Rama Mandir Golden door: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಲಲ್ಲಾ ಮಂದಿರದ ಚಿನ್ನದ ಬಾಗಿಲುಗಳ ಮೊದಲ ಫೋಟೋ ವೈರಲ್ ಆಗಿದೆ. ಈ ಬಾಗಿಲು ಸುಮಾರು 12 ಅಡಿ ಎತ್ತರ ಮತ್ತು ಎಂಟು ಅಡಿ ಅಗಲವಿದೆ. ಮುಂದಿನ ಮೂರು ದಿನಗಳಲ್ಲಿ ಇನ್ನೂ 13 ಬಾಗಿಲುಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಅಂದಹಾಗೆ ಗರ್ಭಗುಡಿಯ ಮೇಲಿನ ಮಹಡಿಯಲ್ಲಿ ಈ ಬಾಗಿಲುಗಳನ್ನು ಅಳವಡಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 2 ಇನ್ನಿಂಗ್ಸ್, 10 ವಿಕೆಟ್ ಉಡೀಸ್…26ರ ಹರೆಯದ ಈ ಸ್ಟಾರ್ ಸ್ಪಿನ್ ಬೌಲರ್ ಮೋಡಿಗೆ ಇತಿಹಾಸವೇ ಸೃಷ್ಟಿ


ಗರ್ಭಗುಡಿಯಲ್ಲಿ ಒಂದೇ ಬಾಗಿಲು ಇರುತ್ತದೆ. ಆ ಬಾಗಿಲಿನ ಚೌಕಟ್ಟಿನ ಮೇಲೆ ಮಲಗಿರುವ ಭಂಗಿಯಲ್ಲಿರುವ ವಿಷ್ಣುವಿನ ಚಿತ್ರವನ್ನು ಕೆತ್ತಲಾಗಿದೆ. ರಾಮ ಮಂದಿರದಲ್ಲಿ ಒಟ್ಟು 46 ಬಾಗಿಲುಗಳನ್ನು ಅಳವಡಿಸಲಾಗಿದ್ದು, ಈ ಪೈಕಿ 42 ಬಾಗಿಲುಗಳಿಗೆ 100 ಕೆಜಿ ಚಿನ್ನದ ಲೇಪನ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: ಫಿನಾಲೆಗೆ ದಿನಗಣನೆ ಇರುವಾಗಲೇ ಖ್ಯಾತ ನಟ-ನಟಿ Bigg Boss ಮನೆಗೆ ಎಂಟ್ರಿ! ಇದು ವೈಲ್ಡ್ ಕಾರ್ಡ್??


ರಾಮಮಂದಿರದ ನೆಲ ಅಂತಸ್ತಿನ ಎಲ್ಲಾ 14 ಬಾಗಿಲುಗಳಿಗೆ ಚಿನ್ನದಿಂದ ಹೊದಿಸಲಾಗಿದೆ. ಈ ಬಾಗಿಲುಗಳನ್ನು ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ. ಇನ್ನು ಮೆಟ್ಟಿಲುಗಳ ಬಳಿ ನಾಲ್ಕು ಬಾಗಿಲುಗಳಿದ್ದು, ಅವುಗಳ ಮೇಲೆ ಚಿನ್ನದ ಲೇಪನ ಇರುವುದಿಲ್ಲ. ಈ ಬಾಗಿಲುಗಳನ್ನು ಮಹಾರಾಷ್ಟ್ರದಿಂದ ತಂದ ತೇಗದ ಮರದಿಂದ ಮಾಡಲಾಗಿದ್ದು, ಹೈದರಾಬಾದ್‌’ನ ಕುಶಲಕರ್ಮಿಗಳು ಕೆತ್ತನೆ ಕೆಲಸ ಮಾಡಿದ್ದಾರೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ