ಡನ್ ಮತ್ತು ಬ್ರಾಡ್‌ಸ್ಟ್ರೀಟ್‌ನ ವರದಿಯ ಪ್ರಕಾರ, ಕೊರೊನಾ ವೈರಸ್ ಏಕಾಏಕಿ ಭಾರತದ ಆರ್ಥಿಕತೆಯ ಚೇತರಿಕೆಗೆ ಕಾರಣವಾಗಬಹುದು ಎಂದು ಹೇಳಿದ್ದು, ಇದು ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸುತ್ತದೆ ಮತ್ತು ಕಂಪನಿಗಳ ಮೇಲೆ ಹಣದುಬ್ಬರ ಒತ್ತಡ ಹೆಚ್ಚಿಸುತ್ತದೆ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಹೆಚ್ಚಿನ ಹಣದುಬ್ಬರ ಒತ್ತಡ, ದುರ್ಬಲ ಬೇಡಿಕೆಯ ಪರಿಸ್ಥಿತಿ ಹಾಗೂ ಭೌಗೋಳಿಕ ರಾಜಕೀಯ ಸಮಸ್ಯೆಗಳೊಂದಿಗೆ ಕೈಗಾರಿಕಾ ಉತ್ಪಾದನಾ ಸೂಚ್ಯಂಕವನ್ನು (ಐಐಪಿ) ಇದು ನಿಗ್ರಹಿಸುವ ಸಾಧ್ಯತೆಯಿದೆ ಎಂದು ಡನ್ ಮತ್ತು ಬ್ರಾಡ್‌ಸ್ಟ್ರೀಟ್ ಹೇಳಿದೆ. 2020 ರ ಜನವರಿಯಲ್ಲಿ ಐಐಪಿ 0.1–0.5 ಶೇಕಡಾ ವ್ಯಾಪ್ತಿಯಲ್ಲಿ ಇರಲಿದೆ ಎಂದು  ಈ ಸಂಶೋಧನಾ ಸಂಸ್ಥೆ ನಿರೀಕ್ಷೆ ವ್ಯಕ್ತಪಡಿಸಿದೆ.


ಗುರುವಾರ ಎಕಾನಾಮಿ ಆಬ್ಸರ್ವರ್ ನೀಡಿರುವ ಒಂದು ವರದಿಯ ಪ್ರಕಾರ ಭಾರತೀಯ ಆರ್ಥಿಕತೆಯಲ್ಲಿ ಚೇತರಿಕೆಯ ಲಕ್ಷಣಗಳು ಕಂಡು ಬಂದಿದ್ದು, ಅದರಲ್ಲೂ ವಿಶೇಷವಾಗಿ  India Inc. ಆಶಾವಾದದ ಮಟ್ಟದಲ್ಲಿ ಚೇತರಿಸಿಕೊಳ್ಳುವ ಹಸಿರು ಲಕ್ಷಣಗಳು ಕಂಡು ಬಂದಿವೆ ಎಂದಿದೆ. ಆದರೆ, ಕೆಲ ಗಂಭೀರ ಕಾಳಜಿಗಳ ಹಿನ್ನೆಲೆ ಈ ಚೇತರಿಕೆಯ ಪ್ರಕ್ರಿಯೆಯ ಆರಂಭ ವಿಳಂಬವಾಗುವ ಸಾಧ್ಯತೆ ಇದೆ ಎಂದೂ ಸಹ ವರದಿ ಹೇಳಿದೆ.


ಒಂದು ವೇಳೆ ಈ ಸೋಂಕು ಪಸರಿಸುವ ಅವಧಿಯಲ್ಲಿ ಹೆಚ್ಚಳವಾದರೆ ಇದು ಕಂಪನಿಗಳ ಉತ್ಪಾದನಾ ಸಾಮರ್ಥ್ಯದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿರುವ ವರದಿ, ಕಂಪನಿಗಳ ಪೂರೈಕೆಯ ಸರಪಳಿ ಸಾಮಾನ್ಯ ಸ್ಥಿತಿಗೆ ಮರಳಲು ದೀರ್ಘಕಾಲ ಬೇಕಾಗಲಿದೆ ಎಂದು ಹೇಳಿದೆ.


"ಕೊರೊನಾವೈರಸ್ ಏಕಾಏಕಿ ವ್ಯಾಪಾರ, ವಾಣಿಜ್ಯ ಹಾಗೂ ಜಾಗತಿಕ ಪೂರೈಕೆ ಸರಪಳಿಗೆ ನೇರ ಮತ್ತು ಪರೋಕ್ಷ ಸಂಪರ್ಕಗಳ ಮೂಲಕ ಭಾರತೀಯ ಕಂಪನಿಗಳ ಮೇಲೆ ಪರಿಣಾಮ ಬೀರಬಹುದು" ಎಂದು ಡನ್ ಮತ್ತು ಬ್ರಾಡ್‌ಸ್ಟ್ರೀಟ್ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞ ಅರುಣ್ ಸಿಂಗ್ ಹೇಳಿದ್ದಾರೆ.


ವಿಶ್ವದ ಎರಡನೇ ಅತಿದೊಡ್ಡ ಅರ್ಥಿಕತೆಯಾಗಿರುವ ಚೀನಾದ ಹೆಚ್ಚಿನ ಭಾಗವನ್ನು ಈ ಸೋಂಕು ಪ್ರಭಾವಿತಗೊಳಿಸಿದ್ದು, ಚೀನಾ ಮಾರುಕಟ್ಟೆ ಬಹುತೇಕ ಸ್ಥಗಿತಗೊಂಡಿದೆ. ಅಷ್ಟೇ ಅಲ್ಲ ಈ ಸೋಂಕು ವಿಶ್ವದ ಇತರೆ ಜಾಗತಿಕ ಮಾರುಕಟ್ಟೆಗಳ ಮೇಲೆ ಹಾಗೂ ಕಂಪನಿಗಳ ಮೇಲೆ ಇದೀಗ ತನ್ನ ಪ್ರಭಾವ ಬೀರಲು ಆರಂಭಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪರಿಸ್ಥಿತಿ ಇದೆ ರೀತಿ ಮುಂದುವರೆದರೆ ಕಚ್ಚಾ ಸಾಮಗ್ರಿಗಳ ಕೊರತೆ ಉಂಟಾಗಬಹುದು ಎಂದು ವರದಿಯನ್ನು ಪುಷ್ಟಿಕರಿಸಿದ್ದಾರೆ.