ಅರೆ ವಾಹ್...! Gold ಬೆಲೆಯಲ್ಲಿ ರೂ.6000 ಇಳಿಕೆ.. ಇಲ್ಲಿದೆ ಇಂದಿನ ಫ್ರೆಶ್ ಬೆಲೆ
ಹಬ್ಬಗಳ ಸೀಸನ್ ಆರಂಭಗೊಂಡಿದೆ. ಈ ಸೀಸನ್ ನಲ್ಲಿ ಒಂದು ವೇಳೆ ನೀವು ಚಿನ್ನ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಕಳೆದ ಕೆಲ ದಿನಗಳಿಂದ ಗಗನಮುಖಿಯಾಗಿದ್ದ ಚಿನ್ನದ ಬೆಲೆಯಲ್ಲಿ 6000 ರೂ. ಇಳಿಕೆಯಾಗಿದೆ. ಇಂದು ಆರಂಭಿಕ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ದೇಸಿ ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ ಆರಂಭಿಕ ವಹಿವಾಟಿನಲ್ಲಿ ರೂ.1500 ಇಳಿಕೆ ಕಂಡುಬಂದಿದೆ.
ನವದೆಹಲಿ: ಹಬ್ಬಗಳ ಸೀಸನ್ ಆರಂಭಗೊಂಡಿದೆ. ಈ ಸೀಸನ್ ನಲ್ಲಿ ಒಂದು ವೇಳೆ ನೀವು ಚಿನ್ನ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಕಳೆದ ಕೆಲ ದಿನಗಳಿಂದ ಗಗನಮುಖಿಯಾಗಿದ್ದ ಚಿನ್ನದ ಬೆಲೆಯಲ್ಲಿ 6000 ರೂ. ಇಳಿಕೆಯಾಗಿದೆ. ಇಂದು ಆರಂಭಿಕ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ದೇಸಿ ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ ಆರಂಭಿಕ ವಹಿವಾಟಿನಲ್ಲಿ ರೂ.1500 ಇಳಿಕೆ ಕಂಡುಬಂದಿದೆ. ಕೆಲ ದಿನಗಳ ಹಿಂದೆ 10 ಗ್ರಾಂ ಚಿನ್ನದ ಬೆಲೆ ರೂ.56 ಸಾವಿರಕ್ಕೆ ತಲುಪಿತ್ತು. ಆದರೆ, ಇಂದು ಈ ಬೆಲೆಯಲ್ಲಿ ಭಾರಿ ಇಳಿಕೆಯಾಗಿ ಚಿನ್ನದ ಬೆಲೆ ಪ್ರತಿ 10 ಗ್ರಾಂ.ಗೆ 50,000 ಕ್ಕೆ ತಲುಪಿದೆ.
ನಿನ್ನೆ, ಚಿನ್ನದ ಬೆಲೆಯಲ್ಲಿ ಶೇ. 5 ರಷ್ಟು ಇಳಿಕೆ ಕಂಡುಬಂದಿತ್ತು. ಇಂದೂ ಕೂಡ ಮತ್ತೆ ಚಿನ್ನದ ಬೆಲೆ ಶೇ.2.5 ರಷ್ಟು ಕುಸಿದಿದೆ. ಬೆಳ್ಳಿ ಕೂಡ ಕೆಜಿಗೆ 4000 ರೂ.ಗಳ ಕುಸಿತದೊಂದಿಗೆ ತನ್ನ ವಹಿವಾಟು ಆರಂಭಿಸಿದೆ. ಈ ಕಾರಣದಿಂದಾಗಿ (Silver Price Today) ಬೆಲೆಗಳು ಪ್ರತಿ ಕೆ.ಜಿ.ಗೆ 63,000 ರೂ. ತಲುಪಿದೆ. ಇದಕ್ಕೂ ಮುನ್ನ ಬೆಳ್ಳಿ ದಾಖಲೆಯ ಗರಿಷ್ಠ 76,000 ರೂ.ಗೆ ತಲುಪಿತ್ತು ಬೆಳ್ಳಿ ಮಂಗಳವಾರ ಶೇ 12 ರಷ್ಟು ಕುಸಿತ ದಾಖಲಿಸಿದೆ.
ಬುಲಿಯನ್ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ
ಮಂಗಳವಾರ, ದೇಶಾದ್ಯಂತ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸೋಮವಾರಕ್ಕೆ ಹೋಲಿಸಿದರೆ ಸುಮಾರು 1,564 ರೂ.ಗಳಷ್ಟು ಕಡಿಮೆಯಾಗಿದೆ.ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಸ್ಪಾಟ್ ಬೆಲೆ ಮಂಗಳವಾರ 10 ಗ್ರಾಂಗೆ 1564 ರೂ.ನಷ್ಟು ಕುಸಿತ ಕಂಡು, 53951 ರೂ.ಗೆ ಇಳಿದಿದೆ. ಇದೇ ವೇಳೆ , ಬೆಳ್ಳಿಯ ಸ್ಪಾಟ್ ಬೆಲೆ ಪ್ರತಿ ಕೆ.ಜಿ.ಗೆ 2,397 ರೂ.ಗಳಷ್ಟು ಇಳಿಕೆ ಕಂಡು 71,211 ರೂ.ಗೆ ತಲುಪಿದೆ. ಆಗಸ್ಟ್ 11, 2020 ರಂದು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್ ವೆಬ್‌ಸೈಟ್ (ibjarates.com) ಪ್ರಕಾರ, ದೇಶಾದ್ಯಂತ ಬುಲಿಯನ್ ಮಾರುಕಟ್ಟೆಗಳು 24 ಕ್ಯಾರೆಟ್ ಚಿನ್ನವನ್ನು 53951 ರೂ.ಗೆ ಮಾರಾಟ ಮಾಡುತ್ತಿದ್ದರೆ, 22 ಕ್ಯಾರೆಟ್ ಚಿನ್ನವು 10 ಗ್ರಾಂಗೆ 49419 ರೂ. ಇದೆ.