳೆದ ಕೆಲ ವಾರಗಳಿಂದ ಗಗನ ಮುಖಿಯಾಗಿದ್ದ ಚಿನ್ನ ಮತ್ತು ಬೆಳ್ಳಿಯ ಬೆಳೆಗಳು ಇದೀಗ ಇಳಿಕೆಯತ್ತ ಮುಖಮಾಡಿವೆ. ಸೋಮವಾರ ಕೂಡ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಸ್ಥಳೀಯ ಬುಲಿಯನ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ರೂ. 4000 ರಷ್ಟು ಇಳಿಕೆಯಾಗಿದೆ. ಆಗಸ್ಟ್ 7ರಂದು ಚಿನ್ನದ ಬೆಲೆಯ ನೂತನ ಏರಿಕೆಯ ಮಟ್ಟ ದಾಖಲಾಗಿತ್ತು. ಅದಾದ ಬಳಿಕ ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಲೇ ಇದೆ.
ಕಳೆದ ಶುಕ್ರವಾರ ಚಿನ್ನದ ಬೆಲೆ ಪ್ರತಿ 10ಗ್ರಾಂ.ಗೆ ರೂ. 52,227ಕ್ಕೆ ತಲುಪಿತ್ತು. ಇಂದು ಆರಂಭಿಕ ವಹಿವಾಟಿನಲ್ಲಿ ಮತ್ತೆ ಚಿನ್ನದ ಬೆಲೆ ರೂ.76 ರಷ್ಟು ಇಳಿಕೆಯಾಗಿ ರೂ. 52,151 ರಷ್ಟಕ್ಕೆ ತನ್ನ ವಹಿವಾಟು ಆರಂಭಿಸಿತ್ತು. ಮಾರುಕಟ್ಟೆ ತೆರೆದ ಕೆಲವೇ ನಿಮಿಷಗಳಲ್ಲಿ ಚಿನ್ನದ ಬೆಲೆಯಲ್ಲಿನ ಇಳಿಕೆ ಇನ್ನಷ್ಟು ಆಳಬಾಗಿದೆ. MCX ಎಕ್ಸ್ಚೇಂಜ್ ನಲ್ಲಿ ಅಕ್ಟೋಬರ್ 5, 2020ಕ್ಕೆ ಚಿನ್ನದ ವಾಯದಾ ಬೆಲೆ 97 ರೂ.ಇಳಿಕೆಯೊಂದಿಗೆ ರೂ.52,130 ಪ್ರತಿ 10 ಗ್ರಾಂ.ನಲ್ಲಿ ಟ್ರೆಂಡ್ ಮಾಡುತ್ತಿತ್ತು. MCX ನಲ್ಲಿ ಸೆಪ್ಟೆಂಬರ್ 4, 2020ಕ್ಕೆ ಬೆಳ್ಳಿಯ ವಾಯದಾ ಬೆಲೆ 9 ಗಂಟೆಗೆ 111 ರೂ. ಇಳಿಕೆಯೊಂದಿಗೆ ರೂ.67,060 ಪ್ರತಿ ಕೆ.ಜಿ ಟ್ರೆಂಡ್ ಮಾಡುತ್ತಿತ್ತು.
ಐದು ತಿಂಗಳಲ್ಲಿ ಎಲ್ಲಕ್ಕಿಂತ ಅತಿ ಹೆಚ್ಚಿನ ವಾರದ ಇಳಿಕೆ
ಚಿನ್ನದ ಬೆಲೆಯ ಪಾಲಿಗೆ ಕಳೆದ ವಾರ ಕಳೆದ ಐದು ತಿಂಗಳಿಗೆ ಹೋಲಿಸಿದರೆ ಅತ್ಯಂತ ಕನಿಷ್ಠ ಮಟ್ಟ ಎಂದು ಹೇಳಲಾಗಿದೆ. ಚೀನಾ ಮತ್ತು ಅಮೇರಿಕಾ ನಡುವಿನ ವ್ಯಾಪಾರ ಸಂಬಂಧಗಳ ಸಂಭವನೀಯ ಸುಧಾರಣೆಗಳ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಸ್ಪಾಟ್ ಗೋಲ್ಡ್ ಶೇ.0.5 ರಷ್ಟು ಕುಸಿತ ಕಂಡು ಪ್ರತಿ ಔನ್ಸ್ ಗೆ 1,934.91 ಡಾಲರ್ ಗೆ ತಲುಪಿತ್ತು. ಕಳೆದ ವಾರ ಚಿನ್ನ ಶೇ.4.5 ರಷ್ಟು ಇಳಿಕೆ ಕಂಡುಬಂದಿತ್ತು ಇದು ಮಾರ್ಚ್ ತಿಂಗಳ ಬಳಲಿಕ ಅತ್ಯಂತ ಕನಿಷ್ಠ ಮಟ್ಟದ ಇಳಿಕೆಯಾಗಿದೆ.
ಕಳೆದ ವಾರ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ವಾರ ಚಿನ್ನ 10 ಗ್ರಾಂಗೆ 2600 ರೂ. ರಷ್ಟು ಇಳಿಕೆಯಾಗಿತ್ತು. ಆಗಸ್ಟ್ 7ರಂದು ಚಿನ್ನದ ಬೆಲೆಯ ನೂತನ ಏರಿಕೆಯ ಮಟ್ಟ ದಾಖಲಾಗಿತ್ತು. ಅದಾದ ಬಳಿಕ ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಲೇ ಇದೆ. ಅಂದಿನಿಂದ ಇಂದಿನವರೆಗೆ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ರೂ.4000 ರಷ್ಟು ಇಳಿಕೆಯಾಗಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯೂ ಕೂಡ ಪ್ರತಿ ಕೆ.ಜಿ.ಗೆ ಶೇ.5.5ರಷ್ಟು ಇಳಿಕೆಯಾಗಿದೆ. ಅಮೆರಿಕಾದ ಸರ್ಕಾರಿ ಬಾಂಡ್ ನ ಯೀಲ್ಡಗಳಲ್ಲಿಯೂ ಕೂಡ ಏರಿಕೆಯಾದ ಕಾರಣ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ವರ್ತಿಸಲಾಗುತ್ತಿದೆ.