ನವದೆಹಲಿ: ಚಿನ್ನದ ಬೆಲೆ ಏರಿಕೆಯ ಬೆಂಕಿ ಈಗ ನಿಧಾನವಾಗಿ ಕಡಿಮೆಯಾಗುತ್ತಿದೆ. ಗುರುವಾರ ಬೆಳಿಗ್ಗೆಯಿಂದ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಕ್ಷೀಣಿಸಲು ಪ್ರಾರಂಭಿಸಿದವು. ಇದರ ಬೆನ್ನಲ್ಲೇ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ 1,160 ರೂ. ಇಳಿದು 41,170 ರೂ.ಗೆ ತಲುಪಿದೆ. ಅದೇ ಸಮಯದಲ್ಲಿ, ಬೆಳ್ಳಿಯ ಬೆಲೆಗಳೂ ಕೂಡ ಕುಸಿತ ಕಂಡಿದೆ. ಬೆಳ್ಳಿ 1,735 ರೂ. ಕಡಿಮೆಯಾಗಿ ಕೆಜಿಗೆ 47,825 ರೂ. ಆಗಿದೆ.


COMMERCIAL BREAK
SCROLL TO CONTINUE READING

ಚಿನ್ನದ ಬೆಲೆ ಇನ್ನೂ ಕಡಿಮೆಯಾಗುವ ಸಾಧ್ಯತೆ:
ಗುರುವಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೃದುವಾದ ಮಾರ್ಗವನ್ನು ತೆಗೆದುಕೊಂಡು ಶಾಂತಿಗೆ ಕರೆ ನೀಡಿದರು. ಇದರ ನಂತರ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿಯಲು ಪ್ರಾರಂಭಿಸಿತು. ದೇಶೀಯ ಮಾರುಕಟ್ಟೆಯಲ್ಲಿ, MCX  ನಲ್ಲಿ ಚಿನ್ನದ ಬೆಲೆಗಳು ಹತ್ತು ಗ್ರಾಂಗೆ 1,160 ರೂಗಳಿಗೆ ಇಳಿದಿದೆ. ಯುಎಸ್ ಮತ್ತು ಇರಾನ್ ಮಾತುಕತೆಯ ಸುಗಂಧದ ಮಧ್ಯೆ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಬೆಲೆಗಳು ಇನ್ನೂ ಕಡಿಮೆಯಾಗಲಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.


ಕಳೆದ ಏಳು ವರ್ಷಗಳಲ್ಲಿ ಚಿನ್ನದ ಬೆಲೆ ಅತ್ಯುನ್ನತ ಮಟ್ಟವನ್ನು ತಲುಪಿತ್ತು ಎಂಬುದು ಗಮನಾರ್ಹ. ಯುದ್ಧದ ಭಯದಿಂದಾಗಿ, ಚಿನ್ನ ಮತ್ತು ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಜನವರಿ 1 ರಿಂದ ಜನವರಿ 8 ರವರೆಗೆ ಪ್ರತಿದಿನ 400-900 ರೂಪಾಯಿಗಳ ಬೆಲೆ ಏರಿಕೆ ಕಂಡುಬಂದಿದ್ದು, ಇದು ಸಂಪೂರ್ಣವಾಗಿ ಅಸ್ವಾಭಾವಿಕವಾಗಿದೆ. ವಿಶ್ವದ ಅತಿದೊಡ್ಡ ಚಿನ್ನದ ಇಟಿಎಫ್ ನಿಧಿಯಾದ ಎಸ್‌ಪಿಡಿಆರ್‌ನ ಹೋಲ್ಡಿಂಗ್ಸ್ ಸಹ ಮಾರಾಟವನ್ನು ಪ್ರಾರಂಭಿಸಿದೆ. ಅದಕ್ಕಾಗಿಯೇ ಚಿನ್ನದ ಬೆಲೆ ಕುಸಿಯಬಹುದು ಎಂದು ನಂಬಲಾಗಿದೆ. 2020 ರ ಮೊದಲ 10 ದಿನಗಳಲ್ಲಿ ಚಿನ್ನದ ಬೆಲೆ ಶೇ 5.5 ರಷ್ಟು ಏರಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂಗೆ 42,000 ರೂ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 7 ವರ್ಷಗಳ ನಂತರ, ಚಿನ್ನದ ದಾಖಲೆಯ ಏರಿಕೆ ಕಂಡುಬಂದಿದೆ.